ವಾಲ್ಮೀಕಿ ಸಮುದಾಯದ ವಿರುದ್ಧ ಅವಹೇಳನ ಖಂಡಿಸಿ ಪ್ರತಿಭಟನೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ವಾಲ್ಮಿಕಿ ಸಮಾಜದ ವಿರುದ್ಧವಾಗಿ ಅಶ್ಲೀಲ ಪದ ಬಳಕೆ ಮಾಡಿ ಬೇಡ ಜನಾಂಗವನ್ನು ನಿಂದಿಸಿ ಅಪಮಾನ ಮಾಡಿರುವ ಮಾಜಿ ಸಂಸದ ರಮೇಶ್ ವಿಶ್ವನಾಥ್ ಕತ್ತಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಪುರಭವನದ ಬಳಿ ಪ್ರತಿಭಟನೆ ನಡೆಸಲಾಯಿತು.
 ನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ಮಾತನಾಡಿ, ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಅ.೧೯ರಂದು ಬಿ.ಕೆ.ಮಾಡೆಲ್ ಸ್ಕೂಲ್ ಆವರಣದಲ್ಲಿ ಮಾಜಿ ಸಂಸದ ರಮೇಶ್ ವಿಶ್ವನಾಥ್ ಕತ್ತಿ ಅವರು ಉದ್ದೇಶಪೂರ್ವಕವಾಗಿ ನಿಂದಿಸಿ ಅವಮಾನಸಿದ್ದಾರೆ. ಸುಮಾರು ೭೦ ಲಕ್ಷಕ್ಕೂ ಅಽಕ ಜನಸಂಖ್ಯೆಯುಳ್ಳ ನಾಯಕ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುತ್ತದೆ ಹಾಗೂ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.
ರಮೇಶ್ ವಿಶ್ವನಾಥ್ ಕತ್ತಿಯವರು ಈಗಾಗಲೇ ಹುಕ್ಕೇರಿ ವಿದ್ಯುತ್ ಮಂಡಳಿ ಚುನಾವಣೆ ಸಂದದಿಂದಲೂ ನಿರಂತರವಾಗಿ ವಾಲ್ಮೀಕಿ ಸಮುದಾಯದವರನ್ನು ಅವಹೇಳನಕಾರಿಯಾಗಿ ನಿಂದಿಸುವ ಕೆಲಸ ಮಾಡುತ್ತಿರುತ್ತಾರೆ. ಮೇಲು, ಕೀಳು ಭಾವನೆಗಳನ್ನು ಭಿತ್ತುತ್ತಿದ್ದು, ಇದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ಅಪಮಾನ ತಳಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿರುವ ಇವರ ವಿರುದ್ಧ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ರಾಜ್ಯಾದ್ಯಕ್ಷ ದೇವರಾಜು ಟಿ.ಕಾಟೂರು, ಉಪಾಧ್ಯಕ್ಷ ಶಿವಕುಮಾರಸ್ವಾಮಿ, ಮುಖಂಡರುಗಳಾದ ಸಿ.ಸ್ವಾಮಿ, ಎಡತಲೆ ಶಿವಕುಮಾರ್, ಪಿ.ಎಲ್.ಸ್ವಾಮಿ, ವಿಜಯ ಕುಮಾರ್, ನೃಪತುಂಗ, ಶಿವಕುಮಾರ್, ಸುರೇಶ್, ಶಿವಣ್ಣ, ಮಹದೇವು, ಅಂಕಯ್ಯ, ಪ್ರಕಾಶ್ ಸೇರಿ ಇತತರಿದ್ದರು.

Share This Article
Leave a Comment