ಜೆಎಸ್‌ಎಸ್ ವಿವಿಯಲ್ಲಿ ಎಲೆಕ್ಟ್ರಿಕ್ ಅಂಡ್ ಗ್ರೀನ್ ಎನರ್ಜಿ ಅಂತಾರಾಷ್ಟ್ರೀಯ ಸಮ್ಮೇಳನ

Chethan
3 Min Read

ಪಬ್ಲಿಕ್ ಅಲರ್ಟ್

ಮೈಸೂರು: ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಜೆಎಸ್‌ಎಸ್ ತಾಂತ್ರಿಕ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಎಮರ್ಜಿ ಟೆಕ್ನಾಲಜೀಸ್ ಇನ್ ಎಲೆಕ್ಟ್ರಿಕ್ಸ್ ಅಂಡ್ ಗ್ರೀನ್ ಎನರ್ಜಿ – 2025 ಅಂತರರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಯಿತು.

ಈ ಸಮ್ಮೇಳನವನ್ನು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ತಾಂತ್ರಿಕ ಪ್ರಯೋಜನೆಯನ್ನು ಬೆಂಗಳೂರು ವಿಭಾಗ ಮತ್ತು ಮೈಸೂರು ಉಪವಿಭಾಗ ಐಇಇಇನಿಂದ ಪಡೆಯಲಾಯಿತು.
ಐಸಿಇಟಿಇಜಿ- 2025 ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ಕರ್ಷ, ಹೊಸ ಆವಿಷ್ಕಾರಗಳು ಹಾಗೂ ಅಕಾಡೆಮಿಯಾ ಉದ್ಯಮಗಳ ಸಹಯೋಗವನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾಗಿತ್ತು. ಈ ಸಮ್ಮೇಳನದಲ್ಲಿ ಮೂರು ಸರ್ಕ್ಯೂಟ್ ವಿಭಾಗಗಳು ಒಳಗೊಂಡ ಹತ್ತು ವಿಶಿಷ್ಟ ಸಂಶೋಧನಾ ಉಪವಿಭಾಗಗಳು ಇದ್ದವು. ವಿಶ್ವದ ವಿವಿಧ ಭಾಗಗಳಿಂದ ಒಟ್ಟು 864 ಸಂಶೋಧನಾ ಪ್ರಬಂಧಗಳು ಸಲ್ಲಿಸಲ್ಪಟ್ಟಿದ್ದು, ನಿಖರ ವಿಮರ್ಶೆಯ ನಂತರ 164 ಉನ್ನತ ಮಟ್ಟದ ಪ್ರಬಂಧಗಳು ಪ್ರಸ್ತುತಿಗಾಗಿ ಆಯ್ಕೆಯಾದವು. ಅಮೆರಿಕಾ, ಜರ್ಮನಿ, ಸೌದಿ ಅರೇಬಿಯಾ ಸೇರಿದಂತೆ ಭಾರತದ ಪ್ರಮುಖ ಸಂಸ್ಥೆಗಳ ಸಂಶೋಧಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಪ್ರೀ-ಕಾನ್ಫರೆನ್ಸ್ ಕಾರ್ಯಾಗಾರವನ್ನು ಕೂಡ ಆಯೋಜಿಸಲಾಗಿತ್ತು. ಅತ್ಯುತ್ತಮ ಪ್ರಬಂಧ ಮತ್ತು ಅತ್ಯುತ್ತಮ ಪೋಸ್ಟರ್ ಪ್ರಸ್ತುತಿಗಳಿಗೆ ಪ್ರಮಾಣಪತ್ರಗಳು ಮತ್ತು ನಗದು ಬಹುಮಾನಗಳನ್ನು ಪ್ರದಾನಿಸಲಾಯಿತು.

ಸಮ್ಮೇಳನವನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ.ಸುರೇಶ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಅಮೆರಿಕಾ ದೇಶದ ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಡಿಜಿಟಲ್ ಫೊರೆನ್ಸಿಕ್ಸ್‌ನ ನಿರ್ದೇಶಕ ಹಾಗೂ ಡಿಸ್ಟಿಂಗ್ವಿಶ್ಡ್ ಯೂನಿವರ್ಸಿಟಿ ಪ್ರೊಫೆಸರ್ ಪ್ರೊ. ಸುಂದರರಾಜ ಸೀತಾರಾಮ ಅಯ್ಯಂಗಾರ್ ಅವರು ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆಯ ಬಳಕೆಯ ಮೂಲಕ ಶಾಶ್ವತ ಹಸಿರು ಇಂಧನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಕುರಿತಾಗಿ ತಮ್ಮ ನುಡಿಗಳನ್ನಾಡಿದರು.

