ಪಬ್ಲಿಕ್ ಅಲರ್ಟ್
ಮೈಸೂರು: ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಆಯೋಜಿಸಿದ ಮನೆಮನೆ ಗೊಂಬೆ ಕೂರಿಸುವ ಸ್ಪರ್ಧೆಯ ವಿಜೇತರಾದ ಜೆಪಿ ನಗರದ ನಿವಾಸಿ ರಶ್ಮಿ, ಲಕ್ಷ್ಮಿಪುರಂ ನಿವಾಸಿ ಉಷಾ, ಬೆಂಗಳೂರು ನಿವಾಸಿ ಮಂಜುಳಾ, ಹಾಸನ ನಿವಾಸಿ ಗುರು, ಬೆಂಗಳೂರು ನಿವಾಸಿ ರಮ್ಯ, ಶ್ರೀರಾಂಪುರ ನಿವಾಸಿ ಪೂಜಾ ಪುನೀತ್, ಚಾಮುಂಡಿಪುರಂ ನಿವಾಸಿ ಶಾರದಾ, ರಾಮಕೃಷ್ಣನಗರ ನಿವಾಸಿ ಜಗಲಕ್ಷ್ಮಿ, ಅಗ್ರಹಾರ ನಿವಾಸಿ ಕಾರ್ತಿಕ್, ರಾಮಕೃಷ್ಣನಗರ ನಿವಾಸಿ ಸ್ವರೂಪಿಣಿ ರವರಿಗೆ ಬಹುಮಾನವನ್ನು ವಿತರಿಸಲಾಯಿತು.
ಬಹುಮಾನ ವಿತರಿಸಿ ಮಾತನಾಡಿದ ಸಮಾಜ ಸೇವಕ ಕೆ.ರಘುರಾಮ ವಾಜಪಾಯಿ, ಸಂಸ್ಕೃತಿಯ ಮತ್ತು ನಮ್ಮ ಪರಂಪರೆಯ ಉಳಿವಿಗಾಗಿ ಹೋರಾಡುವ ಸಂದರ್ಭ ಎದುರಾಗಿದೆ ಪ್ರತಿಯೊಬ್ಬರು ಅದಕ್ಕಾಗಿ ಶ್ರಮಿಸಬೇಕು.ನಮ್ಮ ಸಂಪ್ರದಾಯ ಮತ್ತು ಧಾರ್ಮಿಕತೆಯ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದುಗಳು ಒಗ್ಗಟ್ಟಾಗಿ ಕಲೆತು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು ಎಂದು ಕರೆ ನೀಡಿದರು .
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್, ಉದ್ಯಮಿಗಳಾದ ಜಯರಾಮ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಸಮಾಜ ಸೇವಕಿ ಮಂಜುಳಾ ಸೋಮಣ್ಣ, ಕೋಮಲ ಮಣಿ, ಶ್ರುತಿ, ಸಹನಾ, ತಾರಾ ಹಾಗೂ ಇನ್ನಿತರರು ಹಾಜರಿದ್ದರು.
