ಪಬ್ಲಿಕ್ ಅಲರ್ಟ್ ನ್ಯೂಸ್:-ಅಂಬಿಗರ ಚೌಡಯ್ಯ ಅವರ ವಚನಗಳ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.- ಡಾ. ಡಿ.ತಿಮ್ಮಯ್ಯ
ಮೈಸೂರು,ಜ.21 (ಕರ್ನಾಟಕ ವಾರ್ತೆ):- ಅಂಬಿಗರ ಚೌಡಯ್ಯ ಅವರ ಹಲವಾರು ವಚನಗಳನ್ನು ರಚಿಸಿದ್ದು, ಅವರ ವಚನಗಳ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದ ಅವರಣದಲ್ಲಿ ಇರುವ ಕಿರುರಂಗಮoದಿರದಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯಲು ಕಾನೂನಿನನಲ್ಲಿ ಅವಕಾಶವಿದೆ. ಸಮಾಜದ ಅಸಂಘಟಿತ ಸಮಾಜ ಸಂಘಟಿತರಾಗಬೇಕು ಎಲ್ಲರು ಒಂದು ಗೂಡಿದಾಗ ಮಾತ್ರ ಸಮಸ್ಯೆಗಳನ್ನು ನಿವಾರಣೆ ಮಾಡಲಿಕ್ಕೆ ಸಾಧ್ಯ ಎಂದು ಹೇಳಿದರು.
ಬಸವಣ್ಣನವರ ಅನುಭವ ಮಂಟದಲ್ಲಿ ಅಂಬಿಗರ ಚೌಡಯ್ಯ ಅವರು ಸಮಾಜದಲ್ಲಿ ಹಿಂದುಳಿದ ವರ್ಗದ ಜನರ ಜೊತೆಗೆ ಬೆನ್ನೆಲುಬಾಗಿ ನಿಂತಿದ್ದರು. ಅನುಭವ ಪಂಟಪದಲ್ಲಿ 180 ಸದಸ್ಯರು ಇದ್ದರು ಮುಖ್ಯವಾಗಿ ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮಾದರ ಚನ್ನಯ, ಜೇಡರ ದಾಸಿಮ್ಮಯ್ಯ, ಮತ್ತಿತರರು ಈ ಅನುಭವ ಪಂಟಪದಲ್ಲಿ ಒಂದು ಪರಿಪೂರ್ಣ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದರು ಎಂದು ತಿಳಿಸಿದರು.
ಚೌಡಯ್ಯನವರು ದೋಣಿ ನಡೆಸುವ ಕಾಯಕದಲ್ಲಿ ಜೀವನ ಮಾಡುತ್ತಿದ್ದರು. ವಸ್ತು, ಭಾಷೆ, ಶೈಲಿ ಗಮನಿಸಿದರೆ ಅವರೊಬ್ಬ ಕೆಚ್ಚೆದೆಯ ನೇರ ನಿಷ್ಠೂರ, ಪ್ರಕೃತಿಯ ಗ್ರಾಮ್ಯ ಮನೋಭಾವ ಹೊಂದಿದ ವಚನಕಾರ. ಚೌಡಯ್ಯ ಅವರು ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಟೀಕಿಸದೆ ಬಿಡುತ್ತಿರಲಿಲ್ಲ ಮೃದುವಾಗಿ ಮಾತನಾಡುವರು ಮತ್ತು ನೇರವಾಗಿ ಮಾತನಾಡುವ ವ್ಯಕ್ತಿ ಇವರು. ಶ್ರೇಣಿಕೃತ ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಎಂದು ವ್ಯವಸ್ಥೆ ಇತ್ತು. ಸಮಾಜದಲ್ಲಿನ ಲೋಪದೋಷಗಳನ್ನು ನಿರ್ಧಾಕ್ಷಣ್ಯವಾಗಿ ಎತ್ತಿ ತೋರುತ್ತಿದ್ದರು ಅಂಬಿಗರ ಚೌಡಯ್ಯನವರು ಸಮಾಜವನ್ನು ಕೆಲ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಿ ಸಮಾಜದ ಬೆಳವಣಿಗೆ ತಮ್ಮ ಕಾಯಕದಲ್ಲಿ ತೊಡಗಿದರು ಎಂದು ಹೇಳಿದರು.
