ಜನವರಿ 15 ರಿಂದ ಆರು ದಿನಗಳ ಕಾಲ ಐತಿಹಾಸಿಕ ಸುತ್ತೂರು ಜಾತ್ರೆಗೆ ಸಿದ್ದತೆ : ಧಾರ್ಮಿಕ, ಸಂಸ್ಕೃತಿಕ ಸಂಭ್ರಮಕ್ಕೆ ಕ್ಷಣಗಣನೆ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ನಂಜನಗೂಡು: ‘ಹತ್ತೂರ ಜಾತ್ರೆಗೆ ಸುತ್ತೂರು ಜಾತ್ರೆ’ ಸಮ ಎಂಬ ನಾಣ್ಣುಡಿಯಂತೆ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಪುಷ್ಯ ಬಹುಳ ದ್ವಾದಶಿಯಂದು ಪ್ರಾರಂಭಗೊಂಡು ಮಾಘ ಶುದ್ಧ ಬಿದಿಗೆಯವರೆಗೆ ಆರು ದಿನಗಳ ಕಾಲ ಅಂದರೆ ಜನವರಿ 15ರಿಂದ 20ರವರೆಗೆ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಸಡಗರ ಸಂಭ್ರಮದಿಂದ ನೆರವೇರಲಿದೆ.

ಈ ಸಂಬಂಧ ಜೆಎಸ್‍ಎಸ್ ಮಠದ ಕಾರ್ಯದರ್ಶಿ ಮಂಜುನಾಥ್ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆರು ದಿನಗಳ ಕಾಲ ನಡೆಯಲಿರುವ ಜಾತ್ರೆ ವಿವರ ನೀಡಿದರು.

ಜನವರಿ 16ರಂದು ಸಾಮೂಹಿಕ ವಿವಾಹ ಮತ್ತು ಹಾಲರವಿ ಉತ್ಸವ 17ರಂದು ಶ್ರೀ ಆದಿ ಜಗದ್ಗುರುಗಳ ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವ 18ರಂದು ಶ್ರೀ ಮಾದೇಶ್ವರ ಸ್ವಾಮಿ ಕೊಂಡೋತ್ಸವ ಮತ್ತು ಲಕ್ಷದೀಪೆÇೀತ್ಸವ 19ರಂದು ತೆಪೆÇ್ಪೀತ್ಸವ 20ರಂದು ಅನ್ನ ಬ್ರಹ್ಮೋತ್ಸವ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ಜರಗಲಿವೆ ಎಂದರು

ಇನ್ನು ಜಾತ್ರೆಯಲ್ಲಿ ರಂಗೋಲಿ ಮತ್ತು ಸೋಬಾನೆ ಪದಗಳ ಸ್ಪರ್ಧೆಗಳು ಮಹಿಳೆಯರಿಗಾಗಿ ರಾಗಿ ಬೀಸುವ ಸ್ಪರ್ಧೆ, ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿಮೇಳ, ಕೃಷಿ ವಿಚಾರ ಸಂಕಿರಣ, ಚಿತ್ರಕಲಾ ಸ್ಪರ್ಧೆ, ಗಾಳಿಪಟಸ್ಪರ್ಧೆ, ಕಲಾವೈಭವ, ಕುಸ್ತಿ ಪಂದ್ಯಾವಳಿ, ಗ್ರಾಮೀಣ ಜನತೆಗಾಗಿ ವಿವಿಧ ಬಗೆಯ ದೇಶಿ ಆಟಗಳು, 55ನೇ ದನಗಳ ಪರಿಶೆ, ತೆಪೆÇ್ಪೀತ್ಸವ ಸೇರಿದಂತೆ ನೂರಾರು ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಕೃಷಿ ಮೇಳದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಕೃಷಿ ಕ್ಷೇತ್ರದಲ್ಲಿನ ಪ್ರಮುಖ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಲು ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳನ್ನು ಹಮ್ಮಿಕೊಳ್ಳಲಾಗಿದೆ 2026 ಅಂತರ ರಾಷ್ಟ್ರೀಯ ರೈತ ಮಹಿಳಾ ವರ್ಷ ಎಂದು ಘೋಷಣೆ ಮಾಡಿರುವುದರ ಪ್ರಯುಕ್ತ ಮುಂದಿನ ಪೀಳಿಗೆಯ ಕೃಷಿಯಲ್ಲಿ ಮಹಿಳೆಯ ಪಾತ್ರ ಶೀರ್ಷಿಕೆಯಡಿ ಈ ವರ್ಷ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ. ಮೈಸೂರಿನ ಪ್ರಾದೇಶಿಕ ಬೆಳೆಗಳಾದ ನಂಜನಗೂಡು ರಸಬಾಳೆ ಮೈಸೂರು ವೀಳ್ಯದೆಲೆ , ಮೈಸೂರು ಮಲ್ಲಿಗೆ ಹಾಗೂ ವೀರನ ಗೆರೆ ಬದನೆ ಬೆಳೆಗಳ ಪ್ರಾತ್ಯಕ್ಷತೆಯನ್ನು ಸಹ ಹಮ್ಮಿಕೊಳ್ಳಲಾಗಿದೆ.

ಅಲ್ಲದೆ ಒಂದು ಎಕರೆ ಪ್ರದೇಶದಲ್ಲಿ ಕೃಷಿ ಬ್ರಹ್ಮಾಂಡ ನೆರಳು ಮನೆಯಲ್ಲಿ ಹಲವಾರು ದೇಶೀ ಹಾಗೂ ವಿದೇಶಿ ತರಕಾರಿಗಳು ಏಕದಳ ದ್ವಿದಳ ಧಾನ್ಯಗಳು ಎಣ್ಣೆಕಾಳುಗಳು ವಾಣಿಜ್ಯ ಬೆಳೆಗಳು ಮೇವಿನ ಬೆಳೆಗಳು ವಿವಿಧ ಫಲ ಪುಷ್ಪಗಳು ತೋಟಗಾರಿಕೆ ಬೆಳೆಗಳು ರೇಷ್ಮೆ ಕೃಷಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಿ ಬೆಳೆದಿರುವ ಸುಮಾರು 300 ಬೆಳೆಗಳು ಹಾಗೂ ವಿವಿಧ ತಳಿಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಜನವರಿ 16 ಶುಕ್ರವಾರದಂದು ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಜಾತಿ ಮತ ಭೇದವಿಲ್ಲದೆ ಸರ್ವಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂತರ್ಜಾತಿ, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧು- ವರರು ಸಹ ಪಾಲ್ಗೊಳ್ಳಲಿದ್ದಾರೆ ಈಗಾಗಲೇ ನೂರಾರು ಜೋಡಿಗಳು ನೋಂದಣಿ ಮಾಡಿಕೊಂಡಿವೆ. ವಧುವಿಗೆ ಸೀರೆ ಕುಪ್ಪಸ ಮಾಂಗಲ್ಯ ಹಾಗೂ ಕಾಲುಂಗರಗಳನ್ನು ವರನಿಗೆ ಪಂಚೆ ವಲ್ಲಿ ಶರ್ಟ್‍ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.

Share This Article
Leave a Comment