ಮಾವುತ” ಚಿತ್ರದ ಹಾಡು ಬಿಡುಗಡೆ ಮಾಡಿದ ಸಂಸದ ಯದುವೀರ ಒಡೆಯರ
ಮೈಸೂರು : ನಾಡಹಬ್ಬ ದಸರಾ ಎಂದೊಡನೆ ನಮ್ಮ ಕಣ್ಮುಂದೆ ಬರುವದು ಎಂಟುಬಾರಿ ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿಯ ಮೇಲೆ ಹೊತ್ತು ಮೆರೆಸಿದ ಅರ್ಜುನ. ಇಂದು ಅರ್ಜುನ ನಮ್ಮ ಕಣ್ಮುಂದೆ ಇಲ್ಲದಿದ್ದರೂ ಆತನ ಸವಿ ನೆನಪಿನಲ್ಲಿ ಚಿತ್ರೀಕರಣಗೊಂಡ ಎಸ್ ಡಿ ಆರ್ ಪ್ರೊಡಕ್ಷನ್ ಅವರ ದ್ವಿತೀಯ ಚಿತ್ರ “ಮಾವುತ” ಚಿತ್ರದ ಅರ್ಜುನನ ಹುಟ್ಟುಹಬ್ಬದ ಹಾಡಿನಲ್ಲಿ ಆತನನ್ನು ಜೀವಂತವಾಗಿರಿಸುವ ಪುಟ್ಟ ಪ್ರಯತ್ನವನ್ನು ಚಿತ್ರ ತಂಡ ಮಾಡಿದೆ. ಅರ್ಜುನನ ಸಮಾದಿಯ ಮುಂದೆ ಆತನ ಪ್ರಿಯ ಮಾವುತನಾದ “ವಿನು” ಹಾಗೂ ಮೈಸೂರಿನ ಅರಸು ಹಾಗೂ ಸಂಸದರು ಆಗಿರುವ ಯದುವೀರ ಒಡೆಯರ್ ಅವರ ಅಮೃತ ಹಸ್ತದಿಂದ ಹೊಸವರ್ಷದ ಆರಂಭದಲ್ಲಿ “ಗಂಧದ ಗುಡಿಯಲ್ಲಿ ಜನ್ಮೋತ್ಸವ” ಅರ್ಜುನನ ಹಾಡಿಗೆ ಚಾಲನೆ ನೀಡಲಾಯಿತು.
ಮಾವುತ” ಚಿತ್ರದ ಹಾಡು ಬಿಡುಗಡೆ ಮಾಡಿದ ಸಂಸದ ಯದುವೀರ ಒಡೆಯರ
Leave a Comment
Leave a Comment
