ವರದಿ : ಎಂ.ಪಿ ರಾಕೇಶ್
ಮೈಸೂರು: ಬಿಜೆಪಿ ಮತಗಳ್ಳತನ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿ ಕೃಷ್ಣರಾಜ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚೋರ್ ಚೋರ್ ಮೋದಿ ಚೋರ್, ಮತ ಕಳ್ಳತನ ಮಾಡಿರುವ ಕೇಂದ್ರ ಸರಕಾರಕ್ಕೆ ಧಿಕ್ಕಾರ, ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ, ಸ್ಟಾಪ್ ವೋಟ್ ಚೋರಿ, ಸಂವಿಧಾನ ದುರ್ಬಳಕೆಗೆ ಬಿಜೆಪಿ ಹುನ್ನಾರ ಎಂಬ ಪೋಸ್ಟರ್‌ಗಳನ್ನು ಆಟೋ, ಬಸ್‌ಗಳಿಗೆ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಬಿಜೆಪಿ ಮತಗಳ್ಳತನ ಮಾಡಿ ಅಧಿಕಾರ ಹಿಡಿದಿದೆ. ಬಿಹಾರದಲ್ಲಿ ೬೫ ಲಕ್ಷ ಮತದಾರರನ್ನು ಕೈ ಬಿಟ್ಟಿದ್ದಾರೆ. ಕಾಂಗ್ರೆಸ್ ಪರ ಇರುವ ಹಿಂದುಳಿದ ಅಲ್ಪಸಂಖ್ಯಾತ ಬಡವರ ಮತಗಳನ್ನು ತೆಗೆದು ಹಾಕಿ ತಮಗೆ ಬೇಕಾದವರನ್ನು ಎಲ್ಲಾ ಕಡೆ ಸೇರಿಸಿದ್ದಾರೆ. ಇದರ ಬಗ್ಗೆ ಎಚ್ಚರಿಸಬೇಕಾಗಿದೆ. ನಾವೆಲ್ಲ ಬೂತ್ ಮಟ್ಟದಲ್ಲಿ ಎಲ್ಲೆಲ್ಲಿ ಮತಗಳ್ಳತನ ಆಗಿದೆ ಅದನ್ನು ಪರಿಶೀಲನೆ ಮಾಡಬೇಕಿದೆ. ಇಲ್ಲವಾದರೆ ಇದೆ ರೀತಿ ಮೋಸ ಮಾಡಿ ಅಧಿಕಾರ ಹಿಡಿಯುತ್ತಾ ಇರುತ್ತಾರೆ ಎಂದು ದೂರಿದರು.
ಈಗಾಗಲೇ ರಾಹುಲ್‌ಗಾಂಧಿ ಅವರು ಸಾಕ್ಷಿ ಸಮೇತ ಮತಗಳ್ಳತನ ಬಹಿರಂಗಪಡಿಸಿದ್ದಾರೆ. ಇದರ ವಿರುದ್ದ ನಿರಂತರ ಹೋರಾಟ ಮಾಡಬೇಕಿದೆ. ಬೂತ್ ಮಟ್ಟದಲ್ಲಿ ಆಗುವ ಅನ್ಯಾಯ ತಡೆಯಬೇಕು. ಜನ ನಮ್ಮ ಪರ ಇದ್ದಾರೆ. ಆದರೆ, ಮೋಸ ಮಾಡಿ ಬಿಜೆಪಿಯವರು ಗೆದ್ದಿದ್ದಾರೆ. ಮಹಾರಾಷ್ಟ್ರದಲ್ಲೂ ಮತಗಳ್ಳತನ ನಡೆದಿದ್ದು, ಇದನ್ನು ನಾವು ಜನರಿಗೆ ತಿಳಿಸಬೇಕು. ಮತ ಕಳ್ಳತನ ಆಗದಿದ್ದರೆ ಬೇರೆ ಬೇರೆ ಪಕ್ಷಗಳು ಗೆಲ್ಲುತ್ತಿದ್ದವು ಎಂದರು.
ಪ್ರತಿಭಟನೆಯಕ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಹೊಯ್ಸಳ, ಡೈರಿ ವೆಂಕಟೇಶ್, ರೋಹಿತ್, ಮೋಹನ್, ನಾಜೀರ್, ಫಾರೂಕ್, ಖಲೀಂ, ಕುಮಾರ್, ವಿವೇಕ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಿಜೆಪಿ ವಿರುದ್ಧ ಯುವಕಾಂಗ್ರೆಸ್ ಪ್ರತಿಭಟನೆ

Leave a Comment
Leave a Comment