ಪಬ್ಲಿಕ್ ಅಲರ್ಟ್
ಮೈಸೂರು: ಇಪಿಎಸ್- ೯೫ ರ ಅಡಿಯಲ್ಲಿನ ಪಿಂಚಣಿದಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಿಸಿ ಅ.೧೧ ಮತ್ತು ೧೨ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ದಕ್ಷಿಣ ಭಾರತ ಮಟ್ಟದ ಪಿಂಚಣಿದಾರರ ಧರಣಿ ನಡೆಯಲಿದೆ. ಇದರಲ್ಲಿ ಈ ಭಾಗದಿಂದ ಸುಮಾರು ೩ ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಮದು ರಾಷ್ಟಿçÃಯ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಎಂ. ಷಡಕ್ಷರಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಕನಿಷ್ಠ ಪಿಂಚಣಿ ೭೫೦೦ ರೂ.ಗೆ ಏರಿಸಬೇಕು. ಪಿಂಚಣಿದಾರರು ಮೃತಪಟ್ಟಲ್ಲಿ ವಿಧವೆಯರಿಗೆ ಶೇ. ೧೦೦ ರಷ್ಟು ಪಿಂಚಣಿ ನೀಡಬೇಕು. ಆರೋಗ್ಯ ಸೌಲಭ್ಯವ ಒದಗಿಸಬೇಕು. ಪಿಂಚಣಿ ಕುರಿತ ಸುಪ್ರೀಂಕೋರ್ಟ್ ಆದೇಶ ಜಾರಿಗೊಳಿಸಬೇಕು ಎಂಬಿವೇ ಮೊದಲಾದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದೆಂದರು.
ಈ ಧರಣಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಪಾಡಿಚೆರಿಗಳಿಂದಲೂ ಇಪಿಎಸ್ ಪಿಂಚಣಿದಾರರು ಪಾಲ್ಗೊಳ್ಳಲಿದ್ದಾರೆ. ದೇಸದಲ್ಲಿ ಯೋಜನೆ- ೯೫ ರ ಅಡಿಯಲ್ಲಿ ಸುಮಾರು ೭೮ ಲಕ್ಷ ಪಿಂಚಣಿದಾರರಿದ್ದಾರೆ. ಇವರಲ್ಲಿ ೨೦ ಸಾವಿರ ಮಂದಿ ವಿಧವಾ ಪಿಂಚಣಿದಾರರಾಗಿದ್ದಾರೆ. ರಾಜ್ಯಲದಲಿ ಬೃಹತ್ ಸಾರ್ವಜನಿಕ ಉದ್ದಿಮೆ, ಸರ್ಕಾರದ ನಿಗಮ ಮಂಡಳಿ, ಖಾಸಗಿ ಕಾರ್ಖಾನೆಗಳಿಂದ ನಿವೃತ್ತರಾದ ೬.೭೦ ಲಕ್ಷ ಪಿಂಚಣಿದಾರರಿದ್ದಾರೆ. ಆದರೆ ೨೦೧೪ ರಲ್ಲಿ ಕನಿಷ್ಠ ಪಿಂಚಣಿ ೧ ಸಾವಿರ ನಿಗದಿ ಮಾಡಿದ ಬಳಿಕ ಇದುವರೆಗೆ ಹೆಚ್ಚಳ ಮಾಡಿಲ್ಲ. ಹೀಗಾಗಿ ೩೦ ರಿಂದ ೩೫ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರೂ ಹಲವರು ಕೇವಲ ೧೧೭೫ ರೂ.ನಷ್ಟು ಪಿಂಚಣಿ ಪಡೆಯಬೇಕಾಗಿದೆ. ಇದು ಜೀವನ ನಿರ್ವಹಣೆಗೆ ಸಾಲುತ್ತಿಲ್ಲ. ಆದ್ದರಿಂದ ಹೆಚ್ಚಳಕ್ಕೆ ಆಗ್ರಹಿಸಿ ಈ ಧರಣಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಮೈಸೂರು- ಚಾಮರಾಜನಗ ಜಿಲ್ಲೆಗಳ ಪದಾಧಿಕಾರಿಗಳಾದ ಬಾಲಕೃಷ್ಣ, ಎಂ. ಬಸವರಾಜು, ಮಹದೇವು, ಮಹಮ್ಮದ್ ಗೌಸ್, ಚನ್ನಪ್ಪಾಜಿ, ಉಮೇಶ್ ಹಾಜರಿದ್ದರು.
