ಅಪರ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ : ಮೈಸೂರಿನಲ್ಲಿ ಸುಲಲಿತವಾಗಿ ನಡೆದ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ.

latha prabhukumar
1 Min Read

ಪಬ್ಲಕ್ ಅಲರ್ಟ್ ನ್ಯೂಸ್:-ಅಪರ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ : ಮೈಸೂರಿನಲ್ಲಿ ಸುಲಲಿತವಾಗಿ ನಡೆದ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ.

ದಿನಾಂಕಃ 11.01.2026 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ಮೈಸೂರು ನಗರದ 25 ಪರೀಕ್ಷಾ ಕೇಂದ್ರಗಳಲ್ಲಿ ಬಿಡಿಎ, ತಾಂತ್ರಿಕ ಶಿಕ್ಷಣ ಇಲಾಖೆ, RGUHS, BWSSB, KKRTC, KSDL, KSSIDC ಮುಂತಾದ ಇಲಾಖೆ / ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಯ (GK-1) ಸಾಮಾನ್ಯ ಪತ್ರಿಕೆ-1 ಬರೆಯಲು ಒಟ್ಟು 10712 ಅಭ್ಯರ್ಥಿಗಳು ಮತ್ತು (KEC1) ಪತ್ರಿಕೆ-2 ಬರೆಯಲು ಒಟ್ಟು 10604 ನೋಂದಣಿ ಮಾಡಿಕೊಂಡಿರುತ್ತಾರೆ,

ಸದರಿ ಪರೀಕ್ಷೆಯು ಬೆಳಿಗ್ಗೆ 10.30 ರಿಂದ 12.30 ಗಂಟೆಯವರೆಗೆ ಮತ್ತು ಮಧ್ಯಾಹ್ನ 02.30 ಗಂಟೆಯಿಂದ 4.30 ಗಂಟೆಯವರೆಗೆ ನಡೆಯಿತು. ಅಪರ ಜಿಲ್ಲಾಧಿಕಾರಿಗಳಾದ ಡಾ.ಪಿ.ಶಿವರಾಜುರವರು Teresian PU College, Mysuru ಇಲ್ಲಿಗೆ ಭೇಟಿ ನೀಡಿ ಪರೀಕ್ಷೆ ಸುಲಲಿತವಾಗಿ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿದರು. ಪ್ರಾಂಶುಪಾಲರು ಹಾಗೂ ವೀಕ್ಷಕರು ಹಾಜರಿದ್ದರು ಮತ್ತು ಬೆಳಗಿನ ಅಧಿವೇಶನದ ಪತ್ರಿಕೆ -1 ನ್ನು ಬರೆಯಲು 7856 ಅಭ್ಯರ್ಥಿಗಳು ಹಾಜರಾಗಿರುತ್ತಾರೆ
ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ, ಮೈಸೂರು ನಗರದಲ್ಲಿ ಪರೀಕ್ಷೆಯನ್ನು ಯಾವುದೇ ತೊಂದರೆ ಇಲ್ಲದಂತೆ ಸುಲಲಿತವಾಗಿ ನಡೆಸಲಾಗಿದೆ.

Share This Article
Leave a Comment