ಉಪನ್ಯಾಸಕರಾದ ಡಾ. ಎಲ್. ಭವಾನಿ ಅವರು ಮಾತನಾಡಿ ಅಂಬಿಗರ ಚೌಡಯ್ಯ ಅವರು ತುಂಗಭದ್ರಾ ತೀರದ ಶಿವಪುರ ಎಂಬ ಸ್ಥಳದಲ್ಲಿ ಜನಿಸಿದರು. ಇವರು ಬಸವಣ್ಣ ಅವರ ತತ್ವ ಸಿದ್ದಾಂತಗಳಿoದ ಪ್ರೇರಣೆ ಹೊಂದಿದವರು. ಚೌಡಯ್ಯ ಅವರು ಅನುಭವ ಮಂಟಪದ ಸದ್ಯಸರಲ್ಲಿ ಒಬ್ಬರಾಗಿದರು. ಬಸವಣ್ಣರಂತೆ ಚೌಡಯ್ಯ ಅವರು ವಚನಗಳ ಮೂಲಕ ತಮ್ಮ ಸಿದ್ದಂತಾ ತತ್ವ ತಿಳಿಸಲು ಪ್ರಾರಂಭಿಸಿದರು ಹಾಗೂ ತಮ್ಮ ಜೀವನವನ್ನು ಆದ್ಯಾತ್ಮಿಕತೆ ಕಡೆಗೆ ನಡೆಸುತಿದ್ದರು.
ಆಚಾರ ವಿಚಾರ ಮೂಡನಂಬಿಕೆಯನ್ನು ಖಂಡಿಸಿದರು ಮತ್ತು ಸಮಾಜದ ಅಜ್ಞಾನ ಮೂಡನಂಬಿಕೆಯ ವಂಚನೆ ಮೋಸಗಳನ್ನು ತೊಡೆಯುವ ಕಾಯಕವನ್ನು ಸಮಾಜದಲ್ಲಿ ಮಾಡುತ್ತಿದ್ದರು. ಜೀವನದಲ್ಲಿ ತರ್ಕ, ವ್ಯಾಕರಣ, ಛಂದಸ್ಸು ಇವುಗಳನ್ನು ತಿಳಿದುಕೊಂಡಿದ್ದರು. ವರ್ಣಬೇದ ವ್ಯವಸ್ಥೆಯನ್ನು ಹಾಗೂ ಸಾಂಸಾರಿಕ ಮತ್ತು ಲೌಖಿಕ ಬದುಕನ್ನು ಕಡೆಗೆಣಿಸಿದರು. ಸಮಾಜದ ಸುಧಾರಣೆಗಾಗಿ ತಮ್ಮ ಜೀವನವನ್ನೇ ಮುಡಾಪಾಗಿ ಇಟ್ಟರು ಎಂದು ತಿಳಿಸಿದರು.
ಗಂಗಮತದ ಅಧ್ಯಕ್ಷರಾದ ವಸಂತಮ್ಮ ಅವರು ಮಾತನಾಡಿ ಬಸವಣ್ಣನವರು ಸಮಾಜದಲ್ಲಿ ಜ್ಯಾತ್ಯತೀತ ವಿಚಾರ ದಾರೆಗಳನ್ನು ಎಲ್ಲರು ತಿಳಿದುಕೊಳ್ಳಬೇಕು. ಹಿಂದಿನ ಕಾಲದಲ್ಲಿ ಇದ್ದ ತಾರತಮ್ಯವನ್ನು ಹೋಗಲಾಡಿಸಲು ಬಸವಣ್ಣನವರು ಕೈಗೊಂಡ ಕಾರ್ಯಗಳ ಬಗ್ಗೆ ಎಲ್ಲರು ತಿಳಿಯಬೇಕು. ಸಮಾಜದಲ್ಲಿ ಎಲ್ಲರು ಸಮಾನರು ಎಂದು ಹೇಳಿ ಜ್ಯಾತ್ಯತೀತ ಸಮಾಜ ನಿರ್ಮಾಣ ಮಾಡಲು ಹೋರಾಡಿದರು. ಇಂದಿನ ಜನರು ಬಸವಣ್ಣ ಅವರ ವಚನವನ್ನು ತಿಳಿದುಕೊಳ್ಳಬೇಕು, ವಚನ ಸಾಹಿತ್ಯ ಬದುಕಿನಲ್ಲಿ ಬಹಳ ಮುಖ್ಯ. ಜಾತಿ ಪದ್ಧತಿ ಹೋಗಲಾಡಿಸಲು ಶಿಕ್ಷಣ ದಿಂದ ಮಾತ್ರ ಸಾಧ್ಯ ಹಾಗೂ ವೈಚಾರಿಕತೆ ಜೊತೆಗೆ ಮಾನವಿಯತೆ ಮೌಲ್ಯ ಬೆಳಸಿಕೊಳ್ಳಬೇಕು. ಎಲ್ಲರು ಒಂದುಗೂಡಿ ಸಮಾಜದಲ್ಲಿ ಬಾಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸುದರ್ಶನ್, ಗಂಗಮತದ ಮುಖಂಡರಾದ ಬಸವಯ್ಯ ,ಕಾರ್ಯದರ್ಶಿಗಳಾದ ಚಿಕ್ಕ ಲಿಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
