ಮಂಜೇಗೌಡರ ಸಾರಥ್ಯದ ಸಂಘಕ್ಕೆ ಶತಮಾನದ ಸಂಭ್ರಮ
ಇಂದು ದಿ ರೈಲ್ವೆ ಕೋ ಅಪರೇಟಿವ್‌ ಬ್ಯಾಂಕ್‌ ನಿಯಮಿತದ ೧೦೭ನೇ ಸಂಭ್ರಮ

Pratheek
5 Min Read

ಪಬ್ಲಿಕ್ ಅಲರ್ಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ನೂರಾರು ವರ್ಷಗಳ ಇತಿಹಾಸವಿದೆ. ಅದರಂತೆ ಇಲ್ಲಿನ ರಸ್ತೆ, ಕಟ್ಟಡ ಹೀಗೆ ಪ್ರತಿಯೊಂದರ ಹಿಂದೆಯೂ ಶತಮಾನದ ಇತಿಹಾಸ ಹೇಳುತ್ತಿವೆ. ಹೀಗೆ ಅದರ ಸಾಲಿಗೆ ಎಂ.ಬಿ.ಮಂಜೇಗೌಡರ ಅಧ್ಯಕ್ಷತೆಯ ಸಾರಥ್ಯದಲ್ಲಿ ಸಾಗುತ್ತಿರುವ ದಿ ರೈಲ್ವೆ ಕೋ ಅಪರೇಟಿವ್‌ ಬ್ಯಾಂಕ್‌ ನಿ. ಸೇರಿ ಮತ್ತೊಂದು ದಾಖಲೆಯ ಇತಿಹಾಸ ಬರೆದಿದೆ. 
ಹೌದು ಆರು ಬಾರಿ ಬ್ಯಾಂಕ್‌ನ ನಿರ್ದೇಶಕರಾಗಿ ಹ್ಯಾಟ್ರಿಕ್‌ ಅಧ್ಯಕ್ಷರೆನಿಸಿಕೊಂಡು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರೂ ಆಗಿರುವ ಎಂ.ಬಿ.ಮಂಜೇಗೌಡರಿಗೆ ಬ್ಯಾಂಕಿನ ೧೦೫ ಮಹೋತ್ಸವ ಆಚರಿಸುವ ನೇತೃತ್ವವಹಿಸಿದೆ. ಇಂತಹ ವೇಳೆ ಬ್ಯಾಂಕಿನ ಸಂಸ್ಥಾಪಕ, ನೇತಾರರು, ನಿರ್ದೇಶಕರು ಮತ್ತು ಸದಸ್ಯರೆಲ್ಲರನ್ನೂ ಸ್ಮರಿಸುತ್ತಾ ಅನೇಕ ಯೋಜನೆಗಳನ್ನು ಘೋಷಿಸಿ ಹೊಸ ಮೈಲಿಗಲ್ಲನ್ನೂ ಸಾಧಿಸಲು ಮುಂದಾಗಿದ್ದಾರೆ. ನಂಬಿಕೆ, ಶಿಸ್ತು, ಸಹಕಾರವನ್ನೇ ಬ್ಯಾಂಕಿನ ಮೂರು ಆಧಾರಸ್ತಂಭಗಳನ್ನಾಗಿಸಿಕೊಂಡ ಅವರು, ಪ್ರಸ್ತುತ ೨೦೨೪-೨೫ನೇ ಸಾಲಿನಲ್ಲಿ ೯೭೦೬ಮಂದಿ ಸದಸ್ಯರಿದ್ದು, ೬೬೦೪.೮೧ ಷೇರು, ೬೩೩೪೦.೭೫ ಠೇವಣಿ, ೫೭೭೪೦.೪೧ ಸಾಲ ವಿತರಣೆ, ೯೩೫.೦೭೮ ನಿವ್ವಳ ಲಾಭದೊಂದಿಗೆ ೧೨೧೦೮೧.೧೭ ವಹಿವಾಟು ನಡೆಸಿ ದಾಖಲೆ ಬರೆದಿದೆ ಎಂದು ಹೇಳಿದರು. 
