ಪಬ್ಲಿಕ್ ಅಲರ್ಟ್
ಮೈಸೂರು: ಬಲೂನ್ ಮಾರುವ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಸಾವಿಗೀಡಾಗುವಂತೆ ಮಾಡಿ ತಲೆ ಮರೆಸಿಕೊಂಡಿದ್ದ ಕಾರ್ತಿಕ್ ಎಂಬ ಆರೋಪಿಯನ್ನು ಸಿನಿಮಯ ರೀತಿಯಲ್ಲಿ ಪೊಲೀಸರು ಗುಂಡು ಹೊಡೆದು ಹಿಡಿದಿದ್ದಾರೆ.
ಸಿದ್ದಲಿಂಗಪುರ ಗ್ರಾಮದ ನಿವಾಸಿಯಾದ ಕಾರ್ತಿಕ್ ಎಂಬಂತಾನೇ ಗುಂಡೆಟೂ ತಿಂದವನಾಗಿದ್ದಾನೆ. ಈತನನ್ನು ಕೊಳ್ಳೇಗಾಲದಲ್ಲಿ ಬಂಧಿಸಿ ಕರೆತಂದು ಸ್ಥಳ ಮಹಜರು ಮಾಡುವ ವೇಳೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿ ಕಾಲಿಗೆ ಗುಂಡೇಟು ಹೊಡೆದಿದ್ದು, ಈ ವೇಳೆ ಇಬ್ಬರೂ ಪೊಲೀಸರಿಗೂ ಸಹ ಹಲ್ಲೆಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಸಿಟಿವಿ ಕೊಟ್ಟ ಸುಳಿವು: ಮೊನ್ನೆ ಅತ್ಯಾಚಾರ ನಡೆದ ರಾತ್ರಿ ಸಮೀಪದ ಸಿಸಿಟಿವಿಯಲ್ಲಿ ಈತ ಸಂಚರಿಸಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ೧೨ ತಂಡಗಳನ್ನು ಮಾಡಿ ಅದರಲ್ಲಿ ತಾಂತ್ರಿಕ ತಂಡ ನೀಡಿದ ಮಾಹಿತಿ ಮೇರೆಗೆ ಈತನ ಬೆನ್ನು ಹತ್ತಿ ಕೊಳ್ಳೇಗಾಲದಲ್ಲಿ ಈತನ್ನು ಕಂಡು ವಶಕ್ಕೆ ಪಡೆದು ಸ್ಥಳ ಮಹಜರಿಗೆ ಸಿದ್ದಲಿಂಗಪುರಕ್ಕೆ ಕರೆದೊಯ್ಯುವ ವೇಳೆ ತಪ್ಪಿಸಿಕೊಳ್ಳು ಯತ್ನಿಸಿದ್ದಾನೆ. ಈ ವೇಳೆ ಅಡ್ಡ ಬಂದ ಇಬ್ಬರೂ ಪೊಲೀಸರಿಗೆ ಗಾಜಿನ ಬಾಟಲಿನಿಂದ ಹಲ್ಲೆಗೆ ಮುಂದಾಗಿದ್ದು, ಇದನ್ನು ತಪ್ಪಿಸಿಕೊಳ್ಳು ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ಅನಂತರ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಾಕ್ಸ್
ಆರೋಪಿ ಕಾರ್ತಿಕ್ ಬಂಧನ: ಸೀಮಾಲಾಟ್ಕರ್
ಮೈಸೂರು: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪಿ ಕಾರ್ತಿಕ್‌ನನ್ನು ನಿನ್ನೆ ನಮ್ಮ ಸಿಬ್ಬಂದಿ ಬಂಧಿಸಿದ್ದಾರೆಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ತಿಳಿಸಿದರು.
ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಪಿಯನ್ನು ಬಂಧಿಸಿದ ವೇಳೆ ಆತ ಮೂಲತಃ ಸಿದ್ದಲಿಂಗಪುರದವನು ಎಂದು ಎಲ್ಲಿ ಮಹಜರು ನಡೆಸಲು ಕರೆದೊಯ್ದ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದ್ದು, ಇದಾಗಿಯೂ ಸಿಬ್ಬಂದಿಗೆ ಬಾಟಲ್ ನಲ್ಲಿ ಒಡೆದಾಗ ಸ್ಥಳದಲ್ಲಿದ್ದಬ ಪೊಲೀಸರು ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ ತಪ್ಪಿಸಿಕೊಳ್ಳದಂತೆ ಎಚ್ಚರಿಸಿದ್ದಾರೆ. ಇದಾಗಿಯೂ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆಗ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆಂದು ಹೇಳಿದರು.
