ಪಬ್ಲಿಕ್ ಅಲರ್ಟ್
ಮೈಸೂರು: ದೀಪಾವಳಿ ಹಬ್ಬದ ಪ್ರಯುಕ್ತ ಅಭಿವೃದ್ಧಿ ವತಿಯಿಂದ ಮೈಸೂರಿನ ನಂಜರಾಜ ಬಹುದ್ಧೂರ್ ಛತ್ರದಲ್ಲಿ ಸಿಲ್ಕ್ ಇಂಡಿಯ-2025ಅ.15ರವರೆಗೆ 12 ದಿನಗಳ ಕಾಲ ಆಯೋಜಿಸಿರುವ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಲಾಯಿತು.
ಭಾರತವು ರೇಷ್ಮೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿದ್ದು, ಭಾರತದಲ್ಲಿ ಉತ್ಪಾದನೆಯಾಗುವ ರೇಷ್ಮೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿರುತ್ತದೆ. ದೇಶದಲ್ಲಿ ವಾಯುಗುಣ ಮತ್ತು ನಿಸರ್ಗಕ್ಕೆ ಅನುಗುಣವಾಗಿ 4 ವಿವಿಧ ಪ್ರಭೇದದ ರೇಷ್ಮೆಗಳಿದ್ದು ಅವುಗಳಲ್ಲಿ ತಸ್ಸರ್, ಎರಿ, ಮುಲ್ಬಾರಿ ಮತ್ತು ಮುಗಾ ರೇಷ್ಮೆಯ ಪ್ರಮುಖವಾಗಿದ್ದು, ಇದರಲ್ಲಿ ಟಸ್ಸರ್ ಮತ್ತು ಮುಗಾ ರೇಷ್ಮೆಯು ಒಂದು ನೈಜವಾದ ಹಾಗೂ ಉಷ್ಣವಲಯದಲ್ಲಿ ಬೆಳೆಯುವ ವನ್ಯ ರೇಷ್ಮೆ ಹಾಗೂ ಸಾವಯವ (ಆರ್ಗಾನಿಕ್) ರೇಷ್ಮೆಯಾಗಿದೆ. ತಸ್ಸರ್ ಮತ್ತು ಮುಗಾ ರೇಷ್ಮೆ ಉತ್ಪಾದನೆಯಲ್ಲಿ ಅಸ್ಸಾಂ, ಬಿಹಾರ್ ಮತ್ತು ಛತ್ತಿಸ್ಗಡ್ ರಾಜ್ಯಗಳು ದೇಶದಲ್ಲಿ ಪ್ರಮುಖವಾಗಿದೆ.
ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು ೬೦ ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಮೈಸೂರು ಜನತೆಯ ಮುಂದೆ ಪ್ರತಿದಿನ ಬೆ.10.30 ರಿಂದ ರಾತ್ರಿ 8.30ರವರೆಗೆ ಪ್ರದರ್ಶಿಸಿ ಮಾರಾಟ ಮಾಡಲಿರುವರು.
ಮೇಳದಲ್ಲಿ ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕಲ್ಕೊತ್ತಾ ಗಣಪತಿ ಸೀರೆಗಳು, ಢಾಕ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರೀಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೇಟಿರಿಯಲ್ಸ್ಗಳು ಮತ್ತು ಸೀರೆಗಳು, ಬಾಗಲ್ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡರ್ ಉಳ್ಳ ಮುಲ್ಬಾರಿ ಸಿಲ್ಕ್, ಕಲ್ಕೋತ್ತಾ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮದಾನಿ ರೇಷ್ಮೆ ರೇಷ್ಮೆ, ಶಿಫಾನ್ ಸೀರೆಗಳು, ಬುಟ್ಟಿ ಸೀರೆಗಳು, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ. ಇದಲ್ಲದೆ ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್ಗಳು ಮತ್ತು ಬೆಡ್ ಶೀಟ್ ಗಳು ಜನರಿಗೆ ಕೈಗೆಟಕುವ ಬೆಲೆಯಲ್ಲಿ ದೊರೆಯಲಿದೆ.
ಮೇಳಕ್ಕೆ ಚಾಲನೆ ನೀಡಿದ ನಟಿ ಎಂ.ಜೆ.ಭವ್ಯ ಮಾತನಾಡಿ, ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು 12 ದಿವಸಗಳ ಈ ವಿಶಿಷ್ಟ ಸಿಲ್ಕ್ ಇಂಡಿಯಾ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಉತ್ಪಾದಕರನ್ನು ಪ್ರೋತ್ಸಾಹಿಸಬೇಕೆಂದು ಈ ಮೂಲಕ ಕೋರುತ್ತೇನೆ ಎಂದರು.







