ನಿವೃತ ಸೈನಿಕರಿಗೆ ಸನ್ಮಾನಿಸಿ ಮೋದಿ ಜನ್ಮ ದಿನಾಚರಣೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಹೆಮ್ಮೆಯ ಪ್ರಧಾನಿ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ರವರ  75ನೇ ವರ್ಷದ ಜನುಮದಿನದ ಪ್ರಯುಕ್ತ,  ದಿವಾನ್ಸ್ ರಸ್ತೆಯಲ್ಲಿರುವ  ಖಾಸಗಿ ಹೋಟೆಲ್ ನಲ್ಲಿ ಪ್ರತಾಪ್ ಸಿಂಹ ಅಭಿಮಾನಿ ಬಳಗ ಚಾಮರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ 75 ನಿವೃತ್ತ ಸೈನಿಕರಿಗೆ ಸನ್ಮಾನಿಸಿ ಸತ್ಕರಿಸಲಾಯಿತು.
ನಂತರ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ನಿರ್ಭಯರಾಗಿ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು, ಯೋಧರು ಗಡಿ ಕಾಯದೆ ಹೋದರೆ, ಉಗ್ರರು ಶತ್ರುಗಳ ಹಾವಳಿಗೆ ನಾವೆಲ್ಲರೂ ಪುರಾಣ ರಕ್ಷಣೆ ಮಾಡಿಕೊಳ್ಳುವುದಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು, ನಮ್ಮ ದೇಶದ ಸೈನಿಕರು ಗಡಿಯಲ್ಲಿ ನಿದ್ದೆ ಬಿಟ್ಟು ನಮ್ಮ ದೇಶವನ್ನು ಕಾಪಾಡುತ್ತಿರುವರಿಂದಲೇ ನಾವಿಂದು ನೆಮ್ಮದಿಯಿಂದ ಕಣ್ಣು ಮುಚ್ಚಿ ನಿದ್ರಿಸಲು ಸಾಧ್ಯವಾಗಿದೆ ಎನ್ನುವುದು ಸತ್ಯ, ದೇಶದ ರಕ್ಷಣೆಯ ವಿಚಾರ ಬಂದಾಗ ಆದಷ್ಟು ವೀರ ಯೋಧರ ತ್ಯಾಗ ಬಲಿದಾನಗಳನ್ನು ಕಣ್ಣಮುಂದೆ ಹಾದು ಹೋಗುತ್ತಿವೆ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶದ, ದೇಶವಾಸಿಗಳ ರಕ್ಷಣೆಗೆ ಮಹಾ ತ್ಯಾಗಳನ್ನು ಮಾಡಿದವರು ಯೋಧರಾಗಿದ್ದಾರೆಂದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಎಂ.ಸತೀಶ್, ಗಿರೀಶ್ ಪ್ರಸಾದ್, ಬೊ.ಉಮೇಶ, ಸುಬ್ಬಯ್ಯ, ಬಿಜೆಪಿ ಮುಖಂಡ ಎಸ್.ಕೆ.ದಿನೇಶ್, ದಿನೇಶ್ ಗೌಡ, ರಾ.ಪರಮೇಶಗೌಡ, ಚೇತನ್ ಗೌಡ, ಗುರು ವಿನಾಯಕ್, ಭೈರಪ್ಪ, ಕೇಬಲ್ ವೆಂಕಟೇಶ್, ಪ್ರಮೋದ್, ಸುರೇಂದ್ರ, ಶ್ರವಣ್ ಮಾಲಿ, ವಿನೋದ್, ಸಂದೇಶ್,  ಜಗದೀಶ್,  ವಸಂತ ಮನೀಶ್, ಕಲ್ಕೆರೆ ನಾಗರಾಜ್, ಗಂಗಣ್ಣ, ಕಿರಣ್, ಚಂದ್ರಕಲಾ, ಪ್ರಕಾಶ್, ನಿಖಿಲ್, ಜಯಪ್ಪ, ಗುರುವಿನಾಯಕ್, ಮಹೇಶ್, ರಾಜೇಶ್, ಪ್ರಜ್ವಲ್, ಅಶೋಕ್, ಜಯಣ್ಣ, ಮಧು, ಚರಣ್ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment