ಕೊಡಗು: ಸದಾ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಒತ್ತಡದಲ್ಲಿದ್ದ ಸಂಸದರು ಶನಿವಾರ ಕೆಸರು ಗದ್ದೆಯೊಳಗೆ ಇಳಿದು ಭತ್ತದ ಪೈರು ಹಿಡಿದು ನಾಟಿ ಮಾಡಿ ಗಮನ ಸೆಳೆದರು.
ಹೌದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೋಮವಾರಪೇಟೆ ತಾಲೂಕಿನ ಹುದಗೂರು ಗ್ರಾಮದ ಐಮುಡಿಮಂಡ ಗಣೇಶ್ ಅವರ ಗದ್ದೆಯಲ್ಲಿ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೆಷನ್ ಆಯೋಜಿಸಿದ್ದ 7ನೇ ವರ್ಷದ ನಾಟಿ ಹಬ್ಬ & ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಾವು ಸಂಭ್ರಮಿಸಿದರು.




ಈ ವೇಳೆ ವಿದ್ಯಾರ್ಥಿಗಳೊಟ್ಟಿಗೆ ನಾಟಿ ಮಾಡಿ ಗಮನ ಸೆಳೆದರು. ಮಾತ್ರವಲ್ಲದೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಎಲ್ಲರಿಗೂ ಶುಭ ಕೋರಿದರು.