ಪಬ್ಲಿಕ್ ಅಲರ್ಟ್
ಮದ್ದೂರು,ಸೆ.8- ಗಣೇಶ ಮೂರ್ತಿ ವಿಜರ್ಸನೆ ವೇಳೆ ಹಿಂದೂ ಮುಸ್ಲಿಂ ಗಲಭೆ ಸಂಭವಿಸಿ ಸುಮಾರು 10 ಜನಕ್ಕೆ ಗಾಯವಾಗಿರುವ ಘಟನೆ ನಡೆದಿದೆ.
ಪಟ್ಣಣದ ಕಾವೇರಿ ನಗರದ 6 ನೇ ಕ್ರಾಸ್ ನ ಪ್ರತಿಷ್ಟಾಪನೆ ಮಾಡಿದ್ದ ಗಣೇಶ ಮೂರ್ತಿಯನ್ನು ಯುವಕರ ತಂಡ ವಿರ್ಸಜನೆ ಮಾಡುವ ಉದ್ದೇಶದಿಂದ ಭಾನುವಾರ ರಾತ್ರಿ ಧ್ವನಿವರ್ಧಕ ಹಾಕಿಕೊಂಡು ಸುಮಾರು 70 ರಿಂದ 80 ಯುವಕರು ತಂಡ ನೃತ್ಯ ಮಾಡಿಕೊಂಡು ಮೆರವಣಿಗೆ ಸಿದ್ದಾರ್ಥನಗರ ಕಡೆಗೆ ಬರುತ್ತಿದ್ದಾಗ ರಾತ್ರಿ 7 ಗಂಟೆ ಸಮಯದಲ್ಲಿ ಬರುತ್ತಿದ್ದಾಗ ಪೌರ ಕಾರ್ಮಿಕ ಕಾಲನಿ ಮಧ್ಯೆಯಿರುವ ಮಸೀದಿ ಬಳಿಯಿರುವ ಅಕ್ಮಲ್ ಗುಜರಿ ಅಗಂಡಿ ಬಳಿ ಬರುತ್ತಿದಾಗ ಮುಸ್ಲಿಂ ಯುವಕರು ಏಕಾ ಏಕಿ ಗಣೇಶನ ಮೂರ್ತಿ ಪ್ರತಿಷ್ಟಾಪನೆ ಮಾಡುತ್ತಿದ್ದ ಯುವಕರ ಮೇಲೆ ಕಲ್ಲು ತೂರಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಇಬ್ಬರಿಗೆ ತಲೆಗೆ ಹಾಗೂ 8 ಮಂದಿಗೆ ಹಿಂದು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ನಂತರ ಸ್ಥಳದಲ್ಲಿದ್ದವರು ಗಾಯಾಳುಗಳನ್ನು ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಅಸ್ಪತ್ರೆಗೆ ರವಾನಿಸಿದ್ದಾರೆ.
ಈ ಮಧ್ಯೆ ಘಟನೆಯಿಂದ ರೋಸಿಗೊಂಡ ಹಿಂದು ಯುವಕರು ಮುಸ್ಲಿಂ ಯುವಕರ ಮೇಲೂ ಪ್ರತಿಯಾಗಿ ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ಮುಸ್ಲಿಂ ಜನಾಂಗ ಚಿಕ್ಕ ಮಗುಗೆ ಸಣ್ಣಪ್ರಮಾಣದಲ್ಲಿ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಗಲಭೆ ಖಂಡಿಸಿ 2 ಕೋಮಿನವರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಘಟನೆಯಿಂದ ಪಟ್ಟಣದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು ಪಟ್ಟಣದ ಜನರಲ್ಲಿ ಆತಂಕ ಮನೆ ಮಾಡಿದೆ.
ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ. ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ತಿಮ್ಮಯ್ಯ, ಗಂಗಾಧರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಸದ್ಯಕ್ಕೆ ಹತೋಟಿಗೆ ತಂದಿದ್ದಾರೆ. ಜತೆಗೆ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮುಸ್ಲಿಂ ಯುವಕರು ಕಲ್ಲು ತೂರಾಟವಾದ ಸಂದರ್ಭದಲ್ಲಿ 4 ಮಂದಿ ಹೋಂ ಗಾಡ್ ಪೊಲೀಸರಿಗೂ ಜತೆಗೆ ಈ ವೇಳೆ ಕೆಲವರ ಹಣ ಕೂಡ ಪಿಕ್ ಪ್ಯಾಕೆಟ್ ಆಗಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಯಾವಾಗ ಬೇಕಾದರು ಮತ್ತೆ ಘರ್ಷಣೆ ಸಂಭವಿಸುವ ಸಾಧ್ಯತೆ ಇರುವುರಿಂದ ಪೊಲೀಸರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು 2 ಕೋಮಿನ ಮುಖಂಡರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಪೊಲೀಸರಿಂದಲೇ ಗಣೇಶನ ಮೂರ್ತಿ ವಿಸರ್ಜನೆ: ಘಟನೆಯಿಂದ ಹಲವಾರು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆ ಬಂದ ಹಿನ್ನೆಲೆಯಲ್ಲಿ ಪೊಲೀಸರೇ ಬಿಗಿ ಭದ್ರತೆಯಲ್ಲಿ ಶಿಂಷಾನದಿಯಲ್ಲಿ ಗಣೇಶನ ಮೂರ್ತಿ ವಿಸರ್ಜನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. ಘಟನೆ ಖಂಡಿಸಿ ಹಿಂದು ಯಕವಕರು ಪಟ್ಟಣದ ಕೆಮ್ಮಣ್ಣು ನಾಲೆ ಸರ್ಕಲ್ ಬಳಿ ಪ್ರತಿಭಟನೆ ಮಾಡಿದರು.
