ಶಾಲಾ ಅಭಿವೃದ್ಧಿಗೆ ಪ್ರಯತ್ನ: ಅರುಣಕುಮಾರ್

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಈಗಾಗಲೇ ಇಲವಾಲ, ಜಯಪುರ ಹೋಬಳಿ ಭಾಗದ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಮೈಸೂರು ಜಿಲ್ಲಾ ಅಧ್ಯಕ್ಷ ಎಸ್.ಅರುಣಕುಮಾರ್ ತಿಳಿಸಿದರು.
ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಹಂಚ್ಯಾಗ್ರಾಮದ ಸರ್ಕಾರಿ ಪ್ರೌಢಶಾಲೆ ಹಂಚ್ಯಾ ಶಾಲೆಗೆ ಆಸ್ಟ್ರೇಲಿಯಾದಲ್ಲಿರುವ ಮಹೇಶ್‌ ಅವರ ನೇತೃತ್ವದ ಒಎಂಎಸ್ ಇಂಜಿನಿಯರಿಂಗ್ ಸಂಸ್ಥೆಯವರು ನೀಡಿದ ಉಚಿತವಾಗಿ 210 ತಟ್ಟೆ ಲೋಟ ಮತ್ತು ವಿಜ್ಞಾನ ಪ್ರಯೋಗಾಲಯ ಉಪಕರಣ ಹಾಗೂ ಗಣಿತ ಉಪಕರಣ ವಿತರಿಸಿ ಅವರು ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಮೌಲ್ಯಗಳನ್ನು ಬಾಲ್ಯದಲ್ಲಿ ರೂಢಿಸಿಕೊಳ್ಳಬೇಕು. ಈ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರದೊಟ್ಟಿಗೆ ಚರ್ಚೆ ನಡೆಸಿ ಹಂತ ಹಂತವಾಗಿ ಅಭಿವೃದ್ಧಿ ಮಾಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಕೆ. ಸಣ್ಣ ಸ್ವಾಮಿ, ಬಸವರಾಜು,  ಪ್ರಶಾಂತ್‌, ಚನ್ನಯ್ಯ, ಎಸ್ ಡಿಎಂಸಿ ಅಧ್ಯಕ್ಷ ಎಚ್.ಮಂಜು, ಉಪಾಧ್ಯಕ್ಷ ಚಂದ್ರಶೇಖರ್‌, ಮುಖಂಡರಾದ ಶ್ರೀನಿವಾಸ್, ಉಮೇಶ್‌, ಶಾಲಾ ಮುಖ್ಯಪಾಧ್ಯಾಯ ಟಿ. ಕುಮಾರ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment