ಪಬ್ಲಿಕ್ ಅಲರ್ಟ್
ಮೈಸೂರು: ಜರ್ಮನಿಯ ಪ್ರಖ್ಯಾತ ಇಂಟೀರಿಯರ್ ಫಿಟ್ಟಿಂಗ್ಸ್ ಬ್ರ್ಯಾಂಡ್ ಹೆಟಿಕ್ ತನ್ನ ಮೊದಲ ಹೆಟಿಕ್ ಎಕ್ಸ್‌ಕ್ಲೂಸಿವ್ ಸ್ಟೋರ್ ಅನ್ನು ಅರಮನೆಗಳ ನಗರಿ ಮೈಸೂರಿನಲ್ಲಿ ಶುಭಾರಂಭ ಮಾಡಿದೆ. ಈ ಮೂಲಕ ಗ್ರಾಹಕರಿಗೆ ವಿಶಿಷ್ಟ ಮತ್ತು ನವೀನ ಅನುಭವಗಳನ್ನು ಒದಗಿಸುವ ತನ್ನ ಜಾಲವನ್ನು ಇನ್ನಷ್ಟು ವಿಸ್ತರಿಸಿದೆ.
ಪುಣೆ, ಆಗ್ರಾ ಮತ್ತು ಭೋಪಾಲ್ ನಂತರ ಮೈಸೂರಿನಲ್ಲಿ ಆರಂಭವಾಗಿರುವ ಈ ಸ್ಟೋರ್ ಅನ್ನು ಹೆಟಿಕ್ ಇಂಡಿಯಾದ ಹಿರಿಯ ಪ್ರತಿನಿಧಿಗಳು ಮತ್ತು ಹೆಕ್ಸ್ ಮತ್ತು ಅನುಭವ ಕೇಂದ್ರದ ಮುಖ್ಯಸ್ಥ ಅಂಕಿತ್ ಕುಲಶ್ರೇಷ್ಠ ಮತ್ತು ಅನಿಲ್‌ರಾಜ್ (ಸ್ಟೋರ್ ಮಾಲೀಕರು) ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ವರ್ಷ ಭಾರತದಾದ್ಯಂತ 25 ಹೆಕ್ಸ್ ಸ್ಟೋರ್‌ಗಳನ್ನು ತೆರೆಯುವ ಹೆಟಿಕ್‌ನ ಕಾರ್ಯತಂತ್ರದ ಭಾಗವಾಗಿ ಈ ಮಳಿಗೆಯನ್ನು ಆರಂಭಿಸಲಾಗಿದೆ. ಅರಮನೆ ನಗರಿ ಮೈಸೂರಿನಲ್ಲಿ, ಶೈಲಿ, ಆರಾಮ ಮತ್ತು ಆಧುನಿಕ ವಿನ್ಯಾಸಗಳನ್ನು ಒಳಗೊಂಡ ಪ್ರೀಮಿಯಂ ವಾಸಸ್ಥಳಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಗ್ರಾಹಕರನ್ನು ತಲುಪಿ, ಅವರಿಗೆ ವಿಶ್ವದರ್ಜೆಯ ಇಂಟೀರಿಯರ್ ಪರಿಹಾರಗಳನ್ನು ಒದಗಿಸುವುದು ಹೆಟಿಕ್‌ನ ಗುರಿಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹೆಟಿಕ್ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕ ರಾಹುಲ್ ಠಕ್ಕರ್, “ಮೈಸೂರು ತನ್ನ ಭವ್ಯ ಅರಮನೆಗಳು ಮತ್ತು ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಜನರಿಗೆ ಜೀವನದ ಸೂಕ್ಷ್ಮ ಮತ್ತು ಸುಂದರ ವಸ್ತುಗಳ ಮೇಲೆ ವಿಶೇಷ ಒಲವಿದೆ. ಇತ್ತೀಚಿನ ದಿನಗಳಲ್ಲಿ, ಜೀವನವನ್ನು ಸರಳಗೊಳಿಸುವ ಮತ್ತು ಹೊಸ ಅನುಭವ ನೀಡುವ ಪ್ರೀಮಿಯಂ ಪೀಠೋಪಕರಣ ಫಿಟ್ಟಿಂಗ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ನಮ್ಮ ಜರ್ಮನ್ ಪ್ರಶಸ್ತಿ ವಿಜೇತ ಉತ್ಪನ್ನಗಳ ಮೂಲಕ ಗ್ರಾಹಕರ ವಿನ್ಯಾಸದ ಕನಸುಗಳನ್ನು ನನಸಾಗಿಸಲು ನಾವು ಉತ್ಸುಕರಾಗಿದ್ದೇವೆ,” ಎಂದು ಹೇಳಿದರು.
