ಧರ್ಮರಕ್ಷಣೆಯಲ್ಲಿ ಶ್ರೀಮಠದ ಕಾರ್ಯ ಶ್ಲಾಘನೀಯ:  ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

Pratheek
4 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಾಡಿನಲ್ಲಿ ಸ್ಥಾಪನೆಯಾಗಿರುವ ಶ್ರೀಮಠಗಳಿಂದ ಧರ್ಮದ ರಕ್ಷಣೆಯ ಕಾರ್ಯ ಅವಿರತವಾಗಿ ನಡೆಯಯುತ್ತಿದೆ ಎಂದು ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಭಿಪ್ರಾಯ ಪಟ್ಟರು.
ನಗರದ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಶುಕ್ರವಾರ ನಡೆದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಸುದೈವ ಕುಟುಂಬಕಂ ಎಂಬ ನೀತಿಯಡಿ ಶ್ರೀ ಮಠಗಳು ಕೆಲಸ ಮಾಡುತ್ತಿವೆ. ಜಾತಿ-ಮತ-ಧರ್ಮದ ಬೇಧವಿಲ್ಲದೇ ಅನೇಕ ರಾಷ್ಟ್ರಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ವಿಸ್ತರಿಸಿವೆ. ಜೊತೆಗೆ ಧರ್ಮದ ರಕ್ಷಣೆಯ ಕೆಲಸ ಮಾಡುತ್ತಿವೆ ಎಂದರು.
ಪ್ರಸ್ತುತ ದಿನದಲ್ಲಿ ವಿಶ್ವದ ಬಲಾಢ್ಯ ರಾಷ್ಟ್ರಗಳು ಎಲ್ಲವನ್ನೂ ಸಾಧಿಸಿರಬಹುದು. ಆದರೆ ಅವುಗಳಿಗೆ ಸಾವಿರಾರು ವರ್ಷಗಳ ಹಿಂದೆ ಜ್ಞಾನವನ್ನು ನೀಡುವ ಕೆಲಸ ಮಾಡಿದ್ದು ಭಾರತ ಎನ್ನುವುದು ಹೆಮ್ಮೆಯ ವಿಚಾರ. ನಮ್ಮ ಸಂಸ್ಕೃತಿ-ವಿಚಾರಕ್ಕೆ ಎಲ್ಲೆ ಇಲ್ಲ. ಮಿತಿಯೂ ಇಲ್ಲ. ಇಡೀ ವಿಶ್ವವನ್ನು ಸಹೋದರ ಭಾವನೆಯಿಂದ ಕಾಣುತ್ತೇವೆ. ಇದಕ್ಕೆ ಕಾರಣ ನಮ್ಮ ಧರ್ಮದ ಮಠ-ಮಾನ್ಯಗಳು, ಸ್ವಾಮೀಜಿಗಳು ಹಾಕಿಕೊಟ್ಟಿರುವ ಸನ್ಮಾರ್ಗ. ಅವರು ಹೇಳಿಕೊಟ್ಟಿರುವ ಸದಾಚಾರ ವಿಚಾರಗಳು ಎಂದರು. ಸುತ್ತೂರು ಶ್ರೀಮಠವು ಜನರ ಸೇವೆಯೇ ಜನಾರ್ಧನನ ಸೇವೆ ಎಂಬುದನ್ನು ತೋರಿಸಿಕೊಟ್ಟಿದೆ. ಸಾವಿರ ವರ್ಷಗಳ ಹಿಂದೆ ಬೀಜಾಂಕುರವಾದ ಸುತ್ತೂರು ಶ್ರೀ ಮಠ ಇಂದು ಹೆಮ್ಮರವಾಗಿ ಬೆಳೆದಿದೆ. ಅಂದಿನಿಂದ ಇಂದಿನವರೆಗೂ ಮಠದ ಸೇವಾ ಕಾರ್ಯ ಮುಂದುವರಿಯುತ್ತಿದೆ. ರಾಜೇಂದ್ರ ಶ್ರೀಗಳು ತಮ್ಮ ಅನನ್ಯ ಸೇವೆಯ ಮೂಲಕವೇ ಹೊಸ ಭಾಷ್ಯ ಬರೆದಿದ್ದಾರೆ. ಶ್ರೀಮಠದಿಂದ ೪೦೦ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಗಳು ಮೆಡಿಕಲ್ ಕಾಲೇಜು ಆರಂಭಿಸಲು ಕಷ್ಟ ಪಡುತ್ತಿದ್ದ ಕಾಲದಲ್ಲಿ ಸುತ್ತೂರು ಮಠ ಅದನ್ನು ಸಾಧಿಸಿ ತೋರಿಸಿದೆ. ಸರ್ಕಾರ ಮಾಡಲಾಗದ ಅನೇಕ ಕಾರ್ಯಗಳನ್ನು ಮಠ ಮಾಡುತ್ತಿದೆ. ಶ್ರೀ ಮಠ ಮೈಸೂರಿನ ಮೂಲಕ ವಿಶ್ವಕ್ಕೆ ಸಂದೇಶವನ್ನು ನೀಡಿದೆ ಎಂದರು.
