ಪಬ್ಲಿಕ್ ಅಲರ್ಟ್
ಮೈಸೂರು: ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಲು ಇಂದು ಕೊನೆ ದಿನವಾದ ಹಿನ್ನಲೆಯಲ್ಲಿ ಶೇ.50ರಷ್ಟು ಹಣ ಉಳಿತಾಯ ಮಾಡುವ ಉದ್ದೇಶದಿಂದ ಹಾಗೂ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ವಾಹನ ಮಾಲೀಕರು ಠಾಣೆಗಳಿಗೆ ಮುಗಿಬಿದ್ದಿದ್ದಾರೆ.
ನೂರಾರು ಮಂದಿ ಸರದಿಯಲ್ಲಿ ನಿಂತು ದಂಡ ಪಾವತಿಗೆ ಕಾಯುತ್ತಿದ್ದಾರೆ. ಶೇ.50 ಯೋಜನೆ ಗಡುವು ವಿಸ್ತರಣೆ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ರಾಷ್ಟ್ರಪತಿಗಳು ಮೈಸೂರಿಗೆ ಭೇಟಿ ನೀಡಿದ ದಿನಗಳಲ್ಲಿ ಪೊಲೀಸರು ದಂಡ ಪಾವತಿಸಿಕೊಂಡಿಲ್ಲ.


ಮೂರ್ನಾಲ್ಕು ದಿನ ಭದ್ರತೆ ಹೆಸರಿನಲ್ಲಿ ದಂಡ ಪಾವತಿಸಿಕೊಂಡಿಲ್ಲ. ಇದು ಸಾರ್ವಜನಿಕರ ತಪ್ಪಲ್ಲ. ಸಿಬ್ಬಂದಿಗಳ ಕೊರತೆಯಿಂದಾಗ ಹಣ ಪಾವತಿಸಿಕೊಂಡಿಲ್ಲ. ಸಾರ್ವಜನಿಕರದಲ್ಲದ ತಪ್ಪಿಗೆ ಇಂದು ಠಾಣೆಗಳ ಮುಂದೆ ಗಂಟೆಗಳ ಕಾಲ ಕ್ಯೂ ನಿಲ್ಲ ಬೇಕಾದ ಪರಿಸ್ಥಿತಿ ಬಂದಿದೆ. ಈ ಹಿನ್ನಲೆ ಸಂಬಂಧ ಪಟ್ಟ ಅಧಿಕಾರಿಗಳು ಅಂತಿಮ ಗಡುವನ್ನ ವಿಸ್ತರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ರಾತ್ರಿಯಾದರೂ ಠಾಣಮುಂದೆ ಕ್ಯೂ ನಿಂತಿದ್ದಾರೆ. ಅಲ್ಲದೆ ಕೋಟೆ ಆಂಜನೇಯ ದೇವಾಲಯ ಮುಂಭಾಗವು ಪೊಲೀಸರು ಕೌಂಟರ್ ತೆಗೆದಿದ್ದ ಹಿನ್ನೆಲೆಯಲ್ಲಿ ಅಲ್ಲೂ ಉದ್ದದ ಕ್ಯೂಕಂಡು ಬಂದಿತು.
