ಪಬ್ಲಿಕ್ ಅಲರ್ಟ್
ಮೈಸೂರು: ನಾಡಹಬ್ಬ ದಸರೆಯ ಅಂಗವಾಗಿ ನಗರದ ಬನ್ನಿಮಂಟಪದಲ್ಲಿ ಆಯೋಜಿಸಿದ್ದ ಏರ್ ಶೋ ನ ಪೂರ್ವ ತಾಲೀಮು ಮಂಗಳವಾರ ಯಶಸ್ವಿಯಾಗಿ ನಡೆಯಿತು.
೩೦ ನಿಮಿಷಗಳ ಕಾಲ ೧೦ಕ್ಕೂ ಹೆಚ್ಚು ಪ್ರದರ್ಶನ ನೀಡಿದ ೮ ಲೋಹದ ಹಕ್ಕಿಗಳ ನರ್ತನ ಕಂಡ ಜನ ನಿಬ್ಬೆರಗಾದರು. ಲೋಹದ ಹಕ್ಕಿಗಳು ಒಮ್ಮೆಲೆ ಆಗಮಿಸಿ ರಾಷ್ಟ್ರಧ್ವಜದ ಬಣ್ಣವನ್ನು ಆಕಾಶದಲ್ಲಿ ಮೂಡಿಸಿದ್ದು, ಒಮ್ಮೆಲೆ ಹೃದಯದ ಮಾದರಿ ಸೇರಿ ಅನೇಕ ಪ್ರದರ್ಶನ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದವು.