ಅತಿಥಿಯಾಗಿ ರೇಡಿಯಲ್ ಇಂಕ್, ಅಟ್ಲಾಂಟಾ ಮೆಟ್ರೋಪಾಲಿಟನ್ ಪ್ರದೇಶದ ಅಮೆರಿಕಾದ ಉಪಾಧ್ಯಕ್ಷ ಪ್ರೊ. ಅಶೀಷ್ ಕುಮಾರ್ ನಂದಿ ಹಾಗೂ ಐಇಇಇ ಇಂಡಿಯಾದ ದೇಶಾಧ್ಯಕ್ಷ ಪ್ರೊ. ಶ್ರೀಕಾಂತ್ ಚಂದ್ರಶೇಖರನ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಜೆಎಸ್‌ಎಸ್ ಸೈನ್ಸ್ ಅಂಡ್ ಟೆಕ್ನಾಲಜಿ ಯೂನಿವರ್ಸಿಟಿಯ ಉಪ ಕುಲಪತಿ ಡಾ.ಎ. ಎನ್. ಸಂತೋಷ್ ಕುಮಾರ್ ವಹಿಸಿದ್ದರು. ಜೆಎಸ್‌ಎಸ್‌ ಎಸ್ಟಿಯು ನ ಕುಲಸಚಿವ ಪ್ರೊ.ಡಾ.ಎಸ್.ಎ.ಧನರಾಜ್ ಹಾಗೂ ಎಸ್‌ಜೆಸಿಇ ನ ಪ್ರಭಾರ ಪ್ರಾಂಶುಪಾಲ ಡಾ. ಸಿ. ನಟರಾಜು ಉಪಸ್ಥಿತರಿದ್ದರು.
ಪ್ರೊ. ಅಯ್ಯಂಗಾರ್ ಅವರು ಮುಂದಿನ ತಲೆಮಾರಿನ ತಂತ್ರಜ್ಞಾನಗಳು, ಶಾಶ್ವತತೆ ಹಾಗೂ ನವೀನತೆಯ ಸಾಧನೆಯಲ್ಲಿ ಹೇಗೆ ಮುಖ್ಯ ಪಾತ್ರವಹಿಸುತ್ತವೆ ಎಂಬುದನ್ನು ಒತ್ತಿ ಹೇಳಿದರು. ಡಾ. ಬಿ. ಸುರೇಶ್ ಅವರು ಭಾರತದ ಸಿಲಿಕಾನ್ ಮತ್ತು ಸೆಮಿಕಂಡಕ್ಟರ್ ಮಿಷನ್, ಅಂತರಿಕ್ಷ ಸಂಶೋಧನೆ ಹಾಗೂ ಹಸಿರು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಇಂಜಿನಿಯರಿಂಗ್‌ನ ಅಸೀಮ ಸಾಮರ್ಥ್ಯವನ್ನು ಉಲ್ಲೇಖಿಸಿದರು. ಡಾ. ಎ. ಎನ್. ಸಂತೋಷ್ ಕುಮಾರ್ ಅವರು ಕೌಶಲ್ಯ ಅಂತರವನ್ನು ನಿವಾರಿಸುವುದು, ಜಾಗತಿಕ ಪ್ರವೃತ್ತಿಗಳಿಗೆ ಹೊಂದಿಕೊಳ್ಳುವುದು ಹಾಗೂ ಇ-ವೇಸ್ಟ್ ನಿರ್ವಹಣೆ, ಮರುಬಳಕೆ ಮತ್ತು ಹಸಿರು ಇಂಧನ ನಿಯಮಗಳ ಮೂಲಕ ಶಾಶ್ವತತೆಯನ್ನು ಉತ್ತೇಜಿಸುವ ಅಗತ್ಯತೆಯನ್ನು ಪ್ರಸ್ತಾಪಿಸಿದರು.

ಸಮ್ಮೇಳನದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಹಾಗೂ ಪ್ರಮುಖ ಉದ್ಯಮ ತಜ್ಞರಿಂದ ಪ್ಲೇನರಿ ಉಪನ್ಯಾಸಗಳು ಮತ್ತು ಚರ್ಚಾ ಅಧಿವೇಶನಗಳು ನಡೆದವು. ಈ ಅಧಿವೇಶನಗಳು ಎಲೆಕ್ಟ್ರಾನಿಕ್ಸ್ ಹಾಗೂ ಶಾಶ್ವತ ಇಂಧನ ತಂತ್ರಜ್ಞಾನಗಳ ಭವಿಷ್ಯ ಕುರಿತು ಆಳವಾದ ಚರ್ಚೆಗಳನ್ನು ಪ್ರೇರೇಪಿಸಿದವು.

ಈ ಸಮ್ಮೇಳನದಲ್ಲಿ ಗೌರವಾಧ್ಯಕ್ಷರಾಗಿ ಡಾ. ಯು.ಬಿ. ಮಹಾದೇವಸ್ವಾಮಿ, ಡಾ.ಕೆ.ಉಮಾರಾಣಿ ಹಾಗೂ ಡಾ. ಎಂ.ಹೆಚ್. ಸಿದ್ರಂ ಮಾರ್ಗದರ್ಶನ ನೀಡಿದರು. ಜನರಲ್ ಚೇರ್ ಡಾ. ಸುಧರ್ಶನ ಪಾಟೀಲ್ ಕುಲಕರ್ಣಿ ಹಾಗೂ ಡಾ. ಎಂ.ಜಿ. ವೀಣಾ ಕಾರ್ಯನಿರ್ವಹಿಸಿದರು.

Share This Article
Leave a Comment