ಪಬ್ಲಿಕ್ ಅಲರ್ಟ್
ಕೋಲಾರ- ಅಲ್ಲಿ ಸೇರಿದ್ದ ಎಲ್ಲರೂ ಅಪರಿಚಿತರಂತೆಯೇ ಮಾತನಾಡುತ್ತಿದ್ದರೂ ಅವರೆಲ್ಲರ ನಡುವಿನ ಬಾಂದ್ಯವಕ್ಕೆ ೫೨ ವರ್ಷಗಳೇ ಪೂರೈಸಿದ್ದ ವಿಶೇಷ ಸಂದರ್ಭ ಅಲ್ಲಿ ಮೂಡಿತ್ತು.
ಹೌದು 52 ವರ್ಷಗಳ ನಂತರ ಕೋಲಾರ ಮುನಿಸಿಪಲ್ ಹೈಸ್ಕೂಲ್ ನ 1973-74 ನೇ ಸಾಲಿನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳು ಒಗ್ಗೂಡಿ ಗುರು ವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮವನ್ನು ಬೆಂಗಳೂರಿನ ಜಯನಗರದ ಸಮಾಜ ಸೇವಾ ಸಂಘದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಶಾಲೆಯ ಕನ್ನಡ ಶಿಕ್ಷಕರಾದ ವೈ.ನಾರಾಯಣ ಶರ್ಮ ರವರಿಗೆ ಹಾಗೂ ವಿಜ್ಞಾನ ಶಿಕ್ಷಕಿ ಟಿ.ಆರ್.ಸುವರ್ಣ ರವರನ್ನು ಅತ್ಯಂತ ಗೌರವಿಯುತವಾಗಿ ಸನ್ಮಾನಿಸಲಾಯಿತು.
ಹಳೆಯ ದಿನಗಳನ್ನು ನೆನಪಿಸುವ ಮತ್ತು ಶಿಕ್ಷಕರ ಬೋಧನೆ ಮತ್ತು ಪ್ರೀತಿಯನ್ನು ಸ್ಮರಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ರೂಪಿಸಿದ್ದ ಸರಳ ಕಾರ್ಯಕ್ರಮ ಶಾಲೆಯ ಹಳೆಯ ಶೈಕ್ಷಣಿಕ ಸಮುದಾಯದ ಬಾಂಧವ್ಯವನ್ನು ನೆನಪಿಸಿಕೊಳ್ಳಲಾಯಿತು. ಇದು ಒಂದು ಹೃದಯಸ್ಪರ್ಶಿ ಮತ್ತು ವಿಶೇಷ ಸನ್ನಿವೇಶವಾಗಿತ್ತಲ್ಲದೆ, ನಮ್ಮನ್ನು ಅಗಲಿದ ಶಿಕ್ಷಕರಿಗೆ ಹಾಗೂ ಸಹಪಾಠಿಗಳಿಗೆ ಮೌನ ಶ್ರದ್ಧಾಂಜಲಿ ಅರ್ಪಿಸಿ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಆಯೋಜನೆ ಹಳೆಯ ವಿದ್ಯಾರ್ಥಿಗಳಾದ ಸತೀಶ್, ಪುಟ್ಟಣ್ಣ, ಸನತ್, ವೆಂಕಟೇಶ್ ಮುಂತಾದವರಿದ್ದರು.
