ಮೈಸೂರಿನಲ್ಲೂ ಮತಗಳ್ಳತನ ನಿಲ್ಲಿಸಿ ಅಭಿಯಾನ

admin
1 Min Read

ಮೈಸೂರು: ಮತಕಳ್ಳತನ ನಿಲ್ಲಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ “ಸ್ಟಾಪ್ ವೋಟ್ ಚೂರಿ” ಅಭಿಯಾನ ನಡೆಸಲಾಯಿತು.
ಮೈಸೂರು ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸುಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಸ್ಟಾಪ್ ವೋಟ್ ಚೂರಿ ಅಭಿಯಾನಕ್ಕೆ ಚಾಲನೆ ನೀಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ,ದೇಶದಲ್ಲಿ ಓಟ್ ಕಳ್ಳತನ ಮಾಡಿ ನರೇಂದ್ರಮೋದಿ ಮತ್ತು ಅಮಿತ್ ಷಾ ಸುಮಾರು ಹದಿನೆಂಟು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದೆ. ರಾಹುಲ್ ಗಾಂಧಿ ಸಾಕ್ಷಿ ಸಮೇತ ದೂರು ನೀಡಿದರೇ ಮುಖ್ಯ ಚುನಾವಣಾ ಆಯುಕ್ತರರು ಅಫಿಡವಿಟ್ ನೀಡಿ ಎಂದು ತಾಕೀತು ಮಾಡುತ್ತಾರೆ. ಮುಖ್ಯ ಚುನಾವಣಾ ಆಯುಕ್ತರು ಬಿಜೆಪಿ ಏಜೆಂಟ್ ಆಗಿ ವರ್ತಿಸುತ್ತಿದ್ದಾರೆ. ವಿಪಕ್ಷಗಳಿಗೆ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಮೈಸೂರಿನಲ್ಲೂ ಹಾಲಿ ಸಂಸದರೂ ಮತಗಳ್ಳತನದಿಂದಲೇ ಗೆದ್ದಿದ್ದಾರೆ. ಚಾಮರಾಜ, ಕೃಷ್ಣರಾಜ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ್ಲಲಿ ಮತಗಳ್ಳತನ ಆಗಿದೆ. ಈ ಬಗ್ಗೆ ರಾಷ್ಟ್ರವ್ಯಾಪಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಮೈಸೂರಿನಲ್ಲಿಯೂ ಪ್ರತಿಭಟನೆ ನಡೆಸುತ್ತಿದ್ದೇವೆಂದು ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಜಿಲ್ಲಾ ಕಾಂಗ್ರೆಸ್‌ ಸಮಿತಿ ವಕ್ತಾರ ಕೆ.ಮಹೇಶ್‌, ಮೈಸೂರು ನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್, ಉಪಾಧ್ಯಕ್ಷ ವಿನೋದ್ ಕುಮಾರ್, ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ಮನೋಜ್‌, ಲಖನ್, ವಿಕಾಸ್, ಮೈಸೂರು ಬಸವಣ್ಣ, ಶಶಿಕಾಂತ್, ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿಯ ರಾಕೇಶ್, ಮಲ್ಲೇಶ್, ಹೇಮಂತ್, ಪವನ್, ಕೆ.ಅಕ್ಷಯ, ಅದ್ನಾನ್, ಚಂದ್ರಶೇಖರ್, ಮಿನಾಜ್, ಚಂದ್ರ ಕುಮಾರ್, ಇನಾಯತ್, ಶಫಿ, ರಾಕೇಶ್, ವಿನಯ್, ಕುಮಾರ್, ಮಣಿ ಸೇರಿ ಇನ್ನಿತರರು ಪದಾಧಿಕಾರಿಗಳು ಇದ್ದರು.

Share This Article
Leave a Comment