ಪಬ್ಲಿಕ್ ಅಲರ್ಟ್
ಮೈಸೂರು:ರಾಮಕೃಷ್ಣ ನಗರದ ಪರಮಹಂಸ ಯೋಗ ಮಹಾ ವಿದ್ಯಾಲಯ, ಅಂತಾರಾಷ್ಟ್ರೀಯ ಯೋಗ ಶಾಲೆಗಳ ಸಂಯುಕ್ತಾಶ್ರಯದಲ್ಲಿ ೩ ತಿಂಗಳ ಹೊಸ ಯೋಗ ಟೀಚರ್ ತರಬೇತಿ ಕೋರ್ಸ್ ಆರಂಭವಾಗಲಿದೆ ಎಂದು ಅಧ್ಯಕ್ಷ ಯೋಗ ಪ್ರವೀಣ ಶಿವಪ್ರಕಾಶ್ ಗುರೂಜಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಇದು ಆಫ್ಲೈನ್ ಹಾಗೂ ಆನ್ಲೈನ್ ಕೋರ್ಸ್ ಆಗಿದ್ದು, ವಾರಾಂತ್ಯದ ದಿನಗಳಲ್ಲಿ ನಡೆಯಲಿದೆ. ನುರಿತ ಯೋಗ ತಜ್ಞರು ಹಾಗೂ ಪರಿಣಿತ ವೈದ್ಯರ ಮಾರ್ಗದರ್ಶನದಲ್ಲಿ ಯೋಗಾಸನ, ಯೋಗ ಥೆರಪಿ. ಪ್ರಾಣಾಯಾಮ, ಧ್ಯಾನ, ಮುದ್ರಾ ಕ್ರಮ, ಮನೆ ಮದ್ದು, ಜೀವನ ಕೌಶಲ್ಯ ಇತ್ಯಾದಿಗಳನ್ನು ಕಲಿಸಲಾಗುವುದು. ನ. ೮ ರಿಂದ ತರಬೇತಿ ಪ್ರಾರಂಭವಾಗಲಿದ್ದು, ಪೂರ್ಣಗೊಳಿಸಿದವರಿಗೆ ಆಯುಷ್ ಇಲಾಖೆ ಪ್ರಮಾಣ ಪತ್ರ ನೀಡಲಿದೆ ಎಂಧರು.
ಹೆಚ್ಚಿನ ಮಾಹಿತಿಗೆ ದೂ. ೭೦೯೦೧ ೫೭೯೯೩ ನ್ನು ಸಂಪರ್ಕಿಸಬಹುದಾಗಿದೆ. ಶುಲ್ಕ ಸುಮಾರು ೨೨ ಸಾವಿರ ರೂ.ಗಳಾಗಿವೆ. ೩೦ ಮಂದಿಗೆ ಮಾತ್ರ ಅವಕಾಶವಿದೆ ಎಂದರು. ಡಾ.ಎಸ್. ಕಾವ್ಯ, ಯೋಗ ಪ್ರಕಾಶ್, ಸುಮನಾ, ವಿಜಯಕುಮಾರ್, ದೇವರಾಜ್ ಇದ್ದರು.
ಯೋಗ ಶಿಕ್ಷಕರ ತರಬೇತಿ ಆರಂಭ
Leave a Comment
Leave a Comment
