ಪಬ್ಲಿಕ್ ಅಲರ್ಟ್ ನ್ಯೂಸ್:-
ಮೈಸೂರು : ಮೈಸೂರಿನ ಲಕ್ಷ್ಮೀಪುರದಲ್ಲಿ ಸಂತಸ ಫರ್ಟಿಲಿಟಿ ತನ್ನ ಅತ್ಯಾಧುನಿಕ ಹಾಗೂ ಸುಂದರ ಮೂಲಸೌಕರ್ಯದೊಂದಿಗೆ ಸ್ಟೆಮ್ ಸೆಲ್ ಆಧಾರಿತ ಮತ್ತು ಕೃತಕ ಬುದ್ಧಿಮತ್ತೆ (AI) ಚಾಲಿತ ನೂತನ ಫಲವತ್ತತಾ ಚಿಕಿತ್ಸೆಯನ್ನು ಅಧಿಕೃತವಾಗಿ ಆರಂಭಿಸುವ ಮೂಲಕ ವಿಸ್ತರಣಾ ಸಮಾರಂಭವನ್ನು ಆಯೋಜಿಸಿತು. ಸಂತಾನಾಪೇಕ್ಷೆಯಿರುವ ದಂಪತಿಗಳಿಗಾಗಿ ಡಿಸೆಂಬರ್ 30 ಮತ್ತು 31ರಂದು ಉಚಿತ ಫಲವತ್ತತಾ ಶಿಬಿರವನ್ನು ಸಹ ನಡೆಯಿತು.
ಮೈಸೂರು ಪ್ರದೇಶದಲ್ಲಿ ಫಲವತ್ತತಾ ಚಿಕಿತ್ಸೆಯ ಮುಂಚೂಣಿ ಸಂಸ್ಥೆಯಾಗಿರುವ ಸಂತಸ, ಮೂಲ ಚಿಕಿತ್ಸೆಯಿಂದ ಹಿಡಿದು ಸ್ಟೆಮ್ ಸೆಲ್ ಮತ್ತು ಎಕ್ಟೋಸೋಮ್ ಆಧಾರಿತ ಚಿಕಿತ್ಸೆಗಳು, ಅಂಡಾಶಯ ಪುನರುಜ್ಜಿವನ (ಒವೇರಿಯನ್ ರಿಜುವಿನೇಷನ್), ಅಂಡಾಣು ಸಂರಕ್ಷಣೆ (ಎಗ್ ಫ್ರೀಜಿಂಗ್), ಲೇಸರ್ ಸಹಾಯಕ ಬ್ಲಾಸ್ಟೋಸಿಸ್ಟ್ ಹ್ಯಾಚಿಂಗ್, ಹಾಗೂ ನೈತಿಕ ಮತ್ತು ಕಾನೂನುಬದ್ಧ ಸುರೋಗಸಿ ಸೇರಿದಂತೆ ಸಂಪೂರ್ಣ ಫಲವತ್ತತಾ ಸೇವೆಗಳನ್ನು ಒದಗಿಸುತ್ತಿದೆ ಎಂದು ಸಂತಸ ಸಂಸ್ಥಾಪಕ ನಿರ್ದೇಶಕಿ ಡಾ. ಸೌಮ್ಯ ದಿನೇಶ್ ಅವರು ತಿಳಿಸಿದರು. ಗರ್ಭದೊಳಗಿನ ಅಗ್ನಿಯೋಟಿಕ್ ದ್ರವ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಇಂಟ್ರಾ-ಅಮ್ಮಿಯೋಟಿಕ್ ಪ್ಲೇಟ್‌ಲೆಟ್ ರಿಚ್ ಫೈಬ್ರಿನ್ (PRF) ಬಳಸಿ ಜಗತ್ತಿನ ಮೊದಲ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವ ಮೂಲಕ ಸಂತಸ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜೊತೆಗೆ, ಆರ್ಥಿಕವಾಗಿ ಹಿಂದುಳಿದ ಸಂತಾನಹೀನ ದಂಪತಿಗಳಿಗೆ ನೆರವು ನೀಡುವ ದಾನಾತ್ಮಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯುತಿದೆ.
ಸಂತಸದ ಮುಖ್ಯ ಎಂಬ್ರಿಯೋಲಜಿಸ್ಟ್ ಡಾ. ಯೋಗಿತಾ ರಾವ್ ಅವರು ಮಾತನಾಡಿ, ಐವಿಎಫ್ ಚಿಕಿತ್ಸೆಯಲ್ಲಿ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಲು Al ಚಾಲಿತ ಆಂಡ್ರಾಲಜಿ ಮತ್ತು ಎಂಬ್ರಿಯೋಲಜಿ ಮಹತ್ವದ ಹೊಸ ಸಾಧನವಾಗಿದ್ದು ಮಾನವ ಕಣ್ಣಿಗೆ ಗೋಚರಿಸದ ಸೂಕ್ಷ್ಮ ಅಸಮಾನತೆಗಳು ಮತ್ತು ಮಾದರಿಗಳನ್ನು ಕೃತಕ ಬುದ್ದಿಮತ್ತೆಯ ಮೂಲಕ ಗುರುತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಸ್ತರಣಾ ಸಮಾರಂಭಕ್ಕೆ ಖ್ಯಾತ ಸಾಹಿತಿಯಾದ ಡಾ.ಲತಾ ರಾಜಶೇಖರ್, ಡಾ.ರಾಜಶೇಖರ್ ಎಚ್.ಬಿ ಬಿಜೆಪಿ ಮುಖಂಡರಾದ ಶ್ರೀಮತಿ ಹೇಮಾ ನಂದೀಶ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ನಾಗರಾಜ್ ಡಿಜಿ, ಶ್ರೀ ಕುಮಾರಸ್ವಾಮಿ, DHO ಡಾ.ಎಸ್.ಪಿ.ಯೋಗನ್, ಪ್ರೊ.ರಂಗಪ್ಪ ಕೆ.ಎಸ್, ಡಾ.ಜಾವೇದ್ ನಯೀಮ್, ಶ್ರೀ. ರಾಘವನ್ ರಘುಲಾಲ್,ಶ್ರೀ. ಮಡ್ಡಿಕೆರೆ ಗೋಪಾಲ್, ಪ್ರೊ.ಸಿ.ಪಿ.ಕೃಷ್ಣಕುಮಾರ್, ಶ್ರೀ. ತೋಂಟದಾರ್ಯ, ಮಾಜಿ ಎಂಎಲ್‌ಸಿ ಶ್ರೀ. ಎಂ.ಚಂದ್ರಶೇಖರ್ ಡಾ.ಸೀಮಾ ಎಸ್.ಜೆ ಸೇರಿದಂತೆ ನಗರದ ಗಣ್ಯ ವ್ಯಕ್ತಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಗೌರವವನ್ನು ಸಲ್ಲಿಸಿದರು.