ಇತಿಹಾಸ: 1916ರಲ್ಲಿ ಮೈಸೂರು ರಾಜ್ಯ ರೈಲ್ವೆಯ ಎರಡು ರಾಷ್ಟ್ರೀಯ ಹೆದ್ದಾರಿ ವಿಭಾಗಗಳಾದ ಕೋಲಾರ ಜಿಲ್ಲಾ ಮಂಡಳಿ ಮತ್ತು ಬೆಂಗಳೂರು-ಚಿಕ್ಕಬಳ್ಳಾಪುರ ಲಘು ರೈಲುಗಳನ್ನು ಮೊದಲು ಸಂಚಾರಕ್ಕೆ ತೆರಯಲಾಯಿತು. 1916ರಲ್ಲಿ ಪ್ರಸ್ತುತ ಮುಖ್ಯ ಮಾರ್ಗದ ಮೈಸೂರು-ಅರಸೀಕೆರೆ ರೈಲ್ವೆ ಭಾಗವನ್ನು ತೆರೆಯಲಾಯಿತು. ಇದಾದ 2 ವರ್ಷಗಳ ನಂತರ 1920ರಲ್ಲಿ ಮೈಸೂರು ರಾಜ್ಯ ರೈಲ್ವೆ ಸಹಕಾರ ಸಂಘಗವು ಅಸ್ತಿತ್ವಕ್ಕೆ ಬಂದಿತು. ರೈಲ್ವೆ ಸಹಕಾರ ಸಂಘವು ಮೂಲತಃ ಬೆಂಗಳೂರಿನಲ್ಲಿತ್ತು. ಎ.1 ರಿಂದ ತನ್ನ ಕಾರ್ಯ ಪ್ರಾರಂಭಿಸಿ ಮೊದಲ ಸಂಸ್ಥಾಪಕ ಅಧ್ಯಕ್ಷರಾಗಿ ಎಲ್.ವಿ.ಗೋಪಾಲನ್ ರೈಲ್ವೆ ಆಡಿಟ್ ಕಛೇರಿಯಲ್ಲಿ ಸೂಪರಿಂಡೆಂಟ್ ಆಗಿ, ಸಂಘದ ಕಛೇರಿಯನ್ನು ರೈಲ್ವೆ ಆಡಿಟ್ ಕಛೇರಿಯ ಒಂದು ಕೋಣೆಯಲ್ಲಿ ಪ್ರಾರಂಭಿಸಿದರು. ಕೇವಲ 112 ಸದಸ್ಯರು 2580 ರೂ. ಷೇರು ಬಂಡವಾಳದಿಂದ ಪ್ರಾರಂಭಗೊಂಡು ಮೈಸೂರು ರಾಜ್ಯ ರೈಲ್ವೆಯ ಆಗಿನ ಲೆಕ್ಕಪರಿಶೋಧಕ ಎಲ್.ಬಿಷ್ಟೋಪಂತ್ ಬಾದಾಮಿ, ಎ.ಎನ್.ರಾಘವಾಚಾರ್, ಮತ್ತು ಎಲ್‌.ವಿ.ಗೋಪಾಲನ್ ಕ್ರಮವಾಗಿ ಮೊದಲ ಉಪಾಧ್ಯಕ್ಷ ಮತ್ತು ಗೌರವ ಕಾರ್ಯದರ್ಶಿಯಾಗಿದ್ದು ಬ್ಯಾಂಕಿನ ಇತಿಹಾಸ ಪುಟವಾಗಿದೆ. 
ರೈಲ್ವೆ ಸಂಘವು ರೈಲ್ವೆ ಇಲಾಖೆಗೆ ಸಮರ್ಪಕ ಸೇವೆ ಸಲ್ಲಿಸುತ್ತಿದ್ದರಿಂದ ಸೇರು ಮೊತ್ತ ಮತ್ತು ಇತರೆ ಬಾಕಿಗಳನ್ನು ಸಂಗ್ರಹಿಸುವ ಕಾರ್ಯವನ್ನು ರೈಲ್ವೆ ವೇತನ ಗುಮಾಸ್ತರಿಗೆ ವಹಿಸಲಾಯಿತು. ಆದರೆ ಸಕಾಲದಲ್ಲಿ ವಂತಿಗೆಗಳು ಜಮೆಯಾಗದ ಕಾರಣ ಆಡಳಿತ ಮಂಡಳಿಯು ಸರ್ಕಾರವನ್ನು ಸಂಪರ್ಕಿಸಿ ಇಲಾಖಾ ಅಧಿಕಾರಿಗಳು ತಮ್ಮ ವೇತನ ಬಿಲ್ ಗಳಿಂದ ಸದಸ್ಯರ ಬಾಕಿ ಹಣವನ್ನು ಕಟಾವಣೆ ಮಾಡಲು ಅನುಮತಿ ನೀಡುವಂತೆ ಕೋರಿತು. ಇದಕ್ಕೆ ಸರ್ಕಾರವು ಸ್ಪಂದಿಸಿತು ಹಾಗೂ ಅದೇ ಸಮಯದಲ್ಲಿ ಮೈಸೂರಿನಲ್ಲಿ ಸಂಚಾರ ವ್ಯವಸ್ಥಾಪಕರ ಕಛೇರಿಯ ಮುಖ್ಯ ಗುಮಾಸ್ತರಾಗಿದ್ದ ಶ್ರೀ ಎಂ.