ಇಂದಿನಿಂದಲೇ ಬಂಬೂ ಬಿರಿಯಾನಿ, ಕಾಡು ಸೊಪ್ಪಿನ ಸಾರು ಸವಿ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಆಹಾರ ಮೇಳದಲ್ಲಿ ಬುಡಕಟ್ಟು ಜನಾಂಗದವರು ಸ್ಥಳದಲ್ಲೇ ತಯಾರಿಸಿದ ಬಂಬೂ ಬಿರಿಯಾನಿ ಹಾಗೂ ಕಾಡು ಸೊಪ್ಪಿನ ಸಾರಿನ ಸವಿ ಇಂದಿನಿಂದಲೇ ಉಣಬಡಿಸಲು ಮಹಾರಾಜ ಕಾಲೇಜು ಮೈದಾನ ಸಿದ್ದವಾಗಿದೆ. 
ಈ ಕುರಿತು ಭಾನುವಾರ ನಗರದ ಗೋವರ್ಧನ್ ಹೋಟೆಲ್‍ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕೃತಿ ಆದಿವಾಸಿ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಎಂ.ಕೃಷ್ಣಯ್ಯ ಮಾತನಾಡಿ, ಕಾಡಿನ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸುವ ಮತ್ತು ಕೆಂಡದಲ್ಲಿ ಬೇಯಿಸುವ ಬಂಬೂ ಬಿರಿಯಾನಿ ಸವಿಯುವ ಸದಾವಕಾಶ ಸೆ.22 ರಿಂದ ಲಭ್ಯವಿದೆ.
ಅಕ್ಟೋಬರ್ 5 ರವರಿಗೆ ನಡೆಯುವ ಆಹಾರ ಮೇಳದಲ್ಲಿ ಆದಿವಾಸಿ ಬುಡಕಟ್ಟು ಶೈಲಿಯ ಆಹಾರಗಳಾದ ಬೆಂಕಿಯಿಂದ ಬೇಯಿಸಿದ ಬಿದಿರು ಬೊಂಬಿನ ಬಿರಿಯಾನಿ, ಬಿದರಕ್ಕಿ ಪಾಯಿಸ, ಮಾಕಳಿ ಬೇರಿನ ಟೀ, ಕಾಡುಗೆಣಸು, ಜೇನುತುಪ್ಪದ ಮಿಶ್ರಣ, ನಳ್ಳಿ ಸಾಂಬಾರು ಮುದ್ದೆ, ಕಾಡುನಲ್ಲಿಕಾಯಿ ವಿವಿಧ ಬಗೆಯ ಕಾಡು ಸೊಪ್ಪುಗಳಾದ, ಆಲೆಸೊಪ್ಪು,ಮಾಡಲೇ ಸೊಪ್ಪು, ತುಂಬೆ ಸೊಪ್ಪು, ಅಣ್ಣೆಸೊಪ್ಪು, ಇಂಡಿಸೊಪ್ಪು ಮುಂತಾದ ಸೊಪ್ಪಿನ ಪಲ್ಯಗಳನ್ನು ತಯಾರು ಮಾಡಲಾಗುವುದು ಎಂದರು.
ಕಾಡುಕೊತ್ತಂಬರಿ ಸೊಪ್ಪು, ಕಾಡು ಶುಂಠಿ, ಕಾಡು ಅರಿಸಿಣ ಮಿಶ್ರಿತ ಮಸಾಲೆಯೊಟ್ಟಿಗೆ ವಿವಿಧ ಬಗೆಯ ನೈಸರ್ಗಿಕವಾದಂತಹ ಆರೋಗ್ಯ ಪೂರಕವಾದ ಅಂತಹ ಔಷಧಿಗುಣವುಳ್ಳ ಆಹಾರಗಳನ್ನು ಸವಿಯಲು ಆಹಾರ ಪ್ರಿಯರು ಆದಿವಾಸಿ ಕುಟೀರಕ್ಕೆ ಭೇಟಿ ನೀಡಿ ಆದಿವಾಸಿ ಬುಡಕಟ್ಟು, ಆಹಾರಗಳನ್ನು ಪೆÇ್ರೀತ್ಸಾಹಿಸಲು ಎಂ.ಕೃಷ್ಣಯ್ಯ ನಾಗರಿಕರು ಮತ್ತು ಪ್ರಸಾಸಿಗರು ಹಾಗೂ ಆಹಾರ ಪ್ರಿಯರಲ್ಲಿ ಮನವಿ ಮಾಡಿದ್ದಾರೆ. ಆದಿವಾಸಿ ಕುಠೀರದಲ್ಲಿ ಕೊಡಗು ಜಿಲ್ಲೆ ಜಾನಪದ ಅಕಾಡೆಮಿ ಪುರಸ್ಕೃತರು ಹಾಗೂ ಗಿಡಮೂಲಿಕೆ ತಜ್ಞರಾದ ನಾಗಮ್ಮ ಅವರು ಸಹ ಆಹಾರ ಮೇಳದಲ್ಲಿ ಭಾಗವಹಿಸುತ್ತಿದ್ದು, ಅನೇಕ ಕಾಯಿಲೆಗಳಿಗೆ ಗಿಡಮೂಲಿಕೆ  ಔಷಧಿಗಳಿಂದ ಗುಣಪಡಿಸಲಿದ್ದು ಇದರ ಅವಕಾಶವನ್ನು ಪಡೆದುಕೊಳ್ಳಲು ಕೋರಲಾಗಿದೆ. ಸುದ್ದಿಗೋಷ್ಠಿಯಲ್ಲಿ ಕೃಷ್ಣಪ್ಪ, ಸೋಮಯ್ಯ ಮಲೆಯೂರು, ಜಿ.ಸ್ವಾಮಿ, ಮಂಗಳಪ್ಪ ಇದ್ದರು.

Share This Article
Leave a Comment