ಮೈಸೂರಿನ ಈ ಹೆಕ್ಸ್ ಸ್ಟೋರ್, ಗ್ರಾಹಕರಿಗೆ ಪೀಠೋಪಕರಣ ಫಿಟ್ಟಿಂಗ್ಸ್, ಆರ್ಕಿಟೆಕ್ಚರಲ್ ಡೋರ್ ಹಾರ್ಡ್‌ವೇರ್, ಪೀಠೋಪಕರಣ ಲೈಟಿಂಗ್, ಮತ್ತು ಕಿಚನ್ ಉಪಕರಣಗಳ ಸಮಗ್ರ ಪರಿಹಾರಗಳನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಇಲ್ಲಿನ “ಉಚಿತ ವಿನ್ಯಾಸ ಸೇವೆ” ಮೂಲಕ ವೃತ್ತಿಪರ ವಿನ್ಯಾಸಕರು ಗ್ರಾಹಕರ ಕನಸಿನ ಮನೆಗಳನ್ನು ದೃಶ್ಯೀಕರಿಸಲು ಮತ್ತು ನನಸಾಗಿಸಲು ಸಹಾಯ ಒದಗಿಸಲಾಗುತ್ತದೆ. ಹೆಕ್ಸ್ ಸ್ಟೋರ್‌ಗಳು ಹೆಟಿಕ್‌ನ ಅನುಭವ ಕೇಂದ್ರಗಳೊಂದಿಗೆ ಕಾರ್ಯನಿರ್ವಹಿಸುತ್ತವೆ. ಈ ಮೂಲಕ, ಗ್ರಾಹಕರಿಗೆ ಪ್ರೇರಣೆಯಿಂದ ಹಿಡಿದು ಅಳವಡಿಕೆ ತನಕ ಸಂಪೂರ್ಣ ಮಾರ್ಗದರ್ಶನ ನೀಡುತ್ತವೆ. ಹೆಟಿಕ್‌ನ ಪ್ರೀಮಿಯಂ ಉತ್ಪನ್ನಗಳನ್ನು ವೀಕ್ಷಿಸಲು, ಗ್ರಾಹಕರು ಮತ್ತು ಉದ್ಯಮದ ವೃತ್ತಿಪರರು ಮೈಸೂರಿನ ವಿಜಯನಗರದ ೩ನೇ ಹಂತದ ಎ-೧ಬ್ಲಾಕ್ ಐಬಿಲ್ಡ್ ಹೆಟಿಕ್ ಎಕ್ಸ್‌ಕ್ಲೂಸಿವ್ ಸ್ಟೋರ್ ಗೆ ಬೇಟಿ ನೀಡಬಹುದಾಗಿದೆ.
ಮೈಸೂರಿನಲ್ಲಿ ಹೆಟಿಕ್‌ನ ಮೊದಲ ಎಕ್ಸ್‌ಕ್ಲೂಸಿವ್ ಸ್ಟೋರ್ ಹೆಕ್ಸ್ ಶುಭಾರಂಭ

Leave a Comment
Leave a Comment