ಪಬ್ಲಿಕ್ ಅಲರ್ಟ್
ಬೆಂಗಳೂರು:
ಚೇತನ್ ಸೂರ್ಯರವರ ಸಾರಥ್ಯದ ಮೂಲಕ ಸ್ಟೆಲ್ಲಾರ್ ಇವೆಂಟ್ಸ್ ಮತ್ತು ಪಿ ಆರ್ ಕೆ ಆಡಿಯೋದ ಸಹಯೋಗದಲ್ಲಿ ನಡೆದ ಮೂರನೇ ಆವೃತಿಯ ಅಪ್ಪು ಕಪ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿಗೆ ಚಿತ್ರರಂಗದ ಕಲಾವಿದರು, ತಂತ್ರಜ್ಞಾನರಲ್ಲಿ ಅಡಗಿರುವ ಬ್ಯಾಡ್ಮಿಂಟನ್ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಲು ಆಯ್ಕೆ ಪ್ರಕ್ರಿಯೆ ನಡೆಸಿ ಆಯ್ಕೆ ಆದ ಆಟಗಾರರನ್ನಾ ಐಪಿಎಲ್ ಮಾದರಿಯಲ್ಲಿ ಆಕ್ಷನ್ ನಲ್ಲಿ ಬಿಡ್ ಮಾಡುವ ಮುಖೇನ ತಂಡಗಳಿಗೆ ಆಯ್ಕೆ ಮಾಡಲಾಯಿತು.ಒಟ್ಟು ಹತ್ತು ತಂಡಗಳು ರೂಪುಗೊಂಡವು. ಹದಿನೈದು ಜನ ಆಟಗಾರರಿಗೆ ಒಂದರಂತೆ ತಂಡವನ್ನು ರೂಪಿಸಲಾಯಿತು.ಜೂನ್ 24 ರಂದು ತಂಡಕ್ಕೆ ಆಯ್ಕೆಯಾದ ಆಟಗಾರರನ್ನ ತಿಳಿಸಲಾಯಿತು.ಜುಲೈ 19 ರಂದು ಸಾಯಿಗೋಲ್ಡ್ ಪ್ಯಾಲೆಸ್ ಮಾಲೀಕರು MLC ಯಾದ ಸರವಣ ಅವರ ನೇತೃತ್ವದಲ್ಲಿ ಜರ್ಸಿ ಲಾಂಚ್ ಕಾರ್ಯಕ್ರಮ ಬೆಂಗಳೂರಿನ ಪ್ರತಿಷ್ಠಿತ ಕಿಂಗ್ಸ್ ಕ್ಲಬ್ ನಲ್ಲಿ ಅದ್ಧೂರಿಯಾಗಿ ನೆರವೇರಿತು.ಪರಿತೋಶ್ ಮೂರ್ತಿ ಮಾಲಿಕತ್ವದ ಬಿಂದಾಸ್ ರಾಯಲ್ ಚಾಲೆಂಜರ್ಸ್ ಗೆ ಚಿತ್ರನಟ ದಿಗಂತ್ ನಾಯಕರಾದರು.ಈ ತಂಡಕ್ಕೆ ಅತಿ ಹೆಚ್ಚಿನ ಬೇಡಿಕೆ ಆಟಗಾರನಾಗಿ ನಮ್ಮ ರಾಣಿಬೆನ್ನೂರಿನ ಯುವ ಪ್ರತಿಭೆ ಮಂಜಯ್ಯ ಚಾವಡಿ ಅವರು ಆಯ್ಕೆಯಾಗಿ ಎಲ್ಲರ ಗಮನ ಸೆಳೆದರು.ಮಂಜಯ್ಯ ಚಾವಡಿ ಮತ್ತು ತಂಡದ ಸದಸ್ಯರು ಎರಡು ತಿಂಗಳ ಸತತ ಅಭ್ಯಾಸ ಮಾಡಿ ಜುಲೈ 25,26,27 ರಂದು ನಡೆದ ಲೀಗ್ ಪಂದ್ಯದಲ್ಲಿ ಟೇಬಲ್ ಟಾಪರ್ಸ್ ಆಗಿ ಸೆಮಿ ಫೈನಲ್ ಗೆ ಆಯ್ಕೆಯಾಗುತ್ತಾರೆ.ಆಗಸ್ಟ್ 17 ರಂದು ಗೋವಾದಲ್ಲಿ ನಡೆದ ಸೆಮಿಫೈನಲ್ಸ್ ಮತ್ತು ಪೈನಲ್ಸ್ ನಲ್ಲಿ ಎದುರಾಳಿ ತಂಡಗಳನ್ನಾ ಸೋಲಿಸಿ ಪೈನಲ್ ನಲ್ಲಿ ರಾಜಕುಮಾರ ಕಿಂಗ್ಸ್ ತಂಡದ ವಿರುದ್ಧ ಆಡಿದ ಬಿಂದಾಸ್ ರಾಯಲ್ ಚಾಲೆಂಜರ್ಸ್ ತಂಡ ಗೆಲುವಿನ ನಗೆ ಬೀರಿ 7,00,000 ನಗದು ಬಹುಮಾನ ಗೆಲ್ಲುವುದರ ಜೊತೆಗೆ 5.1/2 kg ತೂಕದ ಬೆಳ್ಳಿ ಕಪ್ಪನ್ನು ತನ್ನದಾಗಿಸಿಕೊಂಡಿತು.ಟೂರ್ನಮೆಂಟ್ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ತೋರಿದ ನಮ್ಮ ರಾಣಿಬೆನ್ನೂರಿನ ಪ್ರತಿಭೆ ಮಂಜಯ್ಯ ಚಾವಡಿ ಅವರು ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದರು.ಇಂತಹ ನಮ್ಮ ಸ್ಥಳೀಯ ಪ್ರತಿಭೆಯನ್ನಾ ಗುರುತಿಸಿ ಅಭಿನಂದನೆಗಳನ್ನಾ ತಿಳಿಸಬೇಕಾಗಿದೆ.