ರಾಜಕೀಯವು ಬಿಜೆಪಿ, ಕಾಂಗ್ರೆಸ್, ಜಾ.ದಳ ಎಂದು ಪ್ರತ್ಯೇಕಿಸಿದರೆ, ಧರ್ಮವು ಎಲ್ಲರನ್ನೂ ಒಂದುಗೂಡಿಸುತ್ತದೆ ಎಂಬುದಕ್ಕೆ ಇಲ್ಲಿರುವ ಶಾಸಕರೇ ಸಾಕ್ಷಿ. ಏಕೆಂದರೆ ಭಾರತವು ಒಂದು ಧರ್ಮ ರಾಜ್ಯ. ಶಿಕ್ಷಣವೇ ಸವಾಜಕ್ಕೆ ನೀಡುವ ಶ್ರೇಷ್ಠ ಸೇವೆ ಎಂದು ರಾಜೇಂದ್ರ ಶ್ರೀಗಳು ನಂಬಿದ್ದರು ಮತ್ತು ಅದರಲ್ಲಿ ದೃಢವಾದ ವಿಶ್ವಾಸ ಹೊಂದಿದ್ದರು. ಇಂತಹ ಸಮಾಜಮುಖಿ ಭಾವನೆಯೊಂದಿಗೆ ರಾಜೇಂದ್ರ ಶ್ರೀಗಳು ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾನಿಲಯಗಳನ್ನೊಳಗೊಂಡ ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದಾಗಿ ಹೇಳಿದರು. ಲಕ್ಷಾಂತರ ಬಡ ಮತ್ತು ಗ್ರಾಮೀಣ ಅಕ್ಷರ ವಂಚಿತ ಮಕ್ಕಳಿಗೆ ಶಿಕ್ಷಣ ಪಡೆುುಂವ ಅವಕಾಶವಾಯಿತು. ಇಂದು ಅವರು ಸ್ಥಾಪಿಸಿದ ಸಂಸ್ಥೆಗಳು ಜ್ಞಾನದ ದಾರಿ ದೀಪಗಳಾಗಿವೆ. ಇಲ್ಲಿ ಶಿಕ್ಷಣ ಪಡೆದ ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು ಮತ್ತು ನಾುಂಕರುಗಳು ಉತ್ತಮ ಸಂಸ್ಕಾರವಂತ ವ್ಯಕ್ತಿಗಳಾಗಿ ರೂಪುಗೊಂಡು ದೇಶ ಮಾತ್ರವಲ್ಲದೆ, ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
‘ಪ್ರಸಾದ’ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಾರತೀಯ ಮತ್ತು ಸನಾತನ ಪರಂಪರೆ ಉಳಿಯುತ್ತಿರುವುದು ನಮ್ಮ ಮಠ ಮಾನ್ಯಗಳಿಂದ ಅನ್ನ, ಅಕ್ಷರ, ಆರೋಗ್ಯಕ್ಕೆ ಹೆಸರಾದ ಸುತ್ತೂರು ಸಂಸ್ಥೆಗೂ ಜಯಚಾಮರಾಜ ಒಡೆಯರ್ ಅವರಿಗೂ ಅವಿನಾಭಾವ ಸಂಬಂಧ ಇತ್ತು. ಅಂದಿನಿಂದಲೂ ಅರಮನೆಗೂ ಶ್ರೀಮಠಕ್ಕೂ ಉತ್ತಮ ಸಂಬಂಧ ಮುಂದುವರಿದಿರುವುದು ಹೆಮ್ಮೆಯ ವಿಷಯ. ಇಡೀ ಕರ್ನಾಟಕದಲ್ಲಿ ಸಂಸ್ಥೆಗೆ ಒಳ್ಳೆಯ ಹೆಸರಿದ್ದು, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಅನೇಕರಿಗೆ ಶ್ರೀಮಠವು ಆಶ್ರಯವಾಗಿದೆ ಎಂದು ಹೇಳಿದರು.
