– ವರದಿ : ವಿ ಲತಾ.-
ಬೆಂಗಳೂರು: ಒಂದು ಕಾಲದಲ್ಲಿ ಇಡೀ ರಾಜ್ಯವನ್ನೇ ತಿರುಗಿ ನೋಡುವಂತೆ ಮಾಡಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ನಿವೃತ್ತಿ ಬಳಿಕ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ನಿವೃತ್ತರ ಪರವಾಗಿ ದನಿಯಾಗಲು ಆ.೨೨ರಂದು ಬೀದಿಗಿಳಿಯಲು ತೀರ್ಮಾನಿಸಿದ್ದಾರೆ.
ಹೌದು ಈ ಕುರಿತು ನಿವೃತ್ತ ನೌಕರರ ವೇದಿಕೆಯ ರಾಜ್ಯಾಧ್ಯಕ್ಷ ಷಣ್ಮಖಯ್ಯ ಮಾತನಾಡಿ, ಕರ್ನಾಟಕ ನಿವೃತ್ತ ನೌಕರರ ಸಮಸ್ಯೆ ಕುರಿತಂತೆ ರಾಜ್ಯದ ಆರ್ಥಿಕ ನಷ್ಟಕ್ಕೊಳಗಾದ ಎಲ್ಲಾ ನಿವೃತ್ತ ನೌಕರರು ಇದೇ 22 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನಾ ಧರಣಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸೇರಿದಂತೆ ವಿವಿಧ ಗಣ್ಯರು ಈ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ದಿ.01-07-2022 ರಿಂದ ಕಾಲ್ಪ ನಿಕವಾಗಿ ವೇತನ ಪರಿಷ್ಕರಣೆ ಮಾಡಿ ಆದೇಶಿಸಿರುವುದು ಸಂತೋಷದ ವಿಷಯ. ಆದರೆ ನಗದು ರೂಪದಲ್ಲಿ 1-08-2024 ರಿಂದ ಅನ್ವಯವಾಗುವಂತೆ ಆದೇಶ ಮಾಡಿರುವುದರಿಂದ ಈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ನಿವೃತ್ತಿ ಪಿಂಚಣಿ ಹೊಸ ವೇತನದಂತೆ ನಿಗದಿ ಪಡಿಸಲು ಆದೇಶಿಸಲಾಗಿದೆ. ಆದರೆ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಇ.ಎಲ್. ನಗದೀಕರಣ ಸೌಲಭ್ಯಗಳನ್ನು 6 ನೇ ವೇತನದ ಆಯೋಗದ ಅಡಿ ಪಡೆಯುತ್ತಿದ್ದ ಮೂಲ ವೇತನದ ಮೇಲೆ ಪಾವತಿಸಲಾಗಿದೆ, ಸುಮಾರು 26,500 ನಿವೃತ್ತ ನೌಕರರು ಆರ್ಥಿಕವಾಗಿ ವಂಚಿತರಾಗಿದ್ದಾರೆ
ಸರಿ ಸುಮಾರು 25-40 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತರಾದಂತಹ ನೌಕರರಿಗೆ ಸಂಧ್ಯಾಕಾಲದಲ್ಲಿ ಆರ್ಥಿಕವಾಗಿ ವಂಚಿತರಾಗಿರುವುದರಿಂದ ಬಹಳ ತೊಂದರೆಯಾಗಿದೆ. ಆದ್ದರಿಂದ ನಮಗೆ ದಿನಾಂಕ 2022 ಜೂ.1-07ರಿಂದ ನಿವೃತ್ತ ಸೌಲಭ್ಯಗಳಾದ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಇ.ಎಲ್. ನಗದೀಕರಣ ಸೌಲಭ್ಯಗಳನ್ನು 7 ನೇ ವೇತನ ಆಯೋದ ಶಿಫಾರಸಿನಂತೆ ದಿನಾಂಕ 2022 ಜೂ.1-07ರಿಂದ ಪೂರ್ವಾನ್ವಯವಾಗುವಂತೆ ನಿಗದಿಯಾದ ಮೂಲವೇತನದ ಆಧಾರದಂತೆ ನೀಡುವಂತೆ ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಢಿಯಲ್ಲಿ ನ್ಯಾ.ಸಂತೋಷ್ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.
ನಿವೃತ್ತರ ಪರವಾಗಿ ಬೀದಿಗಿಳಿಯಲ್ಲಿದ್ದಾರೆ ಸಂತೋಷ್ ಹೆಗ್ಡೆ
ಪಬ್ಲಿಕ್ ಅಲರ್ಟ್ ನ್ಯೂಸ್.

Leave a Comment
Leave a Comment