ಹಾಡ್ಯ ಡೇರಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ 

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು:  ನಂಜನಗೂಡು ತಾಲ್ಲೂಕಿನ  ಹಾಡ್ಯ ಹಾಲು ಉತ್ಪಾದಿಕರ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರವಾಗಿದ್ದು ಈ ಕೂಡಲೇ ಕಾರ್ಯದರ್ಶಿ ಹಾಗೂ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಆದರ್ಶ  ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ಹಾಡ್ಯದಲ್ಲಿರುವ ಹಾಲು ಉತ್ಪಾದಕರ ಸಂಘದಲ್ಲಿ ರೈತರು  ನೀಡುವ ಹಾಲಿನೊಂದಿಗೆ ನೀರು ಮಿಶ್ರಣ ಮಾಡಿ ಕಳುಹಿಸಲಾಗಿದೆ.  ಪರೀಕ್ಷೆ ವೇಳೆ ಕೆಎಂಎಫ್‌ಗೆ ಶುದ್ದವಾದ ಹಾಲು ನೀಡಿ ನಂತರ  ಕಲಬೆರಕೆ ಹಾಲು ಪೂರೈಸಲಾಗಿದೆ ಎಂದು ಆರೋಪಿಸಿದರು.
ಕಾರ್ಯದರ್ಶಿ ತನ್ನ ಕುಟುಂಬದ ೯ ಜನರ ಹೆಸರಿನಲ್ಲಿ ಹಾಲು ನೀಡಿರುವುದು  ದಾಖಲೆ ಸೃಷ್ಟಿಸಿ  ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಒಬ್ಬೊಬ್ಬ ಸದಸ್ಯ ೭೦ ರಿಂದ ೮೦ ಲೀಟರ್ ಹಾಲು ನೀಡಿರುವುದಾಗಿ ದಾಖಲೆಯಲ್ಲಿದೆ. ನಿಜವಾಗಲೂ ಈ ೯ ಜನರು ಹಾಲನ್ನೇ ನೀಡಿಲ್ಲ. ತಿಂಗಳಿಗೆ ಕನಿಷ್ಠ ೨.೮೦ ಲಕ್ಷ ರೂಪಾಯಿಯನ್ನು  ದುರ್ಬಳಕೆ  ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೆ ಕೆಎಂಎಫ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸಹಕಾರ ಸಂಘಗಳ ಉಪನಿಬಂಧಕರು ಈ ಬಗ್ಗೆ  ಪರಿಶೀಲನೆ ನಡೆಸಬೇಕು.  ಸಂಘದಲ್ಲಿ  ಆಡಳಿತ ಮಂಡಳಿ ಸಭೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು. ಆದರೆ ಇದಾದ ಬಳಿಕ ಯಾವುದೇ ಕ್ರಮಕೈಗೊಂಡಿಲ್ಲ. ಕಾರ್ಯದರ್ಶಿಯ ಕಾಂಚಣದ ಸದ್ದಿಗೆ ಯಾರು ಬಾಯಿ ಬಿಡುತ್ತಿಲ್ಲ. ಇದಕ್ಕಾಗಿ  ಈಗಲಾದರೂ ಅಧಿಕಾರಿಗಳು  ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು  ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ನಾಗೇಶ್ ಹಾಗೂ ಇತರರು ಇದ್ದರು.

Share This Article
Leave a Comment