ವಿಕಸಿತ ಭಾರತ ಆರ್ಥಿಕವಾಗಿ ಉತ್ತಮವಾಗಿ ಇರಬೇಕು. ಸಬ್ ಕಾ ಸಾಥ್ ಸಬ್‌ಕಾ ವಿಕಾಸ್ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಯಂತೆ ಸಬ್‌ಕಾ ವಿರಾಸತ್ ಕೂಡ ಮುಖ್ಯ. ಅಂತಹ ಪರಂಪರೆಯ ರಕ್ಷಣೆ ಮಠಗಳಲ್ಲಿ ಮಾತ್ರ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಧರ್ಮದ ವಿಷಯದಲ್ಲಿ ಏನೆಲ್ಲಾ ಬೆಳವಣಿಗೆ ಆಗುತ್ತಿದೆ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಸೂಚ್ಯವಾಗಿ ನುಡಿದ ಅವರು, ರೈತರ ಸಬಲೀಕರಣಕ್ಕೂ ಕೂಡ ಶ್ರೀಮಠ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.
ಈ ಹಿಂದೆ ಕೃಷಿಗೆ ೨೭,೬೬೩ ಕೋಟಿ ರೂ. ಬಜೆಟ್ ನಲ್ಲಿ ಮೀಸಲಿಡಲಾಗುತ್ತಿತ್ತು. ಆದರೆ ಮೋದಿ ಅವರು ಪ್ರಧಾನಿ ಆದ ಮೇಲೆ ೧,೦೮,೬೬೪ ಕೋಟಿ ಮೀಸಲಿಟ್ಟಿದೆ. ದೇಶದ ಅಭಿವೃದ್ಧಿಯ ಯಂತ್ರ ಕೃಷಿ ಮಾತ್ರ ಎಂಬುದು ಪ್ರಧಾನಿಯವರಿಗೆ ಗೊತ್ತಿದೆ ಎಂದು ಅವರು ಹೇಳಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಾಸಕರಾದ ಜಿ.ಟಿ.ದೇವೇಗೌಡ, ಶ್ರೀವತ್ಸ, ದರ್ಶನ್‌ ದ್ರುವನಾರಾಯಣ್‌, ಅನಿಲ್‌ ಚಿಕ್ಕಮಾದು, ಎನ್‌.ಆರ್‌.ಕೃಷ್ಣಮೂರ್ತಿ, ಗಣೇಶ್‌ ಪ್ರಸಾದ್‌ ಇನ್ನಿತರರು ಉಪಸ್ಥಿತರಿದ್ದರು.


