ಪಬ್ಲಿಕ್ ಅಲರ್ಟ್
ಕೋಲಾರ,ಆ.30- ತಾಲೂಕಿನ ನರಸಾಪುರ ಗ್ರಾಮದ ಶನಿ ಮಹಾತ್ಮ ಸ್ವಾಮಿ ನಗರದಲ್ಲಿ 18ನೇ ವರ್ಷದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.
ಗಣೇಶೋತ್ಸವದ ಅಂಗವಾಗಿ ಗಜಪಡೆ ವಿನಾಯಕ ಯುವಕರ ಬಳಗದವರು ನರಸಾಪುರ ಗ್ರಾಮದ ಶನಿ ಮಹಾತ್ಮ ಸ್ವಾಮಿ ನಗರದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಮುನಿ, ಕೌಶಿಕ್, ಸುಹಾನ್, ಸಂತು, ಮನು, ಹೇಮಂತ್, ಮಂಜು, ಸೀನಾ, ವಿಜಯ್, ವಿಷ್ಣು, ರಂಜಿತ್, ಹಾಗೂ ನಗರದ ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು.
ಗಜಪಡೆ ವಿನಾಯಕ ಯುವಕರ ಬಳಗದಿಂದ 18ನೇ ವರ್ಷದ ಗಣೇಶೋತ್ಸವ

Leave a Comment
Leave a Comment