ಎನ್. ಕಾಶಿಪತಯ್ಯ ರವರು ಮೈಸೂರು ನಗರದಲ್ಲಿ ಒಂದು ಸಮಾನಾಂತರ ಸಹಕಾರಿ ಸಂಸ್ಥೆಯನ್ನು ಪ್ರಾರಂಭಿಸಿದರು. ಇದು ಮೈಸೂರು ರೈಲ್ವೆ ಕಾರ್ಮಿಕರ ಅನುಕೂಲಕ್ಕಾಗಿ ಆಹಾರ ಮತ್ತು ಇತರೆ ಅಗತ್ಯ ವಸ್ತುಗಳ ಮಾರಾಟಕ್ಕೆ ಸೀಮಿತವಾಗಿತ್ತು ಈ ಸಂಘವು ಮೈಸೂರು ನಗರದ ಒಂಟಿಕೊಪ್ಪಲಿನ ರೈಲ್ವೆ ಕಾಲೋನಿಯಲ್ಲಿ ಕಾರ್ಯನಿರ್ವಹಿಸುತಿತ್ತು ಮತ್ತು ಡಿಸೆಂಬರ್ 1921ರ ಅಂತ್ಯದ ವರಗೆ ಪ್ರತ್ಯೇಕ ಸಹಕಾರ ಸಂಘಗಳಾಗಿ ಮುಂದುವರೆಯುತ್ತಿದ್ದವು ಎರಡೂ ಸಹಕಾರ ಸಂಘಗಳನ್ನು ಮೈಸೂರು ರೈಲ್ವೆ ಸಹಕಾರ ಸಂಘದಲ್ಲಿ ವಿಲೀನಗೊಳಿಸಲಾಯಿತು. ಈ ಹೆಸರನ್ನು “ದಿ ಮೈಸೂರು ರಾಜ್ಯ ರೈಲ್ವೆ ಕೋ ಆಪರೇಟಿವ್ ಸೊಸೈಟಿ” ಎಂದು ಬದಲಾಯಿಸುವವರಗೆ ಉಳಿಸಿಕೊಳ್ಳಲಾಯಿತು ರೈಲ್ವೆ ತನ್ನ ಹೆಸರನ್ನು “ಮೈಸೂರು ರೈಲ್ವೆಸ್” ನಿಂದ “ಮೈಸೂರು ರಾಜ್ಯ ರೈಲ್ವೆಸ್” ಎಂದು ಬದಲಾಯಿಸಿದಾಗ ಸಂಯೋಜಿತ ಸಂಸ್ಥೆಯು 01.01.1922 ರಿಂದ ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಛೇರಿಯೊಂದಿಗೆ ಮತ್ತು 394 ಸದಸ್ಯರನ್ನು ಮತ್ತು ತಲಾ 25 ರೂಗಳ 4000 ಷೇರುಗಳಿಂದ ಕ್ರೂಡೀಕರಿಸಿದ ರೂ 1,00,000 ಅಧಿಕೃತ ಷೇರು ಬಂಡವಾಳದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿತು. 1922 ರಲ್ಲಿ ಎರಡು ಸೊಸೈಟಿಗಳ ವಿಲೀನದ ನಂತರ ನಗರದಲ್ಲಿ ವಾಸಿಸುವ ಉದ್ಯೋಗಿಗಳ ಪ್ರಯೋಜನಕ್ಕಾಗಿ ಸ್ಟೋರ್ಸ್ ಚಟುವಟಿಕೆಗಳನ್ನು ವಿಸ್ತರಿಸಲಾಯಿತು ಒಂದು ಒಂಟಿಕೊಪ್ಪಲಿನಲ್ಲಿ ಮತ್ತೊಂದು ಮೈಸೂರು ನಗರದಲ್ಲಿ ಎರಡು ಡಿಪೊಗಳು ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡಿವೆ ಎಂದು ಸಾಬೀತಾಯಿತು ಆದರೆ ಕಾಲಾ ನಂತರದಲ್ಲಿ ಅವು ದುರ್ಬಲವಾದಂತೆ ಮತ್ತು ಸದಸ್ಯರು ಸಹ ಭಾರಿ ಪ್ರಮಾಣದಲ್ಲಿ ಸಾಲಗಾರರಾಗಿದ್ದರಿಂದ ಅಂಗಡಿಗಳ ಶಾಖೆಯನ್ನು ಅಂತಿಮವಾಗಿ 1935 ರಲ್ಲಿ ಮುಚ್ಚಲಾಯಿತು.

