ಪಬ್ಲಿಕ್ ಅಲರ್ಟ್
ಮೈಸೂರು: ನವರಾತ್ರಿ ಎರಡನೇ ದಿನದಂದು ಒಂದೆಡೆ ಮಹಿಳಾ ದರ್ಬಾರಿನ ದಸರಾ ಶುರುವಾಗಿದ್ದರೆ ಮತ್ತೊಂದೆಡೆ ಅಂತಿಮ ತಾಲೀಮಿನಲ್ಲೂ ಗಜಪಡೆ ಸೈ ಎನಿಸಿಕೊಂಡಿವೆ. ಮತ್ತೊಂದೆಡೆ ಚಿಂತಕರ ವೇದಿಕೆಯಲ್ಲಿ ಪಂಚಗವ್ಯದ ರಸದೌತಣ ನೀಡುವ ಮೂಲಕ ನಾಡಹಬ್ಬ ದಸರೆಯ ಸಂಭ್ರಮ ಮೈಸೂರಿನಲ್ಲಿ ಕಳೆಗಟ್ಟಿದೆ.
ಮಂಗಳವಾಗಿದ್ದರಿಂದ ಮಹಾರಾಜ ಕಾಲೇಜು ಮೈದಾನದ ಆಹಾರ ಮೇಳದ ೧೬೦ ಮಳಿಗೆಗಳತ್ತ ಆಹಾರ ಪ್ರಿಯರು ಮುತ್ತಿಗೆ ಹಾಕಿದ್ದರು. ಮತ್ತೊಂದೆಡೆ ಬೆಳಿಗ್ಗೆಯೇ ಅರಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿದ ಮಹಿಳೆಯರು ಸ್ಕೌಟ್ಸ್ ಅಂಡ್ ಗ್ಲೈಡ್ಸ್ ಮೈದಾನದ ತುಂಬಾ ತಮ್ಮ ದರ್ಬಾರ್ ಶುರು ಮಾಡಿದರು. ಮತ್ತೊಂದೆಡೆ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಚಿಂತಕರ ಪಂಚಗಾವ್ಯ ಕವಿಗೋಷ್ಠಿ ಪ್ರಾರಂಭ ಚಿಂತನಾ ಚಾವಡಿಯಾಗಿ ಪರಿಣಮಿಸಿತು. ಅದರಲ್ಲೂ ಎರಡನೇ ದಿನ ಬಯಲರಂಗಮಂದಿರದಲ್ಲಿ ದಾಖಲೆ ಮಂದಿ ಸೇರಿ ನಾಡಗೀತೆಯನ್ನು ಹಾಡಿ ನೆರೆದಿದ್ದವರ ಮನಗೆದ್ದರು.
ಮತ್ತೊಂದೆಡೆ ನಟಿ ರಚಿತರಾಮ್ ಆಗಮಿಸಿ ದಸರಾ ಕೇಕ್ ಶೋ ಮೇಳವನ್ನು ಉದ್ಘಾಟಿಸಿದರೆ, ಸಚಿವರಾದ ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ದಸರೆಯ ಕೇಂದ್ರ ಬಿಂದುವಾಗಿದ್ದರು. ಮಾತ್ರವಲ್ಲದೆ, ಈಗಾಗಲೇ ಉದ್ಘಾಟನೆಗೊಂಡಿರುವ ಫಲಪುಷ್ಪ ಪದರ್ಶನ, ವಸ್ತು ಪ್ರದರ್ಶನ, ಕುಸ್ತಿ ಅಖಾಢದತ್ತಲೂ ಜನ ಜಂಗುಳಿ ಆಗಮಿಸಿತು. ಮಾತ್ರವಲ್ಲದೆ ರಾಜ್ಯ ಮಟ್ಟದ ಓಟ, ಈಜು ಮೊದಲಾದ ಆಟೋಟಗಳು ದಸರ ಸಂಭ್ರಮ ಇಮ್ಮಡಿಗೊಳಿಸಿದವು.






ಇಂದಿನ ಕಾರ್ಯಕ್ರಮ: ಬೆ.೧೦.೩೦ಕ್ಕೆ ನಟ ಜೋಗಿ ಪ್ರೇಮ್ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿರುವ ಪ್ರಚುರ ಕವಿಗೋಷ್ಠಿಯಲ್ಲಿ ಭಾಗವಹಿಸುವರು. ಜತೆಗೆ ಎಂದಿನಂತೆ ಮಹಿಳಾ ಮತ್ತು ಮಕ್ಕಳ ದಸರೆಯಲ್ಲಿ ಆಟೋಟ ಸ್ಪರ್ಧೆ ನಡೆಯಲಿದೆ. ಆಹಾರ ಮೇಳದಲ್ಲಿಯೂ ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಯುವ ದಸರಾದಲ್ಲಿಎರಡನೇ ದಿನ ತನ್ನ ಹವಾ ನೀಡಲಿದೆ.
