ಉತ್ತಮ ಕೃಷಿಗಾಗಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ: ಡಾ. ವಿಷ್ಣವರ್ಧನ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಉತ್ತಮ ಕೃಷಿಗಾಗಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ: ಡಾ. ವಿಷ್ಣವರ್ಧನ

ಮೈಸೂರು,ಜ.12(ಕರ್ನಾಟಕ ವಾರ್ತೆ):- :
ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಮುಂದಿನ ಪೀಳಿಗೆಗೆ ಉತ್ತಮ ಕೃಷಿ ಭೂಮಿ ಹಾಗೂ ಉತ್ತಮ ಪರಿಸರವನ್ನು ನೀಡಬಹುದು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿಷ್ಣವರ್ಧನ ಅವರು ಅಭಿಪ್ರಾಯಪಟ್ಟರು.

ಅವರು ಇಂದು ನಡೆದ ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಮಹಾವಿದ್ಯಾನಿಲಯ ಮತ್ತು ಆಕಾಶವಾಣಿ ವತಿಯಿಂದ ಡಾ. ಎಂ. ಹೆಚ್. ಮರೀಗೌಡ ಸಭಾಂಗಣ, ಕರ್ಜನ್ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ “ಹಣ್ಣು-ಹೊನ್ನು ” ಬಾನುಲಿ ಸರಣಿಯಲ್ಲಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಭೂಮಿಯನ್ನು ಬೇರೆ ಬೇರೆ ಉದ್ಯಮಗಳಿಗೆ ಅತಿಯಾಗಿ ಬಳಸಿಕೊಳ್ಳುತ್ತಿದ್ದು ಪ್ರತಿ ವರ್ಷ ವು ಕೃಷಿ ಭೂಮಿ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇಂದಿನ ಯುವಕರು ಕೃಷಿ ಭೂಮಿ ಇದ್ದರು ಪಟ್ಟಣದ ಕಡೆಗೆ ಮುಖಮಾಡಿದ್ದಾರೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಅತೀ ಹೆಚ್ಚು ತೋಟಗಾರಿಕೆಯಲ್ಲಿ ತೆಂಗು ಬೆಳೆಯನ್ನು ಬೆಳೆಯಲು ಮುಂದಾಗಿದೆ. ಇದೇ ರೀತಿ ತೋಟಗಾರಿಕೆಯಲ್ಲಿ ಲಾಭದಾಯಕವಾದ ಹಲವಾರು ಬೆಳೆಗಳಿವೆ ರೈತರು ತೋಟಗಾರಿಕೆ ಬೆಳವಣಿಗೆಯನ್ನು ಹೆಚ್ಚು ಮಾಡಬೇಕು.ಮಿಶ್ರ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆದ ಡಾ. ಹಂಚಿನಮನಿ ಅವರು ಮಾತನಾಡಿ ವಿದೇಶಗಳಲ್ಲಿ ಬೆಳೆಯಲಾಗದ ಹಲವು ಕೃಷಿ ಉತ್ಪನ್ನ ಗಳನ್ನು ಭಾರದಲ್ಲಿ ಬೆಳೆಯಬಹುದು. ಭಾರತದಲ್ಲಿ ವೈವಿಧ್ಯಮ ಕೃಷಿ ಉತ್ಪನ್ನಗಳನ್ನು ಬೆಳೆಯುವ ದೇಶ. ವಿದೇಶದ ಮಾರುಕಟ್ಟೆಗಳಲ್ಲಿ ಭಾರತದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇರುತ್ತದೆ. ಹೊರ ದೇಶಕ್ಕೆ ರಫ್ತು ಮಾಡುವ ಗುಣಮಟ್ಟವಿರುವ ಬೆಳೆಗಳನ್ನು ಬೆಳೆಯಿರಿ.
ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಭಾರತದಲ್ಲಿ ವೈವಿಧ್ಯಮಯವಾದಂತ ಕೃಷಿ ಉತ್ಪನ್ನ ಗಳನ್ನು ಬೆಳೆಯಲಾಗುತ್ತಿದೆ. ರೈತರು ಬೇಡಿಕೆ ಇರುವ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಿ ಸಂರಕ್ಷಿಸುವ ಕಡೆ ಚಿಂತಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ್ ಅಂಗಡಿ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರು ಎನ್. ಕೇಶವಮೂರ್ತಿ ಹಾಗೂ ರೈತರು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment