ಮೈಸೂರು: ರಾಜ್ಯ ಒಕ್ಕಲಿಗರಸಂಘದ ವತಿಯಿಂದ ಮೈಸೂರು ನಗರದ ವಿಜಯನಗರದ 1ನೇ ಹಂತದಲ್ಲಿರುವ ವಿದ್ಯಾರ್ಥಿನಿಯರ ಉಚಿತ ವಿದ್ಯಾರ್ಥಿ ನಿಲಯದ ಕಟ್ಟಡದ ಮೇಲೆ ಎರಡನೇ ಹಾಗೂ ಮೂರನೇ ಅಂತಸ್ತಿನ ಕಾಮಗಾರಿ ನಿರ್ಮಾಣ ಶಂಕುಸ್ಥಾಪನೆಯನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ನೇರವೇರಿಸಿದರು.
ಈ ವೇಳೆ ರಾಜ್ಯ ಒಕ್ಕಲಿಗರ ಸಂಘದ ಕಾಮಗಾರಿ ಸಮಿತಿಯ ಅಧ್ಯಕ್ಷ ಸಿ.ಜಿ.ಗಂಗಾಧರ್ ಮಾತನಾಡಿ, ಪ್ರಸ್ತುತ ಮೈಸೂರಿನಲ್ಲಿ ೫೮೦ಮಂದಿ ವಿದ್ಯಾರ್ಥಿನಿಯರು ಅನುಕೂಲ ಪಡೆದಕೊಂಡಿದ್ದು, ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ೮ ಕೋಟಿ ೧೦ ಲಕ್ಷ ಅನುದಾನದ ಮೂಲಕ ಹೆಚ್ಚುವರಿ ೩೦೦ ವಿದ್ಯಾರ್ಥಿನಿಯರಿಗೆ ಕೊಠಡಿ ನಿರ್ಮಿಸುವ ಕಾಮಗಾರಿಗೆ ಅಧ್ಯಕ್ಷರು ಶಿಲ್ಯಾನ್ಯಾಸ ಉದ್ಘಾಟಿಸಿದಾರೆ ಎಂದರು.
ಮಾತ್ರವಲ್ಲದೆ, ಈಗಾಗಲೇ ರಾಜ್ಯ ಸಭೆಯಲ್ಲಿ ಬೆಂಗಳೂರು ಮಾದರಿ ಮೈಸೂರಿನಲ್ಲೂ ವಿದ್ಯಾರ್ಥಿನಿಲಯ, ಆಸ್ಪತ್ರೆ ಮೊದಲಾದವುಗಳನ್ನು ಸ್ಥಾಪಿಸುವ ಸಂಬಂಧ ೨೭ಎಕರೆ ಭೂಮಿಯ ಹುಡುಕಾಟ ನಡೆದಿದೆ. ಅದು ಸಿಕ್ಕ ಬಳಿಕ ಮೈಸೂರಿನಲ್ಲೂ ಸಮುದಾಯದ ಆಸ್ಪತ್ರೆ, ಬಾಲಕರ ವಿದ್ಯಾರ್ಥಿನಿಲಯ ಮತ್ತಷ್ಟು ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ಸದರಿಗೆ ಈಗಾಗಲೇ ರಾಜ್ಯ ನಿರ್ದೇಶಕ ಊಮಾಪತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ಉಪಾಧ್ಯಕ್ಷ ರೇಣುಕಾ ಪ್ರಸಾದ್, ಕಾರ್ಯದರ್ಶಿ ಕೋನಪ್ಪ ರೆಡ್ಡಿ, ಸಹಕಾರ್ಯದರ್ಶಿ ಹನುಮಂತ ರಾಯಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ಎಂ.ಬಿ.ಮಂಜೇಗೌಡ, ನಾರಯಣಸ್ವಾಮಿ, ಡಾ.ಅಂಜನಪ್ಪ, ಚಂದ್ರಮೌರ್ಯ, ಅಶೋಕ್ ಜಯರಾಮ್, ಪೂರ್ಣೇಶ್, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಈ.ಚೇತನ್ ಇನ್ನಿತರರು ಉಪಸ್ಥಿತರಿದ್ದರು.