ಮೈಸೂರಲ್ಲಿ ಬಲೂನ್​ಗೆ ತುಂಬುವ ಹೀಲಿಯಂ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಐವರಿಗೆ ಗಾಯ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-
ಮೈಸೂರು: -ಇಲ್ಲಿನ ವಿಶ್ವವಿಖ್ಯಾತ ಅರಮನೆ ಬಳಿ ಬಲೂನ್​ಗೆ ತುಂಬುವ ಹೀಲಿಯಂ ಅನಿಲ್ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಓರ್ವ ಸಾವನ್ನಪ್ಪಿ, ಐವರು ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ವಿಶ್ವ ವಿಖ್ಯಾತ ಮೈಸೂರು ಅರಮನೆಯ ಬಳಿ ಜಯಮಾರ್ತಾಂಡ ದ್ವಾರದ ಬಳಿ ಈ ಘಟನೆ ನಡೆದಿದೆ. ಬಲೂನ್​ಗೆ ಬಳಸುವ ಹೀಲಿಯಂ ಗ್ಯಾಸ್​​ನ ಸಿಲಿಂಡರ್​ ಸ್ಫೋಟಗೊಂಡಿದೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಐವರಲ್ಲಿ ಇಬ್ಬರು ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕೂಡಲೇ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸಲೀಂ ಖಮರುದ್ದೀನ್ (40) ಮೃತ ವ್ಯಕ್ತಿ.

ಘಟನೆ ನಡೆದಿದ್ದು ಹೇಗೆ: ಬಲೂನ್​ಗಳಿಗೆ ಹೀಲಿಯಂ ಗ್ಯಾಸ್ ತುಂಬಿಸುವಾಗ ಏಕಾಏಕಿ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು ದೌಡಾಯಿಸಿ, ಪರಿಶೀಲನೆ ನಡೆಸಿದರು. ಗಾಯಗೊಂಡಿರುವ ಐದು ಜನರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ಈ ಘಟನೆಯಿಂದ ಬೆಚ್ಚಿಬಿದ್ದಿದೆ.

ನಗರ ಪೊಲೀಸ್​ ಆಯುಕ್ತರ ಹೇಳಿದ್ದೇನು: ಈ ಘಟನೆ ಕುರಿತಂತೆ ಮೈಸೂರು ಮಹಾನಗರ ಪೊಲೀಸ್​ ಆಯುಕ್ತರಾದ ಸೀಮಾ ಲಾಟ್ಕರ್​ ಅವರು ಪ್ರತಿಕ್ರಿಯಿಸಿದ್ದು, ”ಸೈಕಲ್​ನಲ್ಲಿ ವ್ಯಕ್ತಿಯೊಬ್ಬರು ಬಲೂನ್​ ಮಾರುತ್ತಿದ್ದರು. ಈ ವೇಳೆ ಸಿಲಿಂಡರ್​ ಬ್ಲಾಸ್ಟ್​ ಆಗಿದೆ. ಇದರಿಂದ ಬಲೂನ್​ ಮಾರುತ್ತಿದ್ದ ವ್ಯಕ್ತಿಯ ಡೆತ್​ ಆಗಿದೆ. ಮತ್ತೆ ಮುಂದೆ ಹೋಗ್ತಾ ಇದ್ದವರು ಸೇರಿದಂತೆ ಜನಕ್ಕೆ ಗಾಯವಾಗಿದೆ. ಅವರ ವಿಚಾರಣೆ ಮಾಡ್ತೇವೆ. ಗಾಯಾಳುಗಳ ಹೆಸರು ಸಿಕ್ಕಿದೆ. ಒಬ್ಬರು ನಂಜನಗೂಡಿನಿಂದ ಬಂದವರು, ಒಬ್ಬರು ಬೆಂಗಳೂರಿನಿಂದ ಬಂದವರು, ಮೂರು ಜನ ಸ್ಥಳೀಯರು ಅಂತಾ ಹೇಳ್ತಾ ಇದಾರೆ. ಆದ್ರೆ ಅವರಿನ್ನೂ ಮಾತನಾಡಿಲ್ಲ. ಮಾತನಾಡಿದ ಬಳಿಕ ಅವರಿದ ತಿಳಿದುಕೊಳ್ಳಲಾಗುವುದು ಎಂದು ಹೇಳಿದರು.

ಗಾಯಾಳುಗಳನ್ನು ಲಕ್ಷ್ಮಿ ಅಂತಾ ಬೆಂಗಳೂರಿನವರು, ಮಂಜುಳಾ ನಂಜನಗೂಡುನವರು, ಇನ್ನೊಬ್ಬರು ಕೊಟ್ರೇಶಿ ಅಂತಾ ಹೇಳಿ, ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು ಅಂತಾ ಹೇಳ್ತಾರೆ. ಇನ್ನೋರ್ವ ಮಹಿಳೆ ಶಹಿನಾ ಅಂತಾ ಗೊತ್ತಾಗಿದೆ. ಮೃತನನ್ನು ಬಲೂನ್ ಸುಮಾರು 40 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸರ ಪ್ರಕಟಣೆ ಪ್ರಕಾರ, ಅರಮನೆ ಬಳಿ ಹೀಲಿಯಂ ಬಲೂನ್​ ಗೆ ಸಂಬಂಧಿಸಿದ ಸಿಲಿಂಡರ್​ ಸ್ಫೋಟವಾಗಿದೆ. ಜಯಮಾರ್ತಾಂಡ ಗೇಟ್​ ಮುಂಭಾಗದಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿದೆ. ಈ ವೇಳೆ ಬಲೂನ್​ ಮಾರಾಟಗಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನ ಗುರುತು ಪತ್ತೆ ಮಾಡಬೇಕಿದೆ.

Share This Article
Leave a Comment