1943 ರಲ್ಲಿ ಆಹಾರ ನಿಯಂತ್ರಣವನ್ನು ಪರಿಚಯಿಸಿದಾಗ ಸೊಸೈಟಿಯು ಪಡಿತರ ಡಿಪೋವನ್ನು ನಡೆಸಲು ಮುಂದಾಯಿತು ಆದರೆ ರೈಲ್ವೆ ತನ್ನ ಉದ್ಯೋಗಿಗಳ ಅನುಕೂಲಕ್ಕಾಗಿ ತನ್ನದೇ ಆದ ಧಾನ್ಯ ಡಿಪೋಗಳನ್ನು ತೆರೆದಾಗ ಮತ್ತು ಸೊಸೈಟಿಯು ಡಿಸೋದನ್ನು ಮುಂದುವರೆಸುವ ಅಗತ್ಯವಿಲ್ಲದಿದ್ದಾಗ ಅದನ್ನು ಸೆಪ್ಟೆಂಬರ್ 1948 ರಲ್ಲಿ ಮುಚ್ಚಲಾಯಿತು.
ಕೆಲವು ತಿಂಗಳುಗಳ ನಂತರ 1948 ರಲ್ಲಿ ಬಟ್ಟೆ ನಿಯಂತ್ರಣವನ್ನು ಪರಿಚಯಿಸುವುದರೊಂದಿಗೆ ರೈಲ್ವೆ ನೌಕರರ ಅನುಕೂಕ್ಕಾಗಿ ಒಂದು ಬಟ್ಟೆ ವಿಭಾಗವನ್ನು ತೆರೆಯಲಾಯಿತು. ಡಿಪೋ ಪರಿಣಾಮಕಾರಿಯಾಗಿ ಮತ್ತು ಆರ್ಥಿಕವಾಗಿ ಕಾರ್ಯನಿರ್ವಹಿಸುತ್ತಿತ್ತು ಆದರೆ ಮಾರಾಟವು ಸೀಮಿತವಾಗಿರುವುದರಿಂದ ಮತ್ತು ಅನುಮತಿಸಲಾದ ಲಾಭದ ಪ್ರಮಾಣ ಕಡಿಮೆ ಇದ್ದುದ್ದರಿಂದ ಅದು ಹೆಚ್ಚಿನ ಲಾಭಗಳಿಸುತ್ತಿರಲಿಲ್ಲ ಆದ್ದರಿಂದ 1949 ರ ನಂತರ ಬಟ್ಟೆ ವಿಭಾಗವನ್ನು ಮುಚ್ಚಲಾಯಿತು. ಆದರೆ 1945ರ ಅಂತ್ಯದ ವೇಳೆಗೆ ಸಂಘವು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಹಾಗೂ 27.11.1949 ರಂದು ಸಂಘವು ರಜತ ಮಹೋತ್ಸವವನ್ನು ಆಚರಿಸಿತು.
