ಮೃಗಾಲಯ ಅರಿತು ಅಭಿವೃದ್ಧಿ ಮಾಡುವೆ: ನೂತನ ಅಧ್ಯಕ್ಷ ರಂಗಸ್ವಾಮಿ 

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ನನಗೆ ಮೈಸೂರು ಮೃಗಾಲಯ ಭಾಗದ ಕಾರ್ಯವ್ಯಾಪ್ತಿಯ ಅರಿವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅದೆಲ್ಲವನ್ನೂ ಅರಿತು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕಾರ್ಯನಿರತನಾಗುತ್ತೇನೆಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ನೂತನ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಭರವಸೆ ವ್ಯಕ್ತಪಡಿಸಿದರು.
ಕೂರ್ಗಳ್ಳಿ ಶ್ರೀ ಚಾಮರಾಜೇಂದ್ರ ಮೃಗಾಲಯದ ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್‌ ವಸತಿ ಕೇಂದ್ರದಲ್ಲಿರುವ ತಮ್ಮ ಕಚೇರಿಯಲ್ಲಿ ಶತಮಾನಗಳ ಇತಿಹಾಸವುಳ್ಳ ಕರ್ನಾಟಕ ಮೃಗಾಲಯ ಪ್ರಾಧಿಕಾರದ ೪೧ನೇ ಅಧ್ಯಕ್ಷನನ್ನಾಗಿ ರಂಗಸ್ವಾಮಿಯವರು ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿ, ಮುಖ್ಯಮಂತ್ರಿಗಳು ನನಗೆ ಈ ಹುದ್ದೆ ನೀಡುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಆತ್ಮೀಯತೆಯ ನಂಬಿಕೆಯಿಟ್ಟು ಹುದ್ದೆ ನೀಡಿದ್ದಾರೆ. ಅವರಿಗೆ ಒಪ್ಪುವ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ. ಇನ್ನೂ ಮೃಗಾಲಯಗಳ ಅಭಿವೃದ್ಧಿ ವಿಚಾರವಾಗಿ ಮೊದಲಿಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಕೆಲಸ ಮಾಡುತ್ತೇನೆಂದರು.
ರಾಜ್ಯದ ಎಲ್ಲಾ ಮೃಗಾಲಯಗಳಿಗೂ ಹಂತ ಹಂತವಾಗಿ ಭೇಟಿ ನೀಡುತ್ತೇನೆ. ಅಗತ್ಯ ಬಿದ್ದರೆ ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರಿಂದ ಮೃಗಾಲಯಗಳ ಕುರಿತಂತೆ ಅಭಿಪ್ರಾಯ ಸಂಗ್ರಹಿಸುತ್ತೇನೆ. ಅವರ ಅಭಿಪ್ರಾಯಕ್ಕೆ ಅನುಗುಣವಾಗಿ ನನ್ನ ವ್ಯಾಪ್ತಿಯಲ್ಲಿ ಮಾಡಬಹುದಾದ ಎಲ್ಲಾ ಅಭಿವೃದ್ಧಿಯನ್ನು ಮಾಡಲು ಕ್ರಮವಹಿಸುತ್ತೇನೆ. ನನಗೆ ಅಧಿಕಾರ ನೀಡಲು ಕಾರಣರಾದ ಸಿಎಂ, ಡಿಸಿಎಂ ಹಾಗೂ ಸಚಿವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆಂದರು.
ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿ.ವಿಜಯಕುಮಾರ್, ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ.ಬಸವರಾಜ್, ಕೆಪಿಸಿಸಿ ಕಾರ್ಯದರ್ಶಿ ಬೆಳಗಲಿ ಪುರುಷೋತ್ತಮ್, ಕರ್ನಾಟಕ ಇಂಧನ ಇಲಾಖೆ ಮಾಜಿ ನಿರ್ದೇಶಕ ಕಲ್ಮಳ್ಳಿ ಸುರೇಶ್ ಬಾಬು,  ಕಾರ್ಯದರ್ಶಿ ಬಿಳುಗಲಿ ಕುಮಾರ್, ಸುತ್ತೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಸೋಮಣ್ಣ, ರೈತ ಘಟಕದ ಜಿಲ್ಲಾಧ್ಯಕ್ಷ ಬಿ.ಮಹಾದೇವ, ಸೋಮಸುಂದರ್,  ಸಿ.ಆರ್.ಮಾದೇವ, ಶಿವಕುಮಾರ್, ದೇವನೂರು ಮಹದೇವಮ್ಮ, ಸಿ.ಆರ್.ಮಾದೇವ್, ಗಾರ್ಡನ್ ಮಹೇಶ್, ಹುಳಿಮಾವು ನಟರಾಜ್, ಆರ್.ಮಹದೇವ್, ಸಕಳ್ಳಿ ಬಸವರಾಜ್, ಹೊಸಕೋಟೆ ಬಸವರಾಜ್, ಕುಮಾರ್, ಹಾರಪುರ ಶಿವಣ್ಣ, ಚಿ.ಮಾರಳ್ಳಿ ಜಗದೀಶ್, ಜಯಶೀಲ, ಪುಟ್ಟಸ್ವಾಮಿ, ಮುನಿಯಪ್ಪ, ಮೂಡಳ್ಳಿ ಮಹದೇವಸ್ವಾಮಿ, ನಗರ್ಲೆ ನಾರಾಯಣನಾಯಕ, ಪ್ರಮೋದ್ ಕುಮಾರ್, ಚಿನ್ನಸ್ವಾಮಿ, ಕಾರ್ಯ ಮರಿಸ್ವಾಮಿ ನಾಯಕ, ಬಸವಣ್ಣ, ಚಿನ್ನಂಬಳ್ಳಿ ರಾಜು ಇನ್ನಿತರರು ಉಪಸ್ಥಿತರಿದ್ದರು.



