ಕ್ರಿಶ್ಚಿಯನ್‌ ಪದ ಕೈ ಬಿಡುವಂತೆ ಮಾದಿಗ ಸಂಘಟನೆಗಳ ಆಗ್ರಹ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಈ ಸಾಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ವೇಳೆ ಸರ್ಕಾರ ಜಾತಿಗಳ ಜೊತೆಗೆ ಸಂವಿಧಾನಲ್ಲಿಲ್ಲದ ಕ್ರಿಶ್ಚಿಯನ್ ಪದ ಕೈಬಿಡಬೇಕೆಂದು ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಈ ಕುರಿತು ಸಂಚಾಲಕ ಬಿ.ಎಸ್. ಸುಬ್ರಮಣ್ಯ ಮಾತನಾಡಿ, ಹಲವಾರು ಜಾತಿಗಳನ್ನು ಹಿಂದೂ- ಕ್ರಿಶ್ಚಿಯನ್ ಎಂದು ಗುರುತಿಸುತ್ತಿರುವುದು ಸರಿಯಲ್ಲ. ಅವನ್ನು ಹಿಂದಿನ ಮೂಲ ಜಾತಿಗಳಿಗೇ ಸೇರ್ಪಡೆ ಮಾಡಬೇಕು. ಪ್ರವರ್ಗವಾರು ಜಾತಿಗಳ ಪಟ್ಟಿಯನ್ನು ಕನ್ನಡ ವರ್ಣಮಾಲೆ ಅನುಸಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಜಾತಿಗಳೊಡನೆ ಕ್ರಿಶ್ಚಿಯನ್ ಪದ ಸೇರಿಸಿ ಕ್ರಮ ಸಂಖ್ಯೆ ನೀಡಿರುವುದು ಖಂಡನೀಯವಾಗಿದೆ. ಇದು ಮತಾಂತರಕ್ಕೆ ಕುಮ್ಮಕ್ಕು ನೀಡುತ್ತದೆ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗವು ಹಿಂದೂ ಧರ್ಮದ ಜಾತಿಗಳ ಹೆಸರಿನೊಂದಿಗೆ ಕ್ರಿಶ್ಚಿಯನ್ ಪದ ಸೇರಿಸಿರುವುದು ಮಾದಿಗ ಮತ್ತು ಸಂಬಂಧಿತ ಜಾತಿಗಳನ್ನು ವಂಚಿಸುವ ಹುನ್ನಾರವಾಗಿದೆ ಎಂದು ಆರೋಪಿಸಿರು.
ಮತ್ತಷ್ಟು ನೈಜ ಕಾಳಜಿಯೊಂದಿಗೆ ಸರ್ಕಾರ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮ್ಯೆಗೆ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳಲು ಉದ್ದೇಶಿದ ಸಮೀಕ್ಷೆ ವೇಳೆ ಮುಂದಾಗಬೇಖು. ಇದರೊಡನೆ ನಾಗಮೋಹನ್ ದಾಸ್ ಆಯೋಗದ ವರದಿಯ ಅಂಕಿ ಅಂಶವನ್ನು ಪೂರ್ಣವಾಗಿ ನಿರ್ಲಕ್ಷಿಸಿರುವುದನ್ನು ಖಂಡಿಸುವುದಾಗಿ ತಿಳಿಸಿದರು.
ಇನ್ನಿತರ ಪದಾಧಿಕಾರಿಗಳಾದ ಎನ್. ಸ್ವಾಮಿ, ಡಾ. ಆನಂದ್ ಕುಮಾರ್, ರಾಜಣ್ಣ, ಮಹದೇವ್, ವೈ. ವೆಂಕಟೇಶ್, ವೆಂಕಟರಾಮ್ ಹಾಜರಿದ್ದರು.

Share This Article
Leave a Comment