ಭಾರತೀಯ ರೈಲ್ವೆಯ ಪುನರ್ ರಚನೆಯ ನಂತರ ಸಂಘವನ್ನು ಸದರ್ನ್ ರೈಲ್ವೆ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಮೈಸೂರು ಎಂದು ಮರುನಾಮಕರಣ ಮಾಡಲಾಯಿತು ಮತ್ತು ಕೋ ಆಪರೇಟಿವ್ ಬ್ಯಾಂಕುಗಳು ಭಾರತೀಯಾ ರಿಸರ್ವ್ ಬ್ಯಾಂಕಿನ ಪೂರ್ವ ವೀಕ್ಷಣೆಗೆ ಒಳಪಟ್ಟಾಗ, ಈ ಸೊಸೈಟಿಯನ್ನು ಮತ್ತೆ ಸದರ್ನ್ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮೈಸೂರು ಎಂದು ಮರುನಾಮಕರಣ ಮಾಡಲಾಯಿತು ನಂತರ 1999 ರಲ್ಲಿ ಸದರ್ನ್ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅನ್ನು ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ನಿಯಮಿತ, ಮೈಸೂರು ಆಗಿ ಮರು ನಾಮಕರಣ ಮಾಡಲಾಗಿರುತ್ತದೆ. ಆರಂಭದಲ್ಲಿ ಬ್ಯಾಂಕ್ ಬೆಂಗಳೂರಿನಲ್ಲಿರುವ ಆಡಿಟ್ ಕಛೇರಿಯ ಒಂದು ಕೋಣೆಯಲ್ಲಿತ್ತು ಆದರೆ ಅದನ್ನು ಮೈಸೂರಿಗೆ ಸ್ಥಾಳಾಂತರಿಸಿದ ನಂತರ ಮತ್ತು ಅದರ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿದ ನಂತರ, ಬ್ಯಾಂಕ್ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ವಸತಿಯನ್ನು ಹುಡುಕಬೇಕಾಯಿತು ರೈಲ್ವೆ ಕಛೇರಿಗಳ ನಿರ್ಮಾಣದವೆಗೂ ಅಲ್ಲಯೇ ಮುಂದುವರೆಯಿತು ಮತ್ತು ಆ ಕಟ್ಟಡದಲ್ಲಿ ವಸತಿ ಒದಗಿಸಲಾಗಿತ್ತು. 1969 ರಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿದ್ದಂತಹ ಶ್ರೀ ಎಂ.ವಿ ಚಲಪತಿರಾವ್ ರವರು 4900 ಚದುರಡಿ ಭೂಮಿಯನ್ನು ಬ್ಯಾಂಕಿಗೆ 11250/- ರೂಗಳ ನಾಮಮಾತ್ರ ವೆಚ್ಚದಲ್ಲಿ ನೀಡುವಂತೆ ರೈಲ್ವೆಯನ್ನು ಮನವೊಲಿಸಿದರು. ಮೈಸೂರಿನ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಆರ್ ಗೋಪಿವಲ್ಲಭ ಅಯ್ಯಂಗಾರ್ ರವರು 27.12.1970 ರಂದು ಬ್ಯಾಂಕಿನ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು ಅದೇ ದಿನ ಬ್ಯಾಂಕ್ ಸುವರ್ಣಮಹೋತ್ಸವವನ್ನು ಆಚರಿಸಿತು. ಕಟ್ಟಡದ ನಿರ್ಮಾಣವು 1974 ರಲ್ಲಿ ಪೂರ್ಣಗೊಂಡಿತ್ತು ಮತ್ತು ಬ್ಯಾಂಕಿನ ಕಟ್ಟಡವನ್ನು ಬ್ಯಾಂಕಿನ ಅಧ್ಯಕ್ಷರಾದಂತಹ ಎಂ.ನಾಗರಾಜ್‌ ರಾವ್ Addl.CME/MAS ರವರು ಉದ್ಘಾಟಿಸಿದರು. ಅಂದಿನಿಂದ ಬ್ಯಾಂಕ್ ತನ್ನದೇ ಆದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬಾಕ್ಸ್‌
ಸದಸ್ಯರೇ ನಮ್ಮ ಜೀವಾಳ ಅವರ ಸಹಕಾರವೇ ನಮ್ಮ ಏಳಿಗೆಗೆ ದಾರಿದೀಪ. ನಿರ್ದೇಶಕರು ಹಾಗೂ ಬ್ಯಾಂಕಿಗೆ ಬುನಾದಿ ಹಾಕಿದ ಮಹನೀಯರ ಸ್ಮರಿಸಿ. ಈಗ ಸದಸ್ಯರಿಗೆ ವಿಶೇಷವಾಗಿ ಆಭರಣ, ಗೃಹ ಸೇರಿ ಅನೇಕ ಸಾಲ ಸೌಲಭ್ಯ ನೀಡುತ್ತಿದ್ದೇವೆ. ಇಂತಹ ವೇಳೆ ಶತಮಾನೋತ್ಸವ ಆಚರಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. 
-ಡಾ.ಎಂ.ಬಿ.ಮಂಜೇಗೌಡ, ಅಧ್ಯಕ್ಷ, ದಿ ರೈಲ್ವೆ ಕೋ ಅಪರೇಟಿವ್‌ ಬ್ಯಾಂಕ್‌ ನಿ.

Share This Article
Leave a Comment