ಬಾಕ್ಸ್‌
೪೧ನೇ ಅಧ್ಯಕ್ಷರಾಗಿ ಪದಗ್ರಹಣ
೨೦೨೦ ನ.೧೧ರಿಂದ ೨೦೨೨ ಸೆ.೭ರವರೆಗೆ ಎಲ್‌.ಆರ್‌.ಮಹದೇವಸ್ವಾಮಿ, ೨೦೨೨ರ ಸೆ.೨೨ರಿಂದ ೨೦೨೩ರ ಮೇ೨೨ರವರೆಗೆ ಎಂ.ಶಿವಕುಮಾರ್‌, ೨೦೨೩ರ ಮೇ.೨೯ರಿಂದ  ಏ.೧೩ರವರೆಗೆ ಡಿಸಿಎಫ್‌ ಜಾವೇದ್‌ ಅಖ್ತರ್‌ ಹಾಗೂ ೨೦೨೩ರ ಮೇ೧೩ರಿಂದ ಈವರೆಗೆ ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆಯವರೇ ಅಧ್ಯಕ್ಷರಾಗಿದ್ದರು. ಈಗ ಸರ್ಕಾರ ಇವರನ್ನು ನೇಮಿಸಿದ ಹಿನ್ನೆಲೆಯಲ್ಲಿ ೪೧ನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.


ಬಾಕ್ಸ್‌
ಒಬ್ಬ ಪ್ರವಾಸಿಗನಾಗಿ ಮೃಗಾಲಯಕ್ಕೆ ತುಂಬಾ ವರ್ಷಗಳ ಹಿಂದೆ ಭೇಟಿ ನೀಡಿದ್ದ ನೆನಪಿದೆಯಷ್ಟೇ, ನಿಜಕ್ಕೂ ಕನಸ್ಸಲ್ಲೂ ಅದೇ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷನಾಗುತ್ತೇನೆಂಧು ಭಾವಿಸಿರಲಿಲ್ಲ. ಈ ಅವಕಾಶ ನನ್ನ ಇಷ್ಟು ವರ್ಷದ ಸೇವೆಗೆ ನೀಡಿದ್ದಕ್ಕೆ ಅಭಾರಿಯಾಗಿರುವೆ.
-ರಂಗಸ್ವಾಮಿ, ಅಧ್ಯಕ್ಷ

Share This Article
Leave a Comment