ಪಬ್ಲಿಕ್ ಅಲರ್ಟ್
ಮೈಸೂರು: ನಗರದ ಇಟ್ಟಿಗೆಗೂಡಿನ ಗುರುಕುಲ ಸ್ಪೋರ್ಟ್ ಕ್ಲಬ್ ವತಿಯಿಂದ ಚಾಮುಂಡೇಶ್ವರಿ ಕಪ್ ೨೧ವರ್ಷದೊಳಗಿನವರ ಮ್ಯಾಟ್ ಕಬ್ಬಡಿ ಪಂದ್ಯಾವಳಿಯಲ್ಲಿ ಸಂಯುಕ್ತ ಮೇಟಗಳ್ಳಿ ತಂಡ ವಿಜೇತರಾದರು.
ಇಟ್ಟಿಗೆಗೂಡಿನ ಸಾವಿತ್ರಿ ಶಾಲೆಯಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಒಟ್ಟು ೧೧ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಸಂಯುಕ್ತ ಮೇಟಗಳ್ಳಿ(ಪ್ರಥಮ), ಗುರುಕುಲ ಸ್ಪೋರ್ಟ್ಸ್ ಕ್ಲಬ್(ದ್ವಿತೀಯ), ವಿಸ್ಮಯ(ತೃತೀಯ) ಹಾಗೂ ಸಿಆರ್ ಎಸ್ ಬಾಯ್ಸ್ ತಂಡ ನಾಲ್ಕನೇ ಬಹುಮಾನ ಪಡೆದುಕೊಂಡವು. ವಿಜೇತರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹುಮಾನ ವಿತರಿಸಿ, ನಮ್ಮ ಗ್ರಾಮೀಣ ಕ್ರೀಡೆ ಉಳಿಸುವ ನಿಟ್ಟಿನಲ್ಲಿ ಇಂತಹ ಪಂದ್ಯಾವಳಿಗಳು ಪೂರಕ ಎಂದು ತಿಳಿಸಿದರು. ರಾಜು, ಅಭಿ, ದರ್ಶನ್, ನಿಖಿತ್, ಪುಟ್ಟರಾಜ ಹೊನ್ನಾವರ ಲತಾ ಶ್ರೀನಿವಾಸ್, ರೇಣುಕಾ ರಾಜ್, ಪ್ರಿಯ ರಮೇಶ್ ಇನ್ನಿತರರು ಪಾಲ್ಗೊಂಡಿದ್ದರು.
