ಪೌರ ಕಾರ್ಮಿಕರಿಗೆ ಬಾಗಿನ ವಿತರಣೆ

Pratheek
1 Min Read



ಪಬ್ಲಿಕ್‌ ಅಲರ್ಟ್‌


ಮೈಸೂರು: ತಮ್ಮ ವಾರ್ಡಿನ ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ವಿತರಿಸುವ ಮೂಲಕ ೪೫ನೇ ವಾರ್ಡಿನ ನಗರಪಾಲಿಕೆ ಮಾಜಿ ಸದಸ್ಯೆ ನಿರ್ಮಲ ಹರೀಶ್‌ ಗೌರಿ-ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಬಳಿಕ ಮಾತನಾಡಿದ ನಿರ್ಮಲ ಹರೀಶ್‌, ವಾರ್ಡಿನ ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ನೀಡುವ ಮೂಲಕ ಗೌರಿಗಣೇಶ ಹಬ್ಬವನ್ನು ಆಚರಿಸುತ್ತಿದ್ದೇವೆ. ಪ್ರತಿದಿನ ಯಾವುದೇ ಮುಜುಗರ ವ್ಯಕ್ತಪಡಿಸದೇ ವಾರ್ಡಿನ ಸ್ವಚ್ಚತೆ ನಿರ್ವಹಣೆ ಮಾಡುವ ಜವಬ್ದಾರಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಹಬ್ಬ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 
ನಗರಪಾಲಿಕೆ ಸದಸ್ಯರಾಗಿದ್ದಾಗಿನಿಂದಲೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಾರೆ. ಮಾತ್ರವಲ್ಲದೆ, ನಮ್ಮಿಂದಲೇ ನಾಡಧ್ವಜವನ್ನು ಹಾರಾಟ ಮಾಡಿಸುವ ಮೂಲಕ ನಮಗೂ ಆದ್ಯತೆ ನೀಡುವ ಆತ್ಮೀಯತೆ ತೋರುತ್ತಿರುವುದು ನಿಜಕ್ಕೂ ಖುಷಿ ತರಿಸಿದೆ ಎಂದು ಪೌರಕಾರ್ಮಿಕ ಮಹಿಳೆ ಸಂತಸ ಹಂಚಿಕೊಂಡರು.

Share This Article
Leave a Comment