ಪಬ್ಲಿಕ್ ಅಲರ್ಟ್
ಮೈಸೂರು: ದಸರಾ ಮಹೋತ್ಸವ- 2025ರ ಲಲಿತಕಲೆ ಮತ್ತು ಕರಕುಶಲ ಸಮಿತಿಯಿಂದ ಕಾವಾ ಕಾಲೇಜು ಮೈದಾನದಲ್ಲಿ ಕೃತಕ ಹಕ್ಕಿಗಳು ಯಾವುದೇ ಸದ್ದು- ಗದ್ದಲ ಮಾಡದೇ ಪುಟಾಣಿಗಳ ಕಣ್ಮನ ಸೆಳೆಯುತ್ತಿವೆ.
ಹೌದು ಕಾವಾ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ತಂಡ ಮರವೊಂದಕ್ಕೆ 30ಕ್ಕೂ ಹೆಚ್ಚಿನ ಕೃತ ಹಕ್ಕಿಗಳನ್ನು ಕಟ್ಟಿ ಅದರ ದಾರ ಹಿಡಿದು ಎಳೆದರೆ ಹಕ್ಕಿ ಹಾರಾಟ ಮಾಡುವಂತೆ ಮಾಡಿದ್ದಾರೆ. ಇದು ಒಮ್ಮೆಲೇ ನೋಡುವುದಕ್ಕೆ ಸೊಗಸಾಗಿದ್ದರೆ ಮತ್ತೊಂದೆಡೆ ಮಕ್ಕಳ ಆಟಿಕೆಯಾಗಿಯೂ ಆಕರ್ಷಕವಾಗಿದೆ.
ಲಲಿತಕಲೆ ಮತ್ತು ಕರಕುಶಲ ಸಮಿತಿ ಕಾರ್ಯಾಧ್ಯಕ್ಷೆ ಹಾಗೂ ಕಾವಾ ಆಡಳಿತಾಧಿಕಾರಿ ಡಾ.ಎಸ್.ನಿರ್ಮಲ ಮಠಪತಿ ಕೃತಕ ಹಕ್ಕಿಗಳ ನೂತನಪ್ರಯತ್ನ ಅಭಿನಂದಿಸಿದ್ದಾರೆ. ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಉಪ ವಿಶೇಷಾಧಿಕಾರಿ ಹಾಗೂ ಪುರತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ, ಕಾವಾ ಕಾಲೇಜು ಡೀನ್ ಎ.ದೇವರಾಜು, ಸಮಿತಿ ಕಾರ್ಯದರ್ಶಿ ಕಾವಾ ಶಿಲ್ಪಕಲೆ ವಿಭಾಗದ ಮುಖ್ಯಸ್ಥ ಕೆ.ರಾಘವೇಂದ್ರ ಉಪಸ್ಥಿತರಿದ್ದರು.


