ಪಬ್ಲಿಕ್ ಅಲರ್ಟ್
ಮೈಸೂರು: ವಿಕ್ರಾಂತ್ ಟೈರ್ಸ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆ.30ರಂದು ಸರ್ವ ಸದಸ್ಯರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ. ನಿಂಗೇಗೌಡ ತಿಳಿಸಿದರು.
ಹೆಬ್ಬಾಳಿನಲ್ಲಿರುವ ಅನ್ನಪೂರ್ಣ ದೇವಸ್ಥಾನದ ಅವರಣದಲ್ಲಿ ಅಂದು ಬೆಳಗ್ಗೆ 11ಕ್ಕೆ ಸಭೆ ನಡೆಯಲಿದ್ದುಘಿ, ಇಪಿಎಸ್-95 ಜಾರಿಗೆ ಒತ್ತಾಯಿಸಿ ಲೋಕಸಭಾ ಸದಸ್ಯರ ಕಚೇರಿ, ಮನೆ ಮುಂದೆ ಧರಣಿ ನಡೆಸಿದ ಪರಿಣಾಮ ಕಾರ್ಮಿಕರಿಗೆ ಹೆಚ್ಚಿನ ಪಿಂಚಣಿ ನೀಡುವಂತೆ ಸುಪ್ರೀಂಕೋರ್ಟ್ ಕೇಂದ ಸರಕಾರ ಹಾಗೂ ಕೇಂದ್ರ ಕಾರ್ಮಿಕ ಆಯುಕ್ತರಿಗೆ ಆದೇಶ ನೀಡಿದೆ. ಈ ಆದೇಶವನ್ನು ನಿಧಾನ ಪ್ರವೃತ್ತಿ ಹಾಗೂ ತೀರ್ಪನ್ನು ತಿರುಚಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
81,48,490 ನಿವೃತ್ತ ಕಾರ್ಮಿಕರಿದ್ದು, ಇವರಿಗೆ ಕನಿಷ್ಠ ಪಿಂಚಣಿ ಒಂದು ಸಾವಿರ ರೂ.,ಇರುತ್ತದೆ. ಇದು ಇಂದಿನ ಕಾಲದಲ್ಲಿ ಜೀವನ ನಡೆಸಲು ಸಾಧ್ಯವೇ? ,ಮಾಜಿ ಎಂಪಿ, ಮಾಜಿ ಎಂಎಲ್‌ಎಗಳಿಗೆ ಒಳ್ಳೆಯ ಪಿಂಚಣಿ ಬರುತ್ತದೆ. ಆದರೆ, ಕಾರ್ಮಿಕರು ನೋವು ಜನಪ್ರತಿನಿಧಿಗಳಿಗೆ ಕಾಣುವುದಿಲ್ಲ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎ.ಟಿ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಎನ್.ರಾಜಣ್ಣ, ಸಹಕಾರ್ಯದರ್ಶಿ ಕೆ.ಆರ್.ಗೋವಿಂದ ಇದ್ದರು.