ನ.೮ರಂದು ರೋಟರಿ ರಸಪ್ರಶ್ನೆ ಸ್ಪರ್ಧೆ ೩.೦

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ರೋಟರಿ ಮೈಸೂರು ಚಿಲ್ಡ್ರನ್ಸ್ ಲೈಬ್ರರಿ ವತಿಯಿಂದ ರೋಟರಿ ಮೈಸೂರು ಸಂಸ್ಥೆಯ ಸಹಯೋಗದಲ್ಲಿ ರೋಟರಿ ರಸಪ್ರಶ್ನೆ ಸ್ಪರ್ಧೆ ೩.೦ – ಜ್ಞಾನ ಮತ್ತು ಸಂಸೃತಿ ಸಂಭ್ರಮವನ್ನು ಆಯೋಜಿಸಲಾಗಿದೆ
ನ.೮ರಂದು ರೋಟರಿ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾರತದ ಶ್ರೀಮಂತ ಪರಂಪರೆ, ಮೈಸೂರು ದಸರಾ ಸಂಪ್ರದಾಯಗಳು, ಕರ್ನಾಟಕದ ಚೈತನ್ಯಮಯ ಸಂಸ್ಕೃತಿ ಮತ್ತಿತರ ವಿಷಯಗಳ ಕುರಿತ ರೋಟರಿ ರಸಪ್ರಶ್ನೆ ಸ್ಪರ್ಧೆ ೩.೦ ಅನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮುಬೀನ್ ಸೇಠ್ ತಿಳಿಸಿದರು.
ನ.  ೫ ರಂದು ಸಂಜೆ  ೬-೭ ರ ನಡುವೆ ಆನ್‌ಲೈನ್ ಮೂಲಕ ಮೊದಲ ಅರ್ಹತಾ ಸುತ್ತು ಮತ್ತು ನ.೬ರಂದು ೨ ನೇ ಹಾಗೂ ಅರ್ಧ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿದೆ. ಇದರಲ್ಲಿ ಆಯ್ಕೆಯಾದವರು ನ. ೮ ರಂದು ಮಧ್ಯಾಹ್ನ ೨ಕ್ಕೆ ರೋಟರಿ ಸಭಾಂಗಣದಲ್ಲಿ ನಡೆಯುವ ಅಂತಿಮ ಸುತ್ತಿನ (ಫೈನಲ್ ಸ್ಪರ್ಧೆಯಲ್ಲಿ) ಪಾಲ್ಗೊಳ್ಳಲಿದ್ದಾರೆ.
ಸ್ಪರ್ಧಾ ವಿಜೇತರಿಗೆ ಮೊದಲನೆ ಬಹುಮಾನಾಗಿ ೧೦ ಸಾವಿರ, ೨ ನೇ ಬಹುಮಾನವಾಗಿ ೮, ೩ ನೇ ಬಹುಮಾನವಾಗಿ ೬ ಸಾವಿರ ನೀಡಲಾಗುವುದು. ನೋಂದಣಿ ಶುಲ್ಕ ತಂಡಕ್ಕೆ ೨೦೦ ರೂ.,ಗಳಾಗಿವೆ.
ನ.೩ರವರೆಗೆ ನೋಂದಣಿ ಪಡೆಯಬಹುದಾಗಿದ್ದು,  ಹೆಚ್ಚಿನ ಮಾಹಿತಿಗೆ ದೂ. ೯೯೮೬೮ ೫೯೨೩೬ ನ್ನು ಸಂಪರ್ಕಿಸಬಹುದಾಗಿದೆ ಎಂದರು.
ಕ್ವಿಜ್ ನಿರೂಪಕರಾದ ರೂಪ ವೆಂಕಟೇಶ್, ಕೆ.ವಿ. ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಇದ್ದರು.

Share This Article
Leave a Comment