
ಪಬ್ಲಿಕ್ ಅಲರ್ಟ್
ಬೆಂಗಳೂರು, ಸೆ.9- ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ತಮಿಳುನಾಡಿನ ಮುರುಗನ್ ದೇವಾಲಯದಲ್ಲಿ ವಿಶೇಷಪೂಜೆಗೆ ಮುಂದಾಗಿದ್ದಾರೆ.
ಈ ಕುರಿತು ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನ ಕೆ.ಕೆ.ಪಳನಿಸ್ವಾಮಿ ಅವರು ಆಹ್ವಾನಪತ್ರಿಕೆಯನ್ನು ಮುದ್ರಿಸಿ ಬಿಡುಗಡೆ ಮಾಡಿದ್ದಾರೆ. ಸದರಿ ಪತ್ರಿಕೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು. ಮತ್ತು ಡಿ.ಕೆ.ಸುರೇಶ್ ಅವರು ಮುಂದಿನ ಚುನಾವಣೆಯಲ್ಲಿ ವಿಜಯಶಾಲಿಗಳಾಗಿ ಅಭಿವೃದ್ಧಿ ಮಾಡುವಂತಾಗಬೇಕು. ಸಹದೋರರ ಕುಟುಂಬಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿ ತಮಿಳುನಾಡಿನ ಪಳನಿಯ ಮುರುಗನ್ ದೇವಾಲಯ ಕ್ಷೇತ್ರದಲ್ಲಿ ಸೆ.9ರ ಸಂಜೆ ವಿಶೇಷ ಪೂಜೆ ಹಮ್ಮಿಕೊಂಡು ಅದರ ಆಹ್ವಾನ ಪತ್ರಿಕೆಯನ್ನು ರಾಜ್ಯದ ಅನೇಕರಿಗೆ ಆಹ್ವಾನ ನೀಡಿದ್ದಾರೆ. ಆ ಮೂಲಕ ರಾಜ್ಯದ ಡಿಕೆಶಿಗೆ ತಮಿಳುನಾಡಿನ ಅಭಿಮಾನಿಗಳು ಸಿಎಂ ಆಗಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
