ಪಬ್ಲಿಕ್ ಅಲರ್ಟ್
ಬೆಂಗಳೂರು: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಪರಿಪೂರ್ಣವಾಗಿ ಸಾರ್ವಜನಿಕರು ಪಾಲ್ಗೋಳ್ಳದೇ ಇರುವುದರಿಂದ ಸಮೀಕ್ಷೆಯನ್ನು ವಿಸ್ತರಿಸಬೇಕೆಂದು ಕರ್ನಾಟಕ ರಾಜ್ಯ ಒಕ್ಕಲಿಗ ಸಂಘ ಹಾಗೂ ಸಮುದಾಯದ ಮಠಾಧೀಪತಿಗಳು ಒತ್ತಾಯಿಸಿದರು.
ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಕುರಿತ ಒಕ್ಕಲಿಗ ಸಮುದಾಯ ಮುಖಂಡರ ಹಾಗೂ ಮಠಾದೀಶರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಟ್ಟನಾಯಕನಹಳ್ಳಿ ಪೀಠಾಧಿಪತಿ ಶ್ರೀ ನಂಜಾವದೂತ ಸ್ವಾಮೀಜಿ, ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಮಾತನಾಡಿ, ಒಕ್ಕಲಿಗ ಸಮುದಾಯದವರು ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಿ ತಮ್ಮ ಕುಟುಂಬದ ವಿವರವನ್ನು ಗಣತಿದಾರರಿಗೆ ಸ್ಪಷ್ಟವಾಗಿ ನೀಡಬೇಕು,ಜಾತಿ ಕಲಂ ನಲ್ಲಿ ಒಕ್ಕಲಿಗರು ಒಕ್ಕಲಿಗ ಎಂದು ಬರೆಸಬೇಕು ಉಪ ಜಾತಿ ಕಲಂನಲ್ಲಿ ತಮ್ಮ ಉಪ ಪಂಗಡದ ಹೆಸರು ಬರೆಸಬೇಕು ಇಲ್ಲವಾದರೆ ಒಕ್ಕಲಿಗ ಎಂದು ಬರೆಸುವುದು ಒಳಿತು ಎಂದು ಸಲಹೆ ನೀಡಿದರು.
ನಗರ ಪ್ರದೇಶದಲ್ಲಿ ವಾಸವಾಗಿರುವ ಶೇ90ರಷ್ಟು ಒಕ್ಕಲಿಗರು ಬಡತನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.ವಸತಿ ರಹಿತರಾಗಿ ಬದುಕುತ್ತಿದ್ದಾರೆ. ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಪಾರದರ್ಶಕವಾಗಿರಬೇಕು ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ.ಉದ್ಯೋಗ ಸೇರಿ ಬೇರೆ ಬೇರೆ ನಿಮಿತ್ತ ಹೊರಗಡೆ ತೆರಳಿರುವ ಜನರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವ ಹಿನ್ನಲೆಯಲ್ಲಿ ಇದನ್ನು ಕನಿಷ್ಠ 60ದಿನಗಳವರೆಗೆ ನಡೆಸಬೇಕು ಎಂದು ಸಲಹೆ ನೀಡಿದರು. ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ,ನಿರ್ದೇಶಕರಾದ ವೆಂಕಟರಾಮೇಗೌಡ ಸೇರಿ ವಿವಿಧ ನಿರ್ದೇಶಕರು ಭಾಗವಹಿಸಿದ್ದರು.
