ಸೊಸೈಟಿ ಅಧ್ಯಕ್ಷರಿಗೆ ಯೋಗೇಶ್‌ ಗೆ ಸನ್ಮಾನ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಗರದ ಕುಂಬಾರಕೊಪ್ಪಲಿನ ಶ್ರೀ ಮಹದೇಶ್ವರ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆಯಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಜಿ.ಯೋಗೇಶ್‌ ಅವರನ್ನು ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು. 
ನಗರದ ಕುಂಬಾರಕೊಪ್ಪಲಿನ ಮಹದೇಶ್ವರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೆ.೧೪ರಂದು ನಡೆಯುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಸದಸ್ಯರ ಸಭೆಯಲ್ಲಿ ಎಲ್ಲರೂ ಪ್ರೀತಿಯಿಂದ ಭಾಗವಹಿಸುವಂತೆ ಕೋರಿದರು. ಶ್ರೀ ಮಹದೇಶ್ವರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಸೀತಾರಾಮ ಅಧ್ಯಕ್ಷತೆಯಲ್ಲಿ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಕೆ.ವಿ.ಚೇತನ್, ಕೆ.ಸತೀಶ್, ಜಿ.ಮಂಜುನಾಥ್, ಎಂ.ಹೇಮಂತ್ ಕುಮಾರ್, ಹೆಚ್ ಶಿವಕುಮಾರ್,ಎಂ.ಲೋಕೇಶ್,ಕೆ.ಟಿ.ಚಂದ್ರಶೇಖರ್, ಸಿ.ಮಹೇಶ್,ಎಂ.ರಮೇಶ್ ನಾಯಕ, ಎಂ. ಪ್ರಕಾಶ್, ಜಿ.ಶೋಭಾ, ಕಾರ್ಯದರ್ಶಿ ಎಸ್.ಚಂದ್ರಕುಮಾರಿ, ಹೆಚ್.ಹೆಸ್.ಪಂಚಮಿ, ನಗರಪಾಲಿಕೆ ಮಾಜಿ ಸದಸ್ಯ ಶವಮಾದಣ್ಣ, ಜಯರಾಮಣ್ಣ, ಮಾಸ್ಟರ್ ಜಯರಾಮಣ್ಣ, ಉಷಾ ಕುಮಾರ್, ವಿಕ್ರಾಂತ್ ಒಕ್ಕಲಿಗರ ಸಂಘದ ಅದ್ಯಕ್ಷ ಬಾಬು ಶಿವಮಾದಣ್ಣ, ಮೈಸೂರು ಜಿಲ್ಲಾ ಕೈಗಾರಿಕಾ ವಾಣಿಜ್ಯ ಸಂಸ್ಥೆ ಅದ್ಯಕ್ಷ ಕೆ.ಬಿ.ಲಿಂಗರಾಜು, ವೈ.ಭೈರಪ್ಪ, ವೈ.ಬಸವರಾಜು, ಟೆಂಟ್ ರಾಜಣ್ಣ, ಕೆ.ರಾಜೇಂದ್ರ, ಕಬಡ್ಡಿ ಅನಿಲ್ ಕುಮಾರ್, ಡಾಬಾ ಪ್ರಸನ್ನ, ಕ್ಯಾಪ್ಟನ್ ಶಿವಕುಮಾರ್, ಮಾಜಿ ಅದ್ಯಕ್ಷರಾದ ಜವರೇಗೌಡ, ನವೀನ್ ಸೇರಿ ಇತರರು ಇದ್ದರು.

TAGGED:
Share This Article
Leave a Comment