ಪಬ್ಲಿಕ್ ಅಲರ್ಟ್
ಮೈಸೂರು: ಸರಸ್ವತಿ ಸಮ್ಮಾನ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸುವುದಾಗಿ ಪ್ರಕಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನವನ್ನು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸ್ವಾಗತಿಸಿದ್ದಾರೆ.
ಸಾಂಸ್ಕೃತಿಕ ನಗರ ಮೈಸೂರು ಎಸ್.ಎಲ್.ಭೈರಪ್ಪ ಅವರ ಕರ್ಮಭೂಮಿಯಾಗಿತ್ತು. ಅವರ ನಿವೃತ್ತಿ ಜೀವನವನ್ನು ಮೈಸೂರಿನಲ್ಲೇ ಕಳೆದಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲೇ ಅವರ ಹೆಸರಿನಲ್ಲಿ ಸ್ಮಾರಕ ಸ್ಥಾಪಿಸುವುದು ಸಮಯೋಚಿತವಾಗಿದೆ ಎಂದು ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.
ಭೈರಪ್ಪನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ನಾವು ಹಾಗೂ ಕೆಲವು ಸಂಘ–ಸAಸ್ಥೆಗಳ ಪರವಾಗಿ ಅವರನ್ನು ಸ್ವಗೃಹದಲ್ಲಿ ಭೇಟಿಯಾಗಿ ಸಾರ್ವಜನಿಕವಾಗಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲು ಮನವಿ ಮಾಡಿದ್ದೆವು. ಸಮಾರಂಭವನ್ನು ವಿನಮ್ರವಾಗಿ ನಿರಾಕರಿಸಿದರು. ಎನ್‌ಐಇ ಸಂಸ್ಥೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವಂತೆ ತಿಳಿಸಿದ್ದರು.
ಅದೇ ಸಂದರ್ಭದಲ್ಲಿ ಸ್ಮರಣೀಯ ಘಟನೆಯೊಂದನ್ನು ನಮ್ಮೊಂದಿಗೆ ಹಂಚಿಕೊAಡಿದ್ದರು. ಕಂತೆಮಠದ ಸ್ವಾಮೀಜಿಯವರು ಹೇಳಿದ್ದ ‘ಉತ್ಸವ ಮೂರ್ತಿ ಊರಾಡಿದಷ್ಟು ಮೂಲ ದೇವರ ಮಹಿಮೆ ಕಡಿಮೆಯಾಗುತ್ತದೆ’ ಎಂಬ ಮಾತು ಉಲ್ಲೇಖಿಸಿದ್ದರು.
ರಾಜ್ಯ ಸುತ್ತಿ ಮನ್ನಣೆ ಪಡೆಯುವುದಕ್ಕಿಂತ ನನ್ನ ಲೇಖನಿಯೇ ನನ್ನನ್ನು ಶಾಶ್ವತವಾಗಿ ಉಳಿಸುತ್ತದೆ ಎಂದು ನಂಬಿದ್ದ ಭೈರಪ್ಪನವರು ಸಾರ್ವಜನಿಕ ಸನ್ಮಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದನ್ನು ಹಂತಹAತವಾಗಿ ಕಡಿಮೆ ಮಾಡಿದ್ದರು.
ಭೈರಪ್ಪನವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತ ನಂತರ ನಾನು ಹಾಗೂ ನಮ್ಮ ಸ್ನೇಹ ಬಳಗ ಹಾಗೂ ಪ್ರಮತಿ ಶಾಲೆ ಹಲವಾರು ಸಂಘ–ಸAಸ್ಥೆಗಳ ಸಹಕಾರದೊಂದಿಗೆ ಕಲಾಮಂದಿರದಲ್ಲಿ ದೊಡ್ಡಮಟ್ಟದ ‘ವಂದನೇ ಅಭಿನಂದನೆ’ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದೆವು.
ಎಸ್.ಎಲ್. ಭೈರಪ್ಪನವರು ಸಾಹಿತ್ಯ ಲೋಕದ ಶಿಖರದೆತ್ತರದಲ್ಲಿ ನಿಂತ ಮಹಾನ್ ಲೇಖಕರು. ಅವರನ್ನು ಅನುಸರಿಸುವ ಲೇಖಕರು ಅವರ ದಾರಿಯಲ್ಲಿ ಸಾಗಿದರೆ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಸಾಧ್ಯವೆಂಬುದು ನನ್ನ ಹಂಬಲ. ಅವರ ಅಗಲಿಕೆ ನಮಗೂ ಹಾಗೂ ಸಂಪೂರ್ಣ ಸಾಹಿತ್ಯ ಲೋಕಕ್ಕೂ ತುಂಬಲಾರದ ನಷ್ಟವಾಗಿದೆ. ತಾಯಿ ಚಾಮುಂಡೇಶ್ವರಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಮತ್ತು ಅವರು ಪುನಃ ಈ ನೆಲದಲ್ಲೇ ಜನ್ಮ ತಾಳಲಿ ಎಂದು ಎಚ್.ವಿ.ರಾಜೀವ್ ಮೂಲಕ ಆಶಿಸಿದ್ದಾರೆ.
ಮೈಸೂರಿನಲ್ಲಿ ಎಸ್.ಎಲ್.ಭೈರಪ್ಪ ಸ್ಮಾರಕ: ಎಚ್.ವಿ.ರಾಜೀವ್ ಸ್ವಾಗತ
Leave a Comment
Leave a Comment
