ಭಾನುಮುಸ್ತಾಕ್‌ ಆಯ್ಕೆ, ಡಿಕೆಶಿ ಹೇಳಿಕೆ ಖಂಡಿಸಿ ಪ್ರತಿಭಟನೆ 

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಕನ್ನಡ ಬಾವುಟ ಭುವನೇಶ್ವರಿ, ಅರಿಶಿನ ಕುಂಕುಮದ ವಿರೋಧಿ ಬಾನು ಮುಸ್ತಾಕ್ ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದಿರುವ ಉಪಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸಿ ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾಪಡೆಯಿಂದ ಪ್ರತಿಭಟನೆ ನಡೆಸಿದರು. 
ಭಾನು ಮುಷ್ತಾಕ್ 2023ರ ಜನ ಸಾಹಿತ್ಯ ಕನ್ನಡ ಸಮ್ಮೇಳನದಲ್ಲಿ ಕನ್ನಡ ಬಾವುಟಾನ ಅರಿಶಿಣ ಕುಂಕುಮ ಮಾಡಿ, ಉದ್ದೇಶಪೂರ್ವಕವಾಗಿ ನಮ್ಮನ್ನು ದೂರ ಇಡಲು ಹೆಣ್ಣನ್ನು ದೇವತೆ ಮಾಡಿ ಕೂರಿಸಿ ದೌರ್ಜನ್ಯ ಮಾಡೋತರ ಭುವನೇಶ್ವರಿ ಅಂತ ಮಾಡಿದ್ದೀರಿ ಎಂದು ತಾಯಿ ಭುವನೇಶ್ವರಿ, ಅರಿಶಿನ ಕುಂಕುಮ ನಮ್ಮ ಧ್ವಜದ ಬಗ್ಗೆ ಲೇವಡಿ ಮಾಡಿದ್ದರು. ದೇಶದ ಸಂಸ್ಕೃತಿ, ಆಚಾರ ವಿಚಾರಗಳಿಗೆ ಗೌರವ ಕೊಡದೆ ಇರುವ ಯಾರೇ ಆದರೂ ನಮ್ಮ ಧಾರ್ಮಿಕ ನಾಡಹಬ್ಬವನ್ನು ಉದ್ಘಾಟಿಸುವ ಅರ್ಹತೆ ಇಲ್ಲ, ಹೀಗಾಗಿ ಅವರ ಆಯ್ಕೆಯನ್ನು ಮರಳಿ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಉಪಮುಖ್ಯಮಂತ್ರಿಗಳು ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ, ಎಂದು ಹೇಳಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.  ಹಿಂದೂಗಳ ಆರಾಧ್ಯ ದೈವ, ನಾಡಿನ ದೇವತೆ ಹಿಂದೂಗಳ ಆಸ್ತಿ ಅಲ್ಲದೆ ಮತ್ಯಾರದ್ದು. ಚಾಮುಂಡಿ ಬೆಟ್ಟ ಮೈಸೂರು ಮಹಾರಾಜ ಆಸ್ತಿ. ನಿಮಗೆ ಧೈರ್ಯವಿದ್ದರೆ ಮಸೀದಿಗಳು ಮುಸ್ಲಿಂರ ಆಸ್ತಿಯಲ್ಲ ಹಾಗೂ ಚರ್ಚ್ ಗಳು ಕ್ರಿಶ್ಚಿಯನ್ ರ ಆಸ್ತಿಯಲ್ಲ ಎಂದು ಹೇಳಿ ನೋಡೋಣ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಭುಶಂಕರ್, ಗೋಲ್ಡನ್ ಸುರೇಶ್, ಪ್ರಜೀಶ್, ಸಿಂದುವಳ್ಳಿ ಶಿವಕುಮಾರ್, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ವರಕೂಡು ಕೃಷ್ಣೇಗೌಡ, ನೇಹ, ಭಾಗ್ಯಮ್ಮ, ಹೊನ್ನೇಗೌಡ, ಶಿವಲಿಂಗಯ್ಯ, ಮಹದೇವಸ್ವಾಮಿ, ಹನುಮಂತಯ್ಯ, ನಂದಕುಮಾರ್, ಡಾ.ನರಸಿಂಹೇಗೌಡ, ಡಾ . ಶಾಂತರಾಜೇಅರಸ್, ರಾಧಾಕೃಷ್ಣ, ನಾರಾಯಣ ಗೌಡ, ಕುಮಾರ್, ರಘುಅರಸ್, ನಾಗರಾಜು, ಗೀತಾಗೌಡ, ಅಶೋಕ್, ಆನಂದ್ ಗೌಡ, ರಘು ಆಚಾರ್, ದರ್ಶನ್ ಗೌಡ, ಎಳನೀರು ರಾಮಣ್ಣ, ಪ್ರದೀಪ್, ರವಿ ಒಲಂಪಿಯಾ, ಮೂರ್ತಿಲಿಂಗಯ್ಯ, ಗಣೇಶ್ ಪ್ರಸಾದ್, ಬಸವರಾಜು, ರಾಮಕೃಷ್ಣೇಗೌಡ, ಹನುಮಂತೇಗೌಡ, ಚಂದ್ರಶೇಖರ್, ಸ್ವಾಮಿ ಗೌಡ, ತ್ಯಾಗರಾಜು, ಪ್ರಭಾಕರ್, ರವೀಶ್, ವಿಷ್ಣು ಸೇರಿ ಇನ್ನಿತರರು ಉಪಸ್ಥಿತರಿದ್ದರು.

TAGGED:
Share This Article
Leave a Comment