ಪಬ್ಲಿಕ್ ಅಲರ್ಟ್ ನ್ಯೂಸ್:-ಕೆ.ಆರ್.ನಗರ: ತಾಲ್ಲೂಕಿನ ಡೋರಹಳ್ಳಿಯ ಸುಪ್ರಸಿದ್ಧ ಹಾಗೂ ಪವಾಡ ಪುರುಷ ಸಂತ ಅಂಥೋಣಿಯವರ ವಾರ್ಷಿಕ ಜಾತ್ರಾ ಮಹೋತ್ಸವ
ಹಾಗೂ ಸಂತ ಅಂಥೋ ಣಿಯವರ ಬಸಿಲಿಕಾದ ತೇರಿನ ಮೆರವಣಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ ಬಹಳ ವಿಜೃಂಭಣೆಯಿಂದ ನಡೆಯಿತು.
ಮೈಸೂರು ಧರ್ಮಕ್ಷೇತ್ರದ ಡಾ.ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೊ ಎಸ್.ಜೆ.ಅವರು ಬೆಳಿಗ್ಗೆ ೧೦ ಗಂಟೆಯಲ್ಲಿ ಹಬ್ಬದ ಆಡಂಬರ ಗಾಯನ ಪೂಜೆಗೆ ಚಾಲನೆ ನೀಡಿದರು.
ಡೋರಹಳ್ಳಿ ಚರ್ಚ್‌ನ ಧರ್ಮಗುರು ಡೇವಿಡ್ ಸಗಾಯರಾಜ್, ಕೊಲ್ಕತ್ತಾ ಧರ್ಮಗುರು ರಾಬರ್ಟ್ ಗ್ರೆಗೋರಿ ಮೊಂಅತ್ಯಂತ ಬೋಗಾದಿಯ ಧರ್ಮಗುರು ವ್ಯಾಲೆಂಟೆನ್ ರಾಜೇಂದ್ರ ಕುಮಾರ್, ಮೈಸೂರು ರೆಕ್ಟರ್ ಪ್ರಭೋದನಾ ಗುರು ಥಾಮಸ್ ಮಂಜಲಿ, ಗಂಜಾಂ ಅಮಲೋದ್ಬವ ಮಾತೆಯ ದೇವಾಲಯದ ಧರ್ಮಗುರು ಅಂತೋಣಪ್ಪ.ಜೆ. ಬೆಂಗಳೂರಿನ ಮಾಹ ಧರ್ಮ ಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷ ಡಾ.ಜೋಸೆಫ್ ಸೂಸೈನಾಥನ್, ಬೋಗಾದಿಯ ಕೃಪಾಲಯ ಗುರುಮಠ ಅಲೆಕ್ಸಾಂಡರ್ ಡ್ಯಾನಿಯೇಲ್, ಹನೂರು ಆರೋಗ್ಯ ಮಾತೆ ದೇವಾಲಯದ ಧರ್ಮಗುರು ಸಂಜಯ್ ಕುಮಾರ್. ಎಫ್, ಮಾದಾಪುರ ನಿರ್ಮಲ ಮಾತೆ ದೇವಾಲಯದ ಧರ್ಮಗುರು ಸೂಸೈ.ಎ., ಹಾಗೂ ನಂಜನಗೂಡು ಬಾಲ ಯೇಸು ದೇವಾಲಯದ ಧರ್ಮಗುರು ಮೈಕಲ್ ಮರಿ.ಎಂ.ಅವರುಗಳು ಹಬ್ಬದ ಆಡಂಬರ ಗಾಯನ ಬಲಿಪೂಜೆ ನಡೆಸಿಕೊಟ್ಟರು.
ಬಳಿಕ ಸಂಜೆ ೬ ಗಂಟೆಗೆ ಚರ್ಚ್ ಮುಂಭಾಗದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಸಂತ ಅಂಥೋಣಿಯವರ ವೈಭವದ ತೇರಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಂತ ಆಂಥೋಣಿ ಬಸಿಲಿಕಾ ಚರ್ಚ್‌ನ ಆಡಳಿತಾಧಿಕಾರಿ ಪ್ರವೀಣ್ ಪದ್ರು ಹಾಗೂ ಧರ್ಮಗುರು ಡೇವಿಡ್ ಸಗಾಯರಾಜ್ ಅವರು ಜಾತ್ರಾ ಮಹೋತ್ಸವದ ನೇತೃತ್ವವನ್ನು ವಹಿಸಿದ್ದರು.
ಐತಿಹಾಸಿಕ ಮತ್ತು ಪವಾಡ ಪುರುಷ ಎಂದೇ ಹೆಸರುವಾಸಿಯಾದ ಡೋರನಹಳ್ಳಿ ಸಂತ ಅಂಥೋಣಿಯವರ ವಾರ್ಷಿಕ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಜನರು ಆಗಮಿಸಿದ್ದರು.
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರು – ಅರಸೀಕೆರೆ ರೈಲುಗಾಡಿಗಳನ್ನು ಮೂರು ದಿನದವರೆಗೆ ಡೋರ್ನಹಳ್ಳಿ ರೈಲು ನಿಲ್ದಾಣದಲ್ಲಿ ಎಲ್ಲಾ ರೈಲುಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡುವುದರ ಜೊತೆಗೆ ಮೈಸೂರು ಮತ್ತು ಕೆ.ಆರ್.ನಗರದಿಂದ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿದ್ದು ಕಳೆದ ವಾರದಿಂದ ಆರಂಭವಾಗಿದ್ದ ಸಂತ ಅಂತೋಣಿ ಬಸಿಲಿಕಾ ಅವರ ವಾರ್ಷಿಕ ಮಹೋತ್ಸವದಲ್ಲಿ ಲಕ್ಷಾಂತರ ಜನರು,ಭಕ್ತಾದಿಗಳು ಆಡಂಬರದ ಗಾಯನ ಪೂಜೆ ವೀಕ್ಷಿಸಿ ಅಂಥೋಣಿಯವರ ದರ್ಶನ ಪಡೆದರು. ಕೆ.ಆರ್.ನಗರ ಪೊಲೀಸ್ ಇನ್ ಪೆಕ್ಟರ್ ಶಿವಪ್ರಕಾಶ್ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಆರ್.ನಗರ: ತಾಲ್ಲೂಕಿನ ಡೋರಹಳ್ಳಿಯ ಸುಪ್ರಸಿದ್ಧ ಹಾಗೂ ಪವಾಡ ಪುರುಷ ಸಂತ ಅಂಥೋಣಿಯವರ ವಾರ್ಷಿಕ ಜಾತ್ರಾ ಮಹೋತ್ಸವ
Leave a Comment
Leave a Comment
