ಪಬ್ಲಿಕ್ ಅಲರ್ಟ್
ಬೆಂಗಳೂರು ಆಗಸ್ಟ್ 21; 7ನೇ ವೇತನ ಒಪ್ಪಂದದಂತೆ ವೇತನ ಮಂಜೂರಾತಿ ಆದೇಶ ಜಾರಿಗೊಳ್ಳುವಂತೆ ಹಾಗೂ 8ನೇ ತ್ರಿಪಕ್ಷೀಯ ಸಕ್ಕರೆ ವೇತನ ಸಮಿತಿ ಸಭೆಗಳು ಆದಷ್ಟು ಬೇಗ ನಡೆದು ಹೊಸ ವೇತನ ಒಪ್ಪಂದವೇರ್ಪಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಷುಗರ್ಸ್ ಫೆಡರೇಶನ್ ನಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಬಿ.ನಾಗರಾಜು,ಉಪಾಧ್ಯಕ್ಷ ಪ್ರಕಾಶ್ ಆರ್ .ಡಿ. 7ನೇ ತ್ರಿಪಕ್ಷೀಯ ಸಕ್ಕರೆ ವೇತನ ಪರಿಷ್ಕರಣೆಯ ಸರ್ಕಾರಿ ಆದೇಶದ ವಿರುದ್ಧ ಘನ ನ್ಯಾಯಾಲಯದಲ್ಲಿ ರಾಜ್ಯದ 10 ಸಕ್ಕರೆ ಕಾರ್ಖಾನೆಗಳ ಮಾಲೀಕರು ಹೂಡಿರುವ ಮೊಕದ್ದಮೆಗಳನ್ನು ಕಾರ್ಮಿಕರ ಹಿತದೃಷ್ಟಿಯಿಂದ ಸ್ವತಃ ಅವರೇ ವಾಪಸ್ಸು ಪಡೆಯುವುದರ ಮೂಲಕ ಕಾನೂನಾತ್ಮಕ ಅಡಚಣೆಯನ್ನು ನಿವಾರಿಸಿ 7ನೇ ತ್ರಿಪಕ್ಷೀಯ ಸಕ್ಕರೆ ವೇತನ ಪರಿಷ್ಕರಣೆ ಆದೇಶವನ್ನು ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಜಾರಿಗೊಳ್ಳುವಂತೆ ಕ್ರಮಕೈಗೊಳ್ಳ ಬೇಕು ಎಂದು ಹೇಳಿದರು
8ನೇ ತ್ರಿಪಕ್ಷೀಯ ಸಕ್ಕರೆ ವೇತನ ಒಪ್ಪಂದದ ಅವಧಿಯು ಏಪ್ರಿಲ್ 42022ರಿಂದ ಮಾರ್ಚ್ 31,2026ಕ್ಕೆ ಮುಕ್ತಾಯಗೊಳ್ಳಲಿದೆ, ಈ ಬಗ್ಗೆ ಸಭೆಗಳು ನಡೆಯದೇ ಕಾಲ ವಿಳಂಬವಾಗಿರುವುದರಿಂದ ಆರ್ಥಿಕವಾಗಿ ತೊಂದರೆಗೊಳಗಾಗಿರುವ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿನ ಎಲ್ಲಾ ವರ್ಗದ ಕಾರ್ಮಿಕರಿಗೆ ಮಧ್ಯಂತರ ಪರಿಹಾರವಾಗಿ ರೂ 5,000 ಸಾವಿರ ರೂಪಾಯಿ ಜನವರಿ ಒಂದು 2025ರಿಂದಲೇ ಪೂರ್ವಾನ್ವಯವಾಗಿ ಈ ಕೂಡಲೇ ಪಾವತಿಸುವಂತೆ ಆದೇಶ ನೀಡಬೇಕು ಎಂದು ಹೇಳಿದರು.
8ನೇ ತ್ರಿಪಕ್ಷೀಯ ಸಕ್ಕರೆ ವೇತನ ಸಭೆಗಳನ್ನು ಆದಷ್ಟು ಬೇಗ ನಡೆಸಿ 01-04-2022 ರಿಂದ ದಿನಾಂಕ: 31-03-2026ರ ವರೆಗಿನ ಅವಧಿಗೆ ವೇತನ ಪರಿಷ್ಕರಣೆ ಒಪ್ಪಂದವೇರ್ಪಡಿಸಬೇಕು,ಹಿಂದಿನ ಎಲ್ಲಾ ತ್ರಿಪಕ್ಷೀಯ ವೇತನ ಒಪ್ಪಂದಗಳನ್ನು ಜಾರಿಗೊಳಿಸದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ಆದಷ್ಟು ಬೇಗ ಎಲ್ಲಾ ಒಪ್ಪಂದಗಳು ಅನುಷ್ಟಾನಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.