ಕಾರ್ತಿಕ್ ಎಂಬ ಆರೋಪಿ ೨ ವರ್ಷದಿಂದ ಸಿದ್ದಲಿಂಗಪುರದಲ್ಲಿ ಕಾಣಿಸಿಕೊಂಡಿಲ್ಲ. ಈತನ ಮೇಲೆ ೨೦೨೩ರಲ್ಲಿ ಮೇಟಗಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪಕ್ಕದ ಮನೆಯವರೊಟ್ಟಿಗೆ ಜಗಳ ನಡೆದು ಬಳಿಕ ರಾಜಿಯಾಗಿರುತ್ತದೆ. ಇದಕ್ಕೂ ಮುನ್ನ ೨೦೧೯ರಲ್ಲಿ ಕೊಳ್ಳೇಗಾಲದಲ್ಲಿ ಸರ್ಕಾರಿ ಮಹಿಳೆಗೆ ಲೈಗಿಂಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿರುತ್ತಾನೆ. ಕೊಳ್ಳೇಗಾಲ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ ಕ್ಲಿನರ್ ಆಗಿದ್ದು, ಈತ ಬಾಲಕಿಯನ್ನು ಅಪಹರಿಸಿ ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
6ಮಂದಿ ಬಂಧನ: ಹಾಡು ಹಗಲೇ ವೆಂಕಟೇಶ್ ಕೊಲೆ ಪ್ರಕರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್ ಹತ್ಯೆಯಲ್ಲಿ 6 ಜನ ಭಾಗಿಯಾಗಿದ್ದಾರೆ. ಈಗಾಗಲೇ ಅವರನ್ನು ಬಂಧಿಸಿದ್ದೇವೆ. ಧ್ರುವ ಕುಮಾರ್ ಒಬ್ಬರು ಮಂಡ್ಯದವರು ಉಳಿದ 5 ಜನ ಮೈಸೂರಿನವರಾಗಿದ್ದಾರೆ. ಹಾಲಪ್ಪ ಹಾಗೂ ಮೃತ ವೆಂಕಟೇಶ್ ನಡುವೆ ಶೀತಲ ಸಮರ ಇತ್ತು. ಒಂದೇ ಗುಂಪಿನವರಾದರೂ ಸಹ ನಾನಾ ನೀನಾ ಅನ್ನೋ ವಿಚಾರಕ್ಕೆ ಕೊಲೆ ಆಗಿದೆ. ಈ ಹಿಂದೆ ನಡೆದ ಕಾರ್ತಿಕ್ ಕೊಲೆಗೂ ಇದಕ್ಕೂ ಲಿಂಕ್ ಇದ್ಯಾ ಅಂತ ತನಿಖೆ ಮೂಲಕ ನೋಡುತ್ತಿದ್ದೇವೆ. ಅವರು ಸಣ್ಣ ಪುಟ್ಟ ಫೈನಾನ್ಸ್ ಮಾಡುತ್ತಿದ್ದ ಅಂತ ಗೊತ್ತಾಗಿದೆ ಎಂದರು.
ಬಾಕ್ಸ್
ನೆರವುಕೊಟ್ಟ ಯುವಕಾಂಗ್ರೆಸ್
ಮೈಸೂರು: ಬಲೂನ್ ಮಾರಿ ದಿನದಲ್ಲಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬದ ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲ ಎಂಬುದನ್ನು ಅರಿತ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಂಪತ್ ಕುಮಾರ್ ನೇತೃತ್ವದ ಯುವ ತಂಡ ೫೪ ಸಾವಿರ ಸಹಾಯಧನ ನೀಡಿ ಮಾನವೀಯತೆ ಮೆರೆದಿದ್ದಾರೆ. ಸಂಪತ್ ಕುಮಾರ್,ಶ್ರೀಧರ್,ನವೀನ್,ಪ್ರಮೋದ್ ಮತ್ತು ಸ್ನೇಹಿತರು ನೀಡಿದ ಸಹಾಯಕ್ಕೆ ಅಭಿನಂದನೆಗಳ ಮಹಾಪೂರ ವ್ಯಕ್ತವಾಗಿದೆ.
