ಸಿಎಂ ಜಿಲ್ಲೆಯಲ್ಲೇ 2 ಕೋಟಿ ಮೌಲ್ಯದ ನಕಲಿ ಹನ್ಸ್ ವಶಕ್ಕೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಿಎಂ ತವರಲ್ಲಿ ಎರಡು ಕೋಟಿ ರೂ.ಗೂ ಅಧಿಕ ಮೌಲ್ಯದ ನಕಲಿ ಹನ್ಸ್( ತಂಬಾಕು) ವಶಕ್ಕೆ ಪಡೆಯಲಾಗಿದೆ.
ಮೈಸೂರಿನ ಜಿಲ್ಲೆ ಹೆಚ್.ಡಿ ಕೋಟೆ ಹಾಗೂ ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ‌ ಭೇಟೆ ನಡೆಸಿದ್ದು ಹೆಚ್.ಡಿ ಕೋಟೆಯ ಮದ್ದೂರು ಪಟ್ಟಣದಲ್ಲಿ ಎರಡು ಕೋಟಿಗೂ ಅಧಿಕ ಮೌಲ್ಯದ ಹನ್ಸ್  ವಶಕ್ಕೆ ಪಡೆದಿದ್ದಾರೆ.

ಬೆಟ್ಟಹಳ್ಳಿ ಸರ್ವೇ 1/17, 18 ರ್ಯಾಲಿ ನಕಲಿ ಹನ್ಸ್ ತಯಾರಿಕ ಘಟಕದ ಮೇಲೆ ಪೊಲೀಸರು  ದಾಳಿ ನಡೆಸಿ ಈ ಕಾರ್ಯಾಚರಣೆ ಮಾಡಿದ್ದು , ಎ1 ಶೈನ್ ಪ್ರಸಾದ್ , ಎ2 ಪ್ರಭುಸ್ವಾಮಿ, ಎ3 ಅಶ್ವಿನಿ ಕೆ.ಶೈನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಸ್ಥಳದಲ್ಲಿ  75 ಲಕ್ಷ ಮೌಲ್ಯದ 3 ಹನ್ಸ್ ಪ್ಯಾಕೆಟ್ ತಯಾರು ಮಾಡುವ ಮಿಷನ್ ಗಳು, 16 ಸಾವಿರ ಮೌಲ್ಯದ ಚೀಲ ಹೊಲಿಗೆ ಹಾಕುವ 2 ಮಿಷನ್ , 96 ಸಾವಿರದ 4 ಹನ್ಸ್ ಪ್ಯಾಕೇಜ್ ಚೀಲಗಳು, ಹಳೆಯ ಹನ್ಸ್ ಪ್ಯಾಕೆಟ್ ಚೀಲಗಳು 146 (ಮೌಲ್ಯ 17 ಲಕ್ಷದ 57 ಸಾವಿರ), 20 ಲೀಟರ್ ಅಳತೆಯ ಟಿಪಿಆರ್ ಕೆಮಿಕಲ್ ಕ್ಯಾನ್ (ಮೌಲ್ಯ 8.40 ಲಕ್ಷ), ಲೇಬಲ್ ರೋಲ್ ,ಸಣ್ಣ ಸಣ್ಣ ಪ್ಯಾಲೆಟ್ ರೋಲ್,  2 ಲಕ್ಷ ಮೌಲ್ಯದ, ಕೆಂಪು ಬಣ್ಣದ ಹನ್ಸ್ ಪ್ಯಾಕೆಟ್  ಪೇಪರ್ 6 ಚೀಲ, ನೀಲಿ ಬಣ್ಣದ ಹನ್ಸ್ ಪ್ಯಾಕೆಟ್ ತುಂಬವ ಎರಡು ಪ್ಲಾಸ್ಟಿಕ್ ಚೀಲ (87 ಸಾವಿರ), ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ

TAGGED:
Share This Article
Leave a Comment