ಪಬ್ಲಿಕ್ ಅಲರ್ಟ್
ಮೈಸೂರು: ರಾಜೀವ್ ಸ್ನೇಹ ಬಳಗ, ವಿಪ್ರ ಮಹಿಳಾ ಬಳಗ ಹಾಗೂ ಕೃಷ್ಣ ಕಾಲಿಂಗ್ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ನಿವಾಸಿಗಳಿಗಾಗಿ ದಸರಾ ಹಬ್ಬದ ಪ್ರಯುಕ್ತ ಮನೆ ಮನೆ ಗೊಂಬೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಹಿಳಾ ಬಳಗದ ಅಧ್ಯಕ್ಷರಾದ ಡಾ. ಲಕ್ಷಿö್ಮ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸೆ. ೨೨ ರಿಂದ ಅ. ೨ ರವರೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಮೊದಲನೇ ಬಹುಮಾನವಾಗಿ ೨೫ ಸಾವಿರ, ೨ ನೇ ಬಹುಮಾನವಾಗಿ ೧೫ ಸಾವಿರ, ತೃತೀಯ ಬಹುಮಾನವಾಗಿ ೧೦ ಸಾವಿರ ಹಾಗೂ ೨೫ ಮಂದಿಗೆ ತಲಾ ಒಂದು ಸಾವಿರದಂತೆ ಸಮಾಧಾನಕರ ಬಹುಮಾನ ನೀಡಲಾಗುವುದು. ಆಸಕ್ತರು ವಾಟ್ಸಪ್ ಸಂಖ್ಯೆ ೯೯೦೦೧ ೫೨೮೬೭ ಅಥವಾ ೯೬೧೧೯ ೬೬೨೯೦ ಗೆ ತಮ್ಮ ಮನೆಯಲ್ಲಿ ಕೂರಿಸಿರುವ ಗೊಂಬೆ ಪ್ರದರ್ಶನದ ಫೋಟೋ ಕಳುಹಿಸಬೇಕು. ತೀರ್ಪುಗಾರರು ನಂತರ ಮನೆಗಳಿಗೆ ಭೇಟಿ ನೀಡಿ ಬಹುಮಾನ ನಿರ್ಧರಿಸಲಿದ್ದಾರೆಂದರು.
ವ್ಯವಸ್ಥಿತವಾಗಿ, ವಿಷಯಾಧಾರಿತವಾಗಿ ದಸರೆಯ ಗೊಂಬೆಗಳನ್ನು ಸುಂದರವಾಗಿ ಅಲಂಕರಿಸಿ ನವರಾತ್ರಿ ಹಿನ್ನೆಲೆಯಲ್ಲಿ ಜೋಡಿಸಿರಬೇಕು ಎಂದು ವಿವರಿಸಿದರು. ಕೃಷ್ಣ ಕಾಲಿಂಗ್‌ನ ಕೆ.ಆರ್. ಗಣೇಶ್‌ರಾವ್, ಇನ್ನಿತರ ಸಂಘ ಸಂಸ್ಥೆ ಪದಾಧಿಕಾರಿಗಳಾದ ಸುಮತಿ ಸುಬ್ರಹ್ಮಣ್ಯ, ರಾಧಿಕಾ ರವಿ, ಸುಧಾ ಸಿಂಧು ಹಾಜರಿದ್ದರು.
