27ಕ್ಕೆ ಸಂಘಟನೆಗಳಿಂದ ತಮಟೆ ಚಳವಳಿ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು:ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುವ ಮೂಲಕ ಟಿ. ನರಸೀಪುರದಲ್ಲಿ ನಡೆದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅಪಮಾನಿಸಿರುವ ಆರ್. ಭಾಸ್ಕರ್ ಪ್ರಸಾದ್ ಹಾಗೂ ಅರುಣ್‌ಕುಮಾರ್ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಅ. ೨೭ ರಂದು ಬೆಳಗ್ಗೆ ೧೧ಕ್ಕೆ ಎಸ್‌ಪಿ ಕಚೇರಿ ಬಳಿ ದಲಿತ ಮಹಾಸಭಾ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾನತಾಡಿ, ಕೂಡಲೇ ಈ ಇಬ್ಬರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಲಾಗುವುದೆಂದರು.
ಒಳ ಮೀಸಲಾತಿ ವಿಷಯದಲ್ಲಿ ಅನ್ಯಾಯವಾಗಿದ್ದರೆ ಸರ್ಕಾರದ ಮುಂದೆ ಹಾಗೂ ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ. ಆದರೆ ಇವರು ಬಿಜೆಪಿ ಕುತಂತ್ರಕ್ಕೆ ಒಳಗಾಗಿ ಎಚ್.ಸಿ. ಮಹದೇವಪ್ಪ ಹಾಗೂ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿರಿಸಿಕೊಂಡಿದ್ದಾರೆ. ಪ್ರತಿಭಟನೆ ವೇಳೆ ಮಹದೇವಪ್ಪ ಅವರ ಭಾವಚಿತ್ರವನ್ನು ಅಪಮಾನಿಸಲಾಗಿದೆ. ಇವರು ಮೈಸೂರು ಭಾಗದಲ್ಲಿ ವಾತಾವರಣ ಕಲುಷಿತಗೊಳಿಸುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ಭಾಸ್ಕರ್ ಪ್ರಸಾದ್ ಹಾಗೂ ಅರುಣ್‌ಕುಮಾರ್ ಅವರು ರಾಜಕೀಯ ಸ್ಥಾನ ಮಾನಕ್ಕಾಗಿ ಎರಡು ಜಾತಿಗಳ ನಡುವೆ ಸಂಘರ್ಷವುಂಟು ಮಾಡುತ್ತಿದ್ದಾರೆ. ಆದರೂ ಪೊಲೀಸರು ಇವರನ್ನು ಬಂಧಿಸದೇ ಕಾಲಹರಣ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಮಹಾಸಭಾ ಮುಖಂಡ ಎಸ್. ರಾಜೇಶ್, ಮಹೇಶ್ ಅಶೋಕಪುರಂ, ಯೋಗೇಶ್ ಉಪ್ಪಾರ್, ಸೈಯದ್ ಫಾರೂಕ್, ಲೋಕೇಶ್ ಮಾದಾಪುರ, ಗುರುದೇವ ರಾಮಪ್ಪ ಇನ್ನಿತರರು ಇದ್ದರು.

Share This Article
Leave a Comment