————–
ಬಾಕ್ಸ್‌
ಭಾರತ ವಿಶ್ವದ ಆಹಾರ ಬುಟ್ಟಿಯಾಗಿದೆ: ಶಿವರಾಜ್ ಸಿಂಗ್ ಚೌಹಾಣ್
ಮೈಸೂರು: ಇತ್ತೀಚೆಗೆ ವಿದೇಶಿ ಸುಂಕಗಳ ಹೆಚ್ಚಳದಿಂದಾಗಿ ರೈತರು, ಉತ್ಪಾದಕರು, ರಫ್ತುದಾರರು ಸೇರಿದಂತೆ ಇನ್ನಿತರ ಸಹವರ್ತಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರಣದಿಂದ ಪರ ದೇಶಗಳ ಅವಲಂಬನೆ ತಗ್ಗಿಸುವ ಕೆಲಸವಾಗಬೇಕಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.
ವಿದೇಶಗಳಿಂದ ಕೃಷಿ ಪದಾರ್ಥಗಳ ಆಮದು ತಪ್ಪಿಸಲು ನಮ್ಮ ದೈನಂದಿನ ಅಗತ್ಯತೆಗಳನ್ನು ನಾವೇ ಉತ್ಪಾದಿಸಿಕೊಳ್ಳಬೇಕು. ನಾವೇ ಬೀಜವನ್ನು ಬಿತ್ತಬೇಕು. ನಾವೇ ಬೆಳೆಯಬೇಕು. ನಮ್ಮ ಅವಶ್ಯಕತೆುಂನ್ನು ಪೂರೈಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ಕೃಷಿ ಕಾರ್ಯವನ್ನು ದೊಡ್ಡ ಹಿಡುವಳಿಯಲ್ಲಿ ಮಾಡುತ್ತಾರೆ. ಒಬ್ಬೊಬ್ಬರೂ ಸಾವಿರ ಎಕರೆ, ಎರಡು ಸಾವಿರ ಎಕರೆ ಜಮೀನಿನಲ್ಲಿ ಕೃಷಿುಂನ್ನು ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಒಬ್ಬರಿಗೆ ಎರಡು ಎಕರೆ ಇದ್ದರೆ ಹೆಚ್ಚು. ಅದರಲ್ಲಿ ಕೃಷಿುಂನ್ನು ವಾಡಿ ರೈತ ತನಗೆ ಬಳಕೆ ವಾಡಿಕೊಂಡು ಲಾಭ ಮಾಡುವುದು ದೂರದ ಮಾತೇ ಸರಿ. ಆದ್ದರಿಂದ ಎಲ್ಲರೂ ಒಳಗೊಳ್ಳುವಿಕೆ (ಇಂಟಿಗ್ರೇಟೆಡ್ ಫಾರ್ಮಿಂಗ್) ಮೂಲಕ ಸಾಮೂಹಿಕ ಬೇಸಾಯ ಕ್ರಮವನ್ನು ಅನುಸರಿಸುವ ಅಗತ್ಯವಿದೆ. ತನ್ಮೂಲಕ ಅವರು ಕೃಷಿಯಿಂದ ವಿಮುಖರಾಗದಂತೆ ೋಂಜನೆ ರೂಪಿಸಬೇಕಾಗಿದೆ ಎಂದರು.
ದಶಕಗಳ ಹಿಂದೆ ಭಾರತ ದೇಶವೂ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ನಾವೇ ಅಕ್ಕಿುಂನ್ನು ಹೆಚ್ಚು ಉತ್ಪಾದನೆ ಮಾಡುತ್ತಿದ್ದೇವೆ. ಈಗ ಭಾರತವೂ ವಿಶ್ವದ ಆಹಾರದ ಬುಟ್ಟಿಾಂಗಿ ವಾರ್ಪಾಡು ಹೊಂದಿದೆ. ಹೀಗಾಗಿ ಉತ್ಪಾದಕತೆಯನ್ನು ಹೆಚ್ಚು ಮಾಡಿ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗುವಂತೆ ಮಾಡಬೇಕಾಗಿರುವ ಜರೂರು ಇದೆ ಎಂದರು.

TAGGED:
Share This